
#1 ಶಿಖರ್ ಧವನ್
ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಕಳೆದ ಮೂರು ಏಕದಿನ ಪಂದ್ಯಗಳಲ್ಲಿ 2,5 ಹಾಗೂ 4 ರನ್ ಮಾತ್ರ ಗಳಿಸಿದ್ದು, ಟಿ20ಐ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

# 2 ಅಜಿಂಕ್ಯ ರಹಾನೆ
ಬಲಗೈ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರು ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದು, 336ರನ್ ಗಳಿಸಿದ್ದಾರೆ. 2015-16ರಲ್ಲಿ ರೋಹಿತ್ ಶರ್ಮ ಅವರು 441 ರನ್ ಗಳಿಸಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಅಜಿಂಕ್ಯ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.

3. ವಿರಾಟ್ ಕೊಹ್ಲಿ
ನಾಯಕ ವಿರಾಟ್ ಕೊಹ್ಲಿ ಅವರು ಉತ್ತಮ ಲಯದಲ್ಲಿದ್ದು, 18ನೇ ಶತಕ (ಚೇಸಿಂಗ್ ನಲ್ಲಿ) ಹಾಗೂ ಒಟ್ಟಾರೆ 28ನೇ ಶತಕ ಬಾರಿಸಿರುವ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು ಮುಕ್ತಾಯಗೊಳಿಸುವ ನಿರೀಕ್ಷೆಯಿದೆ.

4. ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಅವರು ಫಿಟ್ ಇದ್ದರೆ ತಂಡಕ್ಕೆ ಸಹಜವಾಗಿ ಆಯ್ಕೆಯಾಗುತ್ತಾರೆ. ಇಲ್ಲದಿದ್ದರೆ, ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಅವರಿಗೆ ಅವಕಾಶ ಸಿಗಬಹುದು.

5 ಎಂಎಸ್ ಧೋನಿ
36 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು ತಂಡಕ್ಕೆ ಸಹಜವಾಗಿ ಆಯ್ಕೆಯಾಗಲಿದ್ದಾರೆ.

6 ಕೇದಾರ್ ಜಾಧವ್
ಆಫ್ ಸ್ಪಿನ್ನರ್ ಆಗಿ ಬೆಳೆಯುತ್ತಿರುವ ಕೇದಾರ್ ಜಾಧವ್ ಅವರು ಬ್ಯಾಟ್ಸ್ ಮನ್ ಆಗಿ ಮಿಂಚಬೇಕಿದೆ.

7. ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಬೇಕಿದೆ.

8 ರವೀಂದ್ರ ಜಡೇಜ
ಎಡಗೈ ಸ್ಪಿನ್ನರ್ ಆಗಿ ರವೀಂದ್ರ ಜಡೇಜ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಕೆಳ ಕ್ರಮಾಂಕದಲ್ಲಿ ಉತ್ತಮ ಫಲಿತಾಂಶ ನೀಡಬೇಕಿದೆ.

9. ಆರ್ ಅಶ್ವಿನ್
ಭಾರತದ ಸ್ಟ್ರೈಕ್ ಬೌಲರ್ ಆಗಿರುವ ಆರ್ ಅಶ್ವಿನ್ ಅವರು ಕ್ರಿಸ್ ಗೇಲ್ ವಿರುದ್ಧ ಪ್ರದರ್ಶನ ನೀಡಿರುವ ದಾಖಲೆ ಹೊಂದಿರುವುದರಿಂದ ಭಾನುವಾರದ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

10 ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ ಅವರು ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ಟಿ20 ಪಂದ್ಯಕ್ಕೆ ಸಹಜವಾಗಿ ಆಯ್ಕೆಯಾಗಲಿದ್ದಾರೆ.

11 ಶಮಿ
ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿರುವ ಮೊಹಮ್ಮದ್ ಶಮಿ ಅವರು ಟಿ20 ಪಂದ್ಯಕ್ಕೆ ಸಹಜವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ.


Click it and Unblock the Notifications