For Quick Alerts
ALLOW NOTIFICATIONS  
For Daily Alerts
 

5ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ XI

ತಿರುವನಂತಪುರಂ, ಅಕ್ಟೋಬರ್ 31 : ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಈಗ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿ ಕೇರಳಕ್ಕ್ ಬಂದಿಳಿದಿದೆ.

ಭಾರತದ ಆಡುವ ಹನ್ನೊಂದು ಆಯ್ಕೆಯಲ್ಲಿ ಅಂಥಾ ಬದಲಾವಣೆ ನಿರೀಕ್ಷೆಯಿಲ್ಲ. ಆದರೆ, ಬೌಲರ್ ಗಳ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಂಭಾವ್ಯ ತಂಡ ಹೀಗಿದೆ...

ಪುಣೆಯಲ್ಲಿ ನಡೆದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ವಿರುದ್ಧ ವೆಸ್ಟ್ ಇಂಡೀಸ್ ಗೆ 43ರನ್ ಗಳ ಜಯ ಸಿಕ್ಕಿತು. 283ರನ್ ಗಳನ್ನು ಚೇಸ್ ಮಾಡಿದ ವಿಂಡೀಸ್, ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಿತ್ತು. ಆದರೆ, ಮುಂಬೈನ ಬ್ರಬೋರ್ನ್ ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 224ರನ್ ಗಳಿಂದ ಸೋಲು ಕಂಡಿತ್ತು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳ ವೈಫಲ್ಯ, ಸ್ಲಾಗ್ ಓವರ್ ಗಳಲ್ಲಿ ರನ್ ನಿಯಂತ್ರಿಸಲು ಬೌಲರ್ ಗಳ ಪರದಾಟ ಎಲ್ಲದರ ಬಗ್ಗೆ ಗಮನಹರಿಸಬೇಕಿದೆ. ನವೆಂಬರ್ 01ರಂದು ತಿರುವನಂತಪುರಂ ಸ್ಟೇಡಿಯಂನಲ್ಲಿ ಒಂದೆರಡು ಬದಲಾವಣೆಯನ್ನು ಕಾಣಬಹುದಾಗಿದೆ.

ಆರಂಭಿಕ ಆಟಗಾರ : ರೋಹಿತ್ ಶರ್ಮ

ಆರಂಭಿಕ ಆಟಗಾರ : ರೋಹಿತ್ ಶರ್ಮ

ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ರೋಹಿತ್ ಅವರು ನಂತರ ವೈಜಾಗ್ ನಲ್ಲಿ 4 ಹಾಗೂ ಪುಣೆಯಲ್ಲಿ 8ರನ್ ಗಳಿಸಿ, ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಾಲ್ಕನೇ ಪಂದ್ಯದಲ್ಲಿ ರೋಹಿತ್ ಅವರು ವೈಯಕ್ತಿಕವಾಗಿ ಹಾಗೂ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿ, 162ರನ್ ಚೆಚ್ಚಿದರು. ಐದನೇ ಪಂದ್ಯದಲ್ಲೂ ವಿಂಡೀಸ್ ಬೌಲರ್ ಗಳನ್ನು ಕಾಡುವ ನಿರೀಕ್ಷೆಯಿದೆ.

ಶಿಖರ್ ಧವನ್

ಶಿಖರ್ ಧವನ್

ಏಷ್ಯಾಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಅದೇ ರೀತಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪುಣೆಯಲ್ಲಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಧವನ್ ಅವರು ಶೀಘ್ರದಲ್ಲಿ ತಮ್ಮ ದೋಷಗಳನ್ನು ಸರಿಪಡಿಸಿಕೊಂಡು ತಂಡಕ್ಕೆ ಉತ್ತಮ ಆರಂಭ ನೀಡಬೇಕಿದೆ ಇಲ್ಲದಿದ್ದರೆ ಆರಂಭಿಕ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಶುರುವಾಗಿದ್ದು, ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ರನ್ ಮಷಿನ್, ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದು ಸತತವಾಗಿ ಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮುಖ್ಯವಾಗಿ 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ ಮನ್ ಸಿಗುತ್ತಿಲ್ಲ ರಾಯುಡು ಅವರು ವೈಜಾಗ್ ನಲ್ಲಿ 73ರನ್ ಚೆಚ್ಚಿದ್ದರು. ಆದರೆ, ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ, ಮುಂಬೈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಡಬ್ಬಲ್ ವಿಕೆಟ್ ಕೀಪರ್ಸ್ ಇರಲ್ಲ

ಡಬ್ಬಲ್ ವಿಕೆಟ್ ಕೀಪರ್ಸ್ ಇರಲ್ಲ

ಎಂಎಸ್ ಧೋನಿ
ರಿಷಬ್ ಪಂತ್ ಗೆ ಸ್ಥಾನದ ನೀಡುವ ಗೊಂದಲ ಇದ್ದಂತೆ ಕಾಣುತ್ತಿದೆ. 5ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಎರಡು ಇನ್ನಿಂಗ್ಸ್ ಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಬ್ಯಾಟಿಂಗ್ ಗಿಂತ ಕೀಪಿಂಗ್ ಮುಖ್ಯವಾಗಿದ್ದು, ಧೋನಿ ಮಾತ್ರ ಆಡಲಿದ್ದಾರೆ.

ಧೋನಿ ಅವರ ವೃತ್ತಿ ಬದುಕಿನಲ್ಲಿ 2018ರಲ್ಲೇ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ. ಆದರೆ, ಧೋನಿ ಮನಸ್ಸು ಮಾಡಿದರೆ, ಪಂದ್ಯದ ಗತಿ ಬದಲಿಸಬಲ್ಲರು.

ಆಲ್ ರೌಂಡರ್ಸ್

ಆಲ್ ರೌಂಡರ್ಸ್

ಕೇದಾರ್ ಜಾಧವ್, ರವೀಂದ್ರ ಜಡೇಜ
ಕೇದಾರ್ ಜಾಧವ್ ಜತೆ ರವೀಂದ್ರ ಜಡೇಜ ಕೂಡಾ ಆಲ್ ರೌಂಡರ್ ರೂಪದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಜೊತೆಯಾಟ ಮುರಿಯುವ ಸ್ಪಿನ್ನರ್ ಎನಿಸಿಕೊಂಡಿರುವ ಜಾಧವ್ ರನ್ ನಿಯಂತ್ರಿಸುವಲ್ಲೂ ಸಹಕಾರಿ. ಬ್ಯಾಟಿಂಗ್ ಸಮರ್ಥಕ್ಕೆ ಹೋಲಿಸಿದರೆ ನಂ.7 ಕ್ರಮಾಂಕ ತೀರಾ ಕೆಳಕ್ರಮಾಂಕ ಎನ್ನಬಹುದು. ಆದರೆ, ತಂಡದ ಬಾಲಂಗೋಚಿಗಳನ್ನು ಕಾಯ್ದುಕೊಂಡು ಆಡಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಜಡೇಜ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಚಾಹಲ್ ಬದಲಿಗೆ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬೌಲರ್ಸ್

ಬೌಲರ್ಸ್

ಭುವನೇಶ್ವರ್ ಕುಮಾರ್
ಪ್ರಮುಖ ಬೌಲರ್ ಭುವನೇಶ್ವರ್ ಅವರು ತಮ್ಮ ಎಂದಿನ ಲಯಕ್ಕೆ ಮರಳಬೇಕಿದ್ದು, ಸ್ಲಾಗ್ ಓವರ್ ಗಳಲ್ಲಿ ರನ್ ನಿಯಂತ್ರಣದ ಹೊಣೆ ಹೊರಬೇಕಿದೆ. ನಾಲ್ಕನೇ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದರು.

ಕುಲದೀಪ್ ಯಾದವ್ ರನ್ ಕೊಟ್ಟರೂ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಸ್ ಪ್ರೀತ್ ಬೂಮ್ರಾ : ಉತ್ತಮ ಲಯದಲ್ಲಿದ್ದು, ತಂಡಕ್ಕೆ ಆಧಾರವಾಗಿದ್ದಾರೆ. ಜತೆಗೆ ಯುವ ಎಡಗೈ ವೇಗಿ ಖಲೀಲ್ ಅಹ್ಮದ್ ಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

Story first published: Wednesday, October 31, 2018, 20:52 [IST]
Other articles published on Oct 31, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+