ಟಿ20: ಗೆದ್ದೆವೆಂದು ಬೀಗುವಂತಿಲ್ಲ, ವಿಂಡೀಸ್ ತಿರುಗಿ ಬಿದ್ದರೂ ಅಚ್ಚರಿಯಿಲ್ಲ!

ಲಕ್ನೋ, ನವೆಂಬರ್ 5: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಜಯಭೇರಿ ಬಾರಿಸಿತ್ತು. ನವೆಂಬರ್ 6ರಂದು ಮತ್ತೆ ಇತ್ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಲಕ್ನೋದ ಏಕಾನಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸವಾಲು ಸ್ವೀಕರಿಸಲಿವೆ.
ಎರಡು ಪಂದ್ಯಗಳ ಟೆಸ್ಟ್ ಸರಣಿ, ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಸುಲಭವಾಗಿ ಗೆದ್ದುಕೊಂಡಿತ್ತು. ಮೂರು ಪಂದ್ಯಗಳ ಟಿ20 ಸರಣಿಯನ್ನೂ ಗೆದ್ದುಕೊಳ್ಳುವ ವಿಶ್ವಾಸದಲ್ಲಿ ರೋಹಿತ್ ಬಳಗವಿದೆ. ಮೊದಲ ಪಂದ್ಯದಲ್ಲಿ ಸಿಕ್ಕ ಗೆಲುವೂ ಭಾರತದ ಹುಮ್ಮಸ್ಸು ಹೆಚ್ಚಿಸಿರುವುದು ನಿಜವೇ. ಹಾಗಂತ ವೆಸ್ಟ್ ಇಂಡೀಸ್ ತಂಡವನ್ನು ಸಂಪೂರ್ಣ ಕಡೆಗಣಿಸುವಂತಿಲ್ಲ.
ಈ ಬಾರಿಯ ಭಾರತದ ಪ್ರವಾಸ ಸರಣಿಯಲ್ಲಿ ವೆಸ್ಟ್ ಇಂಡೀಸ್ ಗಮನಾರ್ಹ ಪ್ರದರ್ಶನ ತೋರಿಸಿಲ್ಲ. ಏಕದಿನ ಸರಣಿಯಲ್ಲಿ ಕೊಂಚ ಮೈಕೊಡವಿ ನಿಲ್ಲುವ ಪ್ರಯತ್ನ ಮಾಡಿತಾದರೂ ಮತ್ತೆ ಬ್ಯೂಬಾಯ್ಸ್ ತಂಡ ಕೆರಿಬಿಯನ್ನರನ್ನು ಹೆಡೆಮುರಿ ಕಟ್ಟಿ (ಒಂದು ಪಂದ್ಯ ಟೈ ಸೇರಿ) ಸರಣಿಯನ್ನು 3-1ರಿಂದ ಗೆದ್ದಿತ್ತು.

ಬೌಲಿಂಗ್ ದಾಳಿ
ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೇಗನೆ ವಿಕೆಟ್ ಕಳೆದು ಬ್ಯಾಟಿಂಗ್ ವೈಫಲ್ಯ ತೋರಿಸಿತಾದರೂ, ಭಾರತದ ಇನ್ನಿಂಗ್ಸ್ ವೇಳೆ ಆ ಸಿಟ್ಟನ್ನು ತೀರಿಸಿಕೊಂಡಿತ್ತು. ನಾಯಕ ಕಾರ್ಲೋಸ್ ಕಾರ್ಲೋಸ್ ಬ್ರಾಥ್ವೈಟ್ 2, ಒಶಾನೆ ಥೋಮಸ್ 2, ಖೇರಿ ಪಿಯರೆ 1 ವಿಕೆಟ್ ಉರುಳಿಸಿ ಬೌಲಿಂಗ್ ದಾಳಿ ಪ್ರದರ್ಶಿಸಿದ್ದರು. ಆದರೆ ಭಾರತ ಪರ ಕುಲದೀಪ್ ದಾಳಿ ತಂಡದ ಗೆಲುವಿನಲ್ಲಿ ಪರಿಣಾಮ ಬೀರಿತ್ತು.

ಪೆವಿಲಿಯನ್‌ಗೆ ದಾರಿ ತೋರಿಸಿದ್ದರು
ಟಿ20ಗೆ ನೆರವಾಗುವ ಬೌಲಿಂಗ್ ದಾಳಿಯನ್ನು ವಿಂಡೀಸ್ ಮಾಡಬಲ್ಲದು ಎನ್ನುವುದಕ್ಕೆ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ (6), ಶಿಖರ್ ಧವನ್ (3), ಕೆಎಲ್ ರಾಹುಲ್ (16), ರಿಷಬ್ ಪಂತ್ (1) ಅವರನ್ನು ಪೆವಿಲಿಯನ್ ಗೆ ಅಟ್ಟಿದ್ದೇ ಉದಾಹರಣೆಯಿದೆ. ಇತ್ತ ಕೀರನ್ ಪೊಲಾರ್ಡ್ ಕೂಡ ಹೆಚ್ಚುಕಾಲ ಕ್ರೀಸ್‌ನಲ್ಲಿ ನಿಲ್ಲದಿದ್ದುದು ಭಾರತಕ್ಕೆ ಅನುಕೂಲವೆನಿಸಿತ್ತು.

ಅಪಾಯಕಾರಿ ಆಟಗಾರರ ಬಣ
ಒಂದುವೇಳೆ ಪೊಲಾರ್ಡ್, ಶೈ ಹೋಪ್, ಶಿಮ್ರಾನ್ ಹೆಟ್ಮೇಯರ್ ನಿಂತಿದ್ದರೆ ಪಂದ್ಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿತ್ತು. ಟಿ20 ತಂಡಕ್ಕೆ ಪೊಲಾರ್ಡ್ ಸೇರ್ಪಡೆಗೊಂಡಿದ್ದೇ ಆತ ವಿಂಡೀಸ್ ಹಿಟ್‌ಮ್ಯಾನ್ ಎನ್ನುವ ಕಾರಣಕ್ಕೆ. ಒಟ್ಟಿನಲ್ಲಿ ದ್ವಿತೀಯ ಪಂದ್ಯವನ್ನು ಭಾರತ ಎಚ್ಚರಿಕೆಯಿಂದ ಆಡಬೇಕಿದೆ.

ಸಂಭಾವ್ಯ ಭಾರತ XI
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications