For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟೆಸ್ಟ್ ನ ಚೊಚ್ಚಲ ಶತಕ ಬಾರಿಸಿದ ರವೀಂದ್ರ ಜಡೇಜಾ!

India vs West Indies: Jadeja gets to his maiden Test 100

ರಾಜ್ ಕೋಟ್, ಅಕ್ಟೋಬರ್ 5: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಭಾರತದ ಪಾಲಿಗೆ ದಾಖಲೆಗಳ ಸರದಿಯನ್ನೇ ತಂದಿದೆ, ತರುತ್ತಿದೆ. ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ.

ಶುಕ್ರವಾರ (ಅಕ್ಟೋಬರ್ 5) ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ದ್ವಿತೀಯ ದಿನದಾಟಕ್ಕೆ ಇಳಿದಿದ್ದ ಭಾರತ, ಪೃಥ್ವಿ ಶಾ (134), ನಾಯಕ ವಿರಾಟ್ ಕೊಹ್ಲಿ (139) ಮತ್ತು ರವೀಂದ್ರ ಜಡೇಜಾ ಅವರ (100) ಶತಕ ನೆರವಿನಿಂದ ಪ್ರಥಮ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಕಳೆದು 649 ರನ್ ಪೇರಿಸುವುದರೊಂದಿಗೆ ಡಿಕ್ಲೇರ್ ಘೋಸಿಸಿತ್ತು.

ಟೆಸ್ಟ್ ಕ್ರಿಕೆಟ್ ನಲ್ಲಿ 90 ಅಧಿಕ ರನ್ ದಾಖಲೆ ಹೊಂದಿದ್ದ ಜಡೇಜಾ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಶತಕದ ಸಂಭ್ರಮಾಚರಿಸಿದರು. ಅದೂ ತನ್ನ ತವರು ನೆಲದಲ್ಲೇ ಜಡೇಜಾ ಶತಕ ಬಾರಿಸಿದ್ದು ವಿಶೇಷ. ರವೀಂದ್ರ ಮೂಲತಃ ಗುಜರಾತ್ ನ ಸೌರಾಷ್ಟ್ರದವರೆ.

ಜಡೇಜಾ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಟ್ಟು 8 ಶತಕಗಳ ಸಾಧನೆ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಮಿಂಚಿರುವ ಜಡೇಜಾ, ಟೆಸ್ಟ್ ಕ್ರಿಕೆಟ್ ನಲ್ಲಿ 37 ಪಂದ್ಯಗಳಲ್ಲಿ 178 ವಿಕೆಟ್ ಸಾಧನೆ ಹೊಂದಿದ್ದಾರೆ. 140 ಏಕದಿನ ಪಂದ್ಯಗಳಲ್ಲಿ 162 ವಿಕೆಟ್ ಗಳಿಸಿದ್ದಾರೆ.

Story first published: Friday, October 5, 2018, 16:09 [IST]
Other articles published on Oct 5, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+