Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವಿಂಡೀಸ್ ಟೆಸ್ಟ್: ಕೀಮೋ ಪೌಲ್ ಔಟ್, ಬಲಿಷ್ಠ ಕಮ್ಮಿನ್ಸ್ ಇನ್!

India vs West Indies: Keemo Paul ruled out of first Test

ಆ್ಯಂಟಿಗುವಾ, ಆಗಸ್ಟ್ 22: ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಿಥೇಯ ವಿಂಡೀಸ್‌ಗೆ ಆಘಾತವಾಗಿದೆ. ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀಮೋ ಪೌಲ್ ಗಾಯದಿಂದಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಪೌಲ್ ಎಡ ಪಾದಕ್ಕೆ ಗಾಯವಾಗಿದೆ.

ಆ್ಯಂಕಲ್ ಇಂಜುರಿಗೊಳಗಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿರುವ ಕೀಮೋ ಪೌಲ್ ಬದಲಾಗಿ ಅಪಾಯಕಾರಿ ವೇಗಿ ಮಿಗುಯೆಲ್ ಕಮ್ಮಿನ್ಸ್ ಅವರನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹೆಸರಿಸಿದೆ. ಇತ್ತಂಡಗಳ ಮೊದಲ ಟೆಸ್ಟ್ ಪಂದ್ಯ ಆ್ಯಂಟಿಗುವಾದ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಗಸ್ಟ್ 22ರಿಂದ ಆರಂಭಗೊಳ್ಳಲಿದೆ.

ಪೌಲ್ ಅವರು ದ್ವಿತೀಯ ಟೆಸ್ಟ್ ವೇಳೆ ವಿಂಡೀಸ್ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ತಂಡ ನಿರ್ವಹಣಾ ಸಮಿತಿ ತಿಳಿಸಿದೆ. 'ಈ ಪಂದ್ಯದಿಂದ ಕೀಮೋ ಹೊರ ಬಿದ್ದಿದ್ದಾರೆ. ಆದರೆ ಕೀಮೋ ಅವರಷ್ಟೇ ಸಾಮರ್ಥ್ಯವುಳ್ಳ ಮಿಗುಯೆಲ್ ತಂಡಕ್ಕೆ ಮರಳಿರುವುದು ಖುಷಿ ನೀಡಿದೆ,' ಎಂದು ವಿಂಡೀಸ್ ಕೋಚ್ ಫ್ಲಾಯ್ಡ್ ರೀಫರ್ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

28ರ ಹರೆಯದ ಕಮ್ಮಿನ್ಸ್ 3 ವರ್ಷಗಳಿಗೆ ಹಿಂದೆ ಭಾರತ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಸರಣಿಯಲ್ಲಿ ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ 102 ರನ್‌ಗೆ 9 ವಿಕೆಟ್ ಕೆಡವಿದ್ದು ಮಿಗುಯೆಲ್ ಅವಿಸ್ಮರಣೀಯ ಸಾಧನೆಯಾಗಿದೆ. ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಮ್ಮಿನ್ಸ್ 48 ರನ್‌ಗೆ 6 ವಿಕೆಟ್ ಪಡೆದಿದ್ದರು.

Story first published: Thursday, August 22, 2019, 12:11 [IST]
Other articles published on Aug 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+