Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್ ಇಂಡೀಸ್: ಮೊದಲ ದಿನದಾಂತ್ಯಕ್ಕೆ ಭಾರತ 364 ರನ್

INDIA v/s WEST INDIES : ಬ್ಯಾಟಿಂಗ್ ಆಯ್ದುಕೊಂಡ ಭಾರತ | Oneindia Kannada
India vs West Indies Live Score, 1st Test Day 1

ರಾಜ್ ಕೋಟ್, ಅಕ್ಟೋಬರ್ 4: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಂದು (ಅಕ್ಟೋಬರ್ 4) ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯಾಟಕ್ಕಿಳಿದಿದ್ದ ಭಾರತ, ಮೊದಲ ದಿನದಾಂತ್ಯಕ್ಕೆ ಭಾರತ 89 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದು 364 ರನ್ ಪೇರಿಸಿದೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44264

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸೊನ್ನೆಗೆ ಔಟದಾ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಈ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಶತಕ (134 ರನ್) ಬಾರಿಸಿ ಗಮನ ಸೆಳೆದರಲ್ಲದೆ ತಂಡಕ್ಕೆ ಬಲ ತುಂಬಿದರು.

ಜೊತೆಗೆ ಚೇತೇಶ್ವರ್ ಪೂಜಾರ 86, ನಾಯಕ ವಿರಾಟ್ ಕೊಹ್ಲಿ (ನಾಟೌಟ್) 72, ಅಜಿಂಕ್ಯ ರಹಾನೆ 41 ಮತ್ತು ರಿಷಬ್ ಪಂತ್ (ನಾಟೌಟ್) 17 ರನ್ ಪೇರಸಿದ್ದು, ಮೊದಲ ದಿನ ಭಾರತ ಉತ್ತಮ ರನ್ ಕಲೆ ಹಾಕಲು ನೆರವು ನೀಡಿತು.

ಭಾರತ ತಂಡ: ಲೋಕೇಶ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.

ವಿಂಡೀಸ್ : ಕ್ರೆಗ್ ಬ್ರಾಥ್ವೈಟ್ (ಸಿ), ಕೀರನ್ ಪೊವೆಲ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮರ್, ರಾಸ್ಟನ್ ಚೇಸ್, ಸುನಿಲ್ ಅಂಬ್ರಿಸ್, ಶೇನ್ ಡೌರಿಕ್ (W), ಕೀಮೋ ಪಾಲ್, ದೇವೇಂದ್ರ ಬಿಶೂ, ಶೆರ್ಮನ್ ಲೆವಿಸ್, ಶಾನನ್ ಗೇಬ್ರಿಯಲ್.

Story first published: Thursday, October 4, 2018, 17:45 [IST]
Other articles published on Oct 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+