Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವಿಂಡೀಸ್: ಇನ್ನಿಂಗ್ಸ್ ಆರಂಭದಲ್ಲೇ ವೆಸ್ಟ್ ಇಂಡೀಸ್ ಗೆ ಆಘಾತ!

India vs West Indies Live Score, 1st Test Day 2

ರಾಜ್ ಕೋಟ್, ಅಕ್ಟೋಬರ್ 5: ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಟೆಸ್ಟ್ ನ ದ್ವಿತೀಯ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ದಿನದಾಟ ಮುಗಿಸುವ ಹೊತ್ತಿಗೆ 29 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು ಕೇವಲ 94 ರನ್ ಪೇರಿಸಿತ್ತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44264

ಇನ್ನಿಂಗ್ಸ್ ಆರಂಭದಿಂದಲೂ ವೆಸ್ಟ್ ಇಂಡೀಸ್ ಆಟಗಾರರು ವಿಕೆಟ್ ಕಾವಲು ಕಾಯುವಲ್ಲಿ ವಿಫಲರಾದರು. ಆರಂಭಿಕರಾದ ನಾಯಕ ಕ್ರೇಗ್ ಬ್ರಾಥ್ವೈಟ್ 2, ಕೀರನ್ ಪೊವೆಲ್ 1 ರನ್ ನೊಂದಿಗೆ ವೇಗಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ಬ್ಯಾಟ್ಸ್ಮನ್ ಗಳು ಸಾಲಾಗಿ ಪೆವಿಲಿಯನ್ ದಾರಿ ಹಿಡಿದರು.

ವೆಸ್ಟ ಇಂಡೀಸ್ ಇನ್ನಿಂಗ್ಸ್ ವೇಳೆ ಶಮಿ 2, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಒಂದೊಂದು ವಿಕೆಟ್ ಪಡೆದು ಕೆರಿಬಿಯನ್ನರನ್ನು ಕಾಡಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 149.5 ಓವರ್ ಗಳಲ್ಲಿ 9 ವಿಕೆಟ್ ಕಳೆದು 649 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಪೃಥ್ವಿ ಶಾ 134, ಚೇತೇಶ್ವರ್ ಪೂಜಾರ 86, ವಿರಾಟ್ ಕೊಹ್ಲಿ 139, ಅಜಿಂಕ್ಯ ರಹಾನೆ 41, ರಿಷಬ್ ಪಂತ್ 92, ರವೀಂದ್ರ ಜಡೇಜಾ 100 ರನ್ ಸೇರಿಸಿ ಎದುರುರಾಳಿ ವಿಂಡೀಸ್ ಎದುರು ಭಾರತ ಭರ್ಜರಿ 649 ರನ್ ಪೇರಿಸುವಲ್ಲಿ ನೆರವು ನೀಡಿದ್ದರು.

ಭಾರತ ತಂಡ: ಲೋಕೇಶ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.

ವಿಂಡೀಸ್ : ಕ್ರೆಗ್ ಬ್ರಾಥ್ವೈಟ್ (ಸಿ), ಕೀರನ್ ಪೊವೆಲ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮರ್, ರಾಸ್ಟನ್ ಚೇಸ್, ಸುನಿಲ್ ಅಂಬ್ರಿಸ್, ಶೇನ್ ಡೌರಿಕ್ (W), ಕೀಮೋ ಪಾಲ್, ದೇವೇಂದ್ರ ಬಿಶೂ, ಶೆರ್ಮನ್ ಲೆವಿಸ್, ಶಾನನ್ ಗೇಬ್ರಿಯಲ್.

Story first published: Friday, October 5, 2018, 17:10 [IST]
Other articles published on Oct 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+