Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲ ಟೆಸ್ಟ್: ವಿಂಡೀಸ್ ವಿರುದ್ಧ ಭಾರತಕ್ಕೆ 272 ರನ್ ಭರ್ಜರಿ ಜಯ

India vs West Indies Live Score, 1st Test Day 3

ರಾಜ್ ಕೋಟ್, ಅಕ್ಟೋಬರ್ 6: ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ನಲ್ಲಿ ಭಾರತ ದ್ವಿತೀಯ ಇನ್ನಿಂಗ್ಸ್ ಆಡದೆಯೆ 272 ರನ್ ಭರ್ಜರಿ ಜಯ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಂಡೀಸ್ 50.5 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 196 ರನ್ ಪೇರಿಸಿ ಕೊಹ್ಲಿ ಬಳಗಕ್ಕೆ ಶರಣಾಯಿತು

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44264

ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ ವೇಳೆ ಮೊದಮ್ಮದ್ ಶಮಿ 2, ರವಿಚಂದ್ರನ್ ಅಶ್ವಿನ್ 4 (+2 ದ್ವಿತೀಯ ಇನ್ನಿಂಗ್ಸ್) ವಿಕೆಟ್ ತೆಗೆದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ ಕುಲದೀಪ್ ಯಾದವ್ ಬರೋಬ್ಬರಿ 5 ವಿಕೆಟ್ ಕೆಡವಿ ಕೆರಿಬಿಯನ್ನರನ್ನು ಕಾಡಿದರು.

ಮೊದಲ ಇನ್ನಿಂಗ್ಸ್ ಆರಂಭದಿಂದಲೂ ವೆಸ್ಟ್ ಇಂಡೀಸ್ ಆಟಗಾರರು ವಿಕೆಟ್ ಕಾವಲು ಕಾಯುವಲ್ಲಿ ವಿಫಲರಾದರು. ಆರಂಭಿಕರಾದ ನಾಯಕ ಕ್ರೇಗ್ ಬ್ರಾಥ್ವೈಟ್ 2, ಕೀರನ್ ಪೊವೆಲ್ 1 ರನ್ ನೊಂದಿಗೆ ವೇಗಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ಬ್ಯಾಟ್ಸ್ಮನ್ ಗಳು ಸಾಲಾಗಿ ಪೆವಿಲಿಯನ್ ದಾರಿ ಹಿಡಿದರು. ಎರಡನೇ ಇನ್ನಿಂಗ್ಸ್ ನಲ್ಲೂ ವೆಸ್ಟ್ ಇಂಡೀಸ್ ಇದೇ ಕಳಪೆ ಬ್ಯಾಟಿಂಗ್ ಮುಂದುವರೆಸಿದ್ದು ಸೋಲಿಗೆ ಕಾರಣವಾಯ್ತು.

ವೆಸ್ಟ ಇಂಡೀಸ್ ಇನ್ನಿಂಗ್ಸ್ ವೇಳೆ ಶಮಿ 2, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಒಂದೊಂದು ವಿಕೆಟ್ ಪಡೆದು ಕೆರಿಬಿಯನ್ನರನ್ನು ಕಾಡಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 149.5 ಓವರ್ ಗಳಲ್ಲಿ 9 ವಿಕೆಟ್ ಕಳೆದು 649 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಪೃಥ್ವಿ ಶಾ 134, ಚೇತೇಶ್ವರ್ ಪೂಜಾರ 86, ವಿರಾಟ್ ಕೊಹ್ಲಿ 139, ಅಜಿಂಕ್ಯ ರಹಾನೆ 41, ರಿಷಬ್ ಪಂತ್ 92, ರವೀಂದ್ರ ಜಡೇಜಾ 100 ರನ್ ಸೇರಿಸಿ ಎದುರುರಾಳಿ ವಿಂಡೀಸ್ ಗೆ ಭಾರತ ಭರ್ಜರಿ 649 ರನ್ ಪೇರಿಸುವಲ್ಲಿ ನೆರವು ನೀಡಿದ್ದರು.

ಭಾರತ ತಂಡ: ಲೋಕೇಶ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.

ವಿಂಡೀಸ್ : ಕ್ರೆಗ್ ಬ್ರಾಥ್ವೈಟ್ (ಸಿ), ಕೀರನ್ ಪೊವೆಲ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮರ್, ರಾಸ್ಟನ್ ಚೇಸ್, ಸುನಿಲ್ ಅಂಬ್ರಿಸ್, ಶೇನ್ ಡೌರಿಕ್ (W), ಕೀಮೋ ಪಾಲ್, ದೇವೇಂದ್ರ ಬಿಶೂ, ಶೆರ್ಮನ್ ಲೆವಿಸ್, ಶಾನನ್ ಗೇಬ್ರಿಯಲ್.

Story first published: Saturday, October 6, 2018, 15:16 [IST]
Other articles published on Oct 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+