ಭಾರತ vs ವಿಂಡೀಸ್ 1st ಟೆಸ್ಟ್, 3ನೇ ದಿನ, Live: ಕೊಹ್ಲಿ ಪಡೆ ಮುನ್ನಡೆ

ಆ್ಯಂಟಿಗುವಾ, ಆಗಸ್ಟ್ 24: ವೆಸ್ಟ್ ಇಂಡೀಸ್ ವಿರುದ್ಧ ಟಿ20, ಏಕದಿನ ಸರಣಿಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ಬಳಗ, ಕೆರಿಬಿಯನ್ನರ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ನಡೆಸಿದ್ದ ವೇಗಿ ಇಶಾಂತ್ ಶರ್ಮಾ ತಂಡದ ಬಲವಾಗಿ ಕಾಣಿಸಿದ್ದರು.
ಶನಿವಾರ (ಆಗಸ್ಟ್ 24) 3ನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿದ್ದ ಭಾರತ 72 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 185 ರನ್ ಪೇರಿಸಿ 260 ರನ್‌ಗಳ ಮುನ್ನಡೆಯಲ್ಲಿತ್ತು. ಕೆಎಲ್ ರಾಹುಲ್ 38, ಮಯಾಂಕ್ ಅಗರ್ವಾಲ್ 16, ಚೇತೇಶ್ವರ್ ಪೂಜಾರ 25 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ (51 ರನ್), ಅಜಿಂಕ್ಯ ರಹಾನೆ (53 ರನ್) ಕ್ರೀಸ್‌ನಲ್ಲಿದ್ದರು.
ಟೀಮ್ ಇಂಡಿಯಾ ಆರಂಭಿಕ ಇನ್ನಿಂಗ್ಸ್‌ನಲ್ಲಿ 96.4 ಓವರ್‌ಗಳಲ್ಲಿ 297 ರನ್ ಮಾಡಿತ್ತು. ಅಜಿಂಕ್ಯ ರಹಾನೆ 81, ಕೆಎಲ್ ರಾಹುಲ್ 44, ಹನುಮ ವಿಹಾರಿ 32, ರವೀಂದ್ರ ಜಡೇಜಾ 58 ರನ್ ಸೇರಿಸಿ ರನ್ ಹೆಚ್ಚಳಕ್ಕೆ ಕಾರಣರಾಗಿದ್ದರು. ಈ ವೇಳೆ ಎದುರಾಳಿ ತಂಡದ ಕೆಮರ್ ರೋಚ್ 4, ಶ್ಯಾನನ್ ಗೇಬ್ರಿಯಲ್ 3 ವಿಕೆಟ್ ಪಡೆದು ಭಾರತವನ್ನು ಕಾಡಿದ್ದರು.
ಭಾರತ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್, 3ನೇ ದಿನ, Live ಸ್ಕೋರ್‌ಕಾರ್ಡ್
ಶುಕ್ರವಾರ (ಆಗಸ್ಟ್ 23) ದಿನದಾಟದ ಅಂತ್ಯಕ್ಕೆ ಪ್ರಥಮ ಇನ್ನಿಂಗ್ಸ್‌ಗೆ ಇಳಿದಿದ್ದ ವೆಸ್ಟ್ ಇಂಡೀಸ್ 59 ಓವರ್‌ಗೆ 8 ವಿಕೆಟ್ ಕಳೆದು 189 ರನ್ ಗಳಿಸಿತ್ತು. ಇಶಾಂತ್ ಶರ್ಮಾ 42 ರನ್‌ಗೆ 5 ವಿಕೆಟ್ ಉರುಳಿಸಿದ್ದರು. ವಿಂಡೀಸ್ 74.2 ಓವರ್‌ಗೆ 222 ಇನ್ನಿಂಗ್ಸ್ ಮುಗಿಸಿದೆ. ಭಾರತ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.
ಭಾರತ ತಂಡ: ಮಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್ (ವಿಕೆ), ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್‌ಮೇಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಮಿಗುಯೆಲ್ ಕಮ್ಮಿನ್ಸ್, ಶಾನನ್ ಗೇಬ್ರಿಯಲ್, ಕೆಮರ್ ರೋಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications