For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗೆಲುವು

India Vs West Indies, Live Updates, 1st T20I

ಕೋಲ್ಕತ್ತಾ, ನವೆಂಬರ್ 4: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಭಾನುವಾರ (ನವೆಂಬರ್ 4) ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಗೆಲುವನ್ನಾಚರಿಸಿದೆ. ಕುಲದೀಪ್ ಯಾದವ್ 13 ರನ್ ಗೆ 3 ವಿಕೆಟ್ ಪಡೆದಿದ್ದು ಭಾರತದ ಗೆಲುವಿಗೆ ಕಾರಣವಾಯಿತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44271

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವಿಂಡೀಸ್ ಬ್ಯಾಟಿಂಗ್ ಬೆಂಬಲವಿಲ್ಲದೆ ನಲುಗಿತು. ಇತ್ತ ಭಾರತದ ಬೌಲರ್ ಕೂಡ ಕೆರಿಬಿಯನ್ನರನ್ನು ಕಾಡಹತ್ತಿದರು. ಕುಲದೀಪ್ 3, ಉಮೇಶ್ ಯಾದವ್, ಖಲೀಲ್ ಅಹ್ಮದ್, ಜಸ್‌ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಯುವ ಬೌಲರ್ ಖಲೀಲ್ ಅಹ್ಮದ್ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದರು. 18ನೇ ಓವರ್ ನಲ್ಲಿ ಖಲೀಲ್ ವಿಂಡೀಸ್ ಆಟಗಾರ ಫ್ಯಾಬಿಯನ್ ಅಲೆನ್ (27 ರನ್) ವಿಕೆಟ್ ಪಡೆದರು. ವಿಂಡೀಸ್ ಪರ ಅಲೆನ್ ಅವರದ್ದೇ ಗರಿಷ್ಠ ರನ್. ವಿಂಡೀಸ್ 20 ಓವರ್ ಗೆ 8 ವಿಕೆಟ್ ಕಳೆದು 109 ರನ್ ಪೇರಿಸಿತ್ತು.

ಗುರಿ ಬೆನ್ನತ್ತಿದ ಭಾರತ ಕೂಡ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಭೀತಿ ಅನುಭವಿಸಿತು. ಆದರೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ತಂಡದ ಬೆಂಬಲಕ್ಕೆ ನಿಂತರು. ಕಾರ್ತಿಕ್ (31),ಕೃಣಾಲ್ (21) ಜೋಡಿ 17.5 ಓವರ್ ನಲ್ಲಿ ತಂಡದ ಮೊತ್ತವನ್ನು 110ಕ್ಕೆ ಏರಿಸಿದರು.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಲೋಕೇಶ್ ರಾಹುಲ್, ರಿಷಬ್ ಪಂತ್ (ವಿಕೆ), ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ಜಾಸ್‌ಪ್ರೀತ್ ಬೂಮ್ರಾ, ಕೆ ಖಲೀಲ್ ಅಹ್ಮದ್, ಉಮೇಶ್ ಯಾದವ್.

ವಿಂಡೀಸ್ ತಂಡ: ರೋವ್ಮನ್ ಪೊವೆಲ್, ಡ್ಯಾರೆನ್ ಬ್ರಾವೋ, ಶಾಯ್ ಹೋಪ್, ಶಿಮ್ರೋನ್ ಹೆಟ್ಮರ್, ಡೆನೆಶ್ ರಾಮ್ಡಿನ್ (W), ಕೀರನ್ ಪೊಲಾರ್ಡ್, ಕಾರ್ಲೋಸ್ ಬ್ರಾಥ್ವೈಟ್ (ಸಿ), ಕೀಮೊ ಪಾಲ್, ಫ್ಯಾಬಿಯನ್ ಅಲೆನ್, ಖೇರಿ ಪಿಯರೆ, ಒಶೇನ್ ಥಾಮಸ್.

Story first published: Sunday, November 4, 2018, 22:34 [IST]
Other articles published on Nov 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+