ಭಾರತ vs ವೆಸ್ಟ್ ಇಂಡೀಸ್ ಟಿ20ಐ ಪಂದ್ಯವೊಂದರ ದಿನಾಂಕ ಬದಲು?!

ಮುಂಬೈ, ನವೆಂಬರ್ 21: ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ, ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಟಿ20 ಪಂದ್ಯವೊಂದರ ದಿನಾಂಕ ಬದಲಾಗುವ ಸಾಧ್ಯತೆಗಳಿವೆ.
ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ ಡಿಸೆಂಬರ್ 6ರಂದು ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುವುದರಲ್ಲಿದೆ. ಆದರೆ ಈ ಪಂದ್ಯ ನಡೆಯುವ ದಿನ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಪಂದ್ಯದ ದಿನಾಂಕ ಬದಲಾಯಿಸುವಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅನ್ನು ಮುಂಬೈ ಪೊಲೀಸರು ವಿನಂತಿಸಿಕೊಂಡಿದ್ದಾರೆ.
ಸುಪ್ರೀಮ್ ಕೋರ್ಟ್ ಅಯೋಧ್ಯ ತೀರ್ಪು, ಬಾಬರಿ ಮಸೀದಿ ದ್ವಂಸಕ್ಕೆ ಸಂಬಂಧಿಸಿ ಡಿಸೆಂಬರ್ 6 ಪ್ರಮುಖ ದಿನ. ಅಲ್ಲದೆ ಡಾ. ಬಿಆರ್ ಅಂಬೇಡ್ಕರ್ ಸಾವನ್ನಪ್ಪಿದ ದಿನವೂ ಇದೇ ಡಿಸೆಂಬರ್ 6. ಹೀಗಾಗಿ ಈ ದಿನವನ್ನು ಅಂಬೇಡ್ಕರ್ ಅಭಿಮಾನಿಗಳು 'ಮಹಾಪರಿನಿರ್ವಾಣ್ ದಿವಸ್' ಆಗಿ ಆಚರಿಸುವುದರಲ್ಲಿದ್ದಾರೆ.
ಎರಡು ವಿಚಾರಗಳಿಗೆ ಪ್ರಮುಖವಾಗಿರುವ ಡಿಸೆಂಬರ್ 6ರಂದೇ ಮುಂಬೈನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿರುವುದರಿಂದ ಭದ್ರತೆ ಒದಗಿಸುವುದು ಪೊಲೀಸರ ಪಾಲಿಗೆ ಸವಾಲೆನಿಸಿದೆ. ಆದರೆ ದಿನಾಂಕ ಬದಲಾಯಿಸಬೇಕೋ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟನೆ ನೀಡಲಿದ್ದೇವೆ ಎಂದು ಎಂಸಿಎ ಅಧಿಕಾರಿಗಳು ತಿಳಿಸಿದ್ದಾರೆ. ದಿನಾಂಕ ಬದಲಾಗುವ ನಿರೀಕ್ಷೆ ಹೆಚ್ಚಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications