Ind vs WI ಮೊದಲ ಏಕದಿನ: ಹೈಸ್ಕೋರ್ ಥ್ರಿಲ್ಲರ್‌ಗೆ ಸಿದ್ಧರಾಗಿ!: ಪಿಚ್ ರಿಪೋರ್ಟ್, ಸಂಬಾವ್ಯ ಆಡುವ ಬಳಗ
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಗುರುವಾರದಿಂದ ಆರಂಭವಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಮೊದಲ ಪಂದ್ಯ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಎರಡು ತಂಡಗಳು ಕೂಡ ಈ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿವೆ. ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆದ್ದ ಬಳಿಕ ವೈಟ್‌ಬಾಲ್ ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿದೆ.
ಭಾರತ ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ತವರಿನಲ್ಲಿ ಕೊನೆಯ ಆರಿಗೆ ಏಕದಿನ ಸರಣಿಯನ್ನು ಆಡಿತ್ತು. ಆದರೆ ಆ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಗೆದ್ದ ಭಾರತ ಕೊನೆಯ ಎರಡು ಪಂದ್ಯದಲ್ಲಿಯೂ ಸೋತು ಸರಣಿಯನ್ನು ಕಳೆದುಕೊಂಡಿತ್ತು. ಹೀಗಾಗಿ ಈ ಮಾದರಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಆಡಿದ್ದು ನೀರಸ ಪ್ರದರ್ಶನ ನೀಡಿ ಪ್ರಧಾನ ಸುತ್ತಿಗೇರುವ ಅವಕಾಶವನ್ನೇ ಕಳೆದುಕೊಂಡು ಈ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದೆ.

ಪಂದ್ಯ ಮಾಹಿತಿ
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ ಜುಲೈ 27ರಂದು ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಬವಾಗಲಿದ್ದು 6:30ಕ್ಕೆ ಟಾಸ್ ನಡೆಯಲಿದೆ. ಇನ್ನು ಜಿಯೋ ಸಿನಿಮಾ, ಫ್ಯಾನ್‌ಕೋಡ್‌ನಲ್ಲಿ ಪಂದ್ಯ ಲೈವ್ ಸ್ಟ್ರೀಮಿಂಗ್ ಆಗಲಿದ್ದು ಡಿಡಿ ಸ್ಪೋರ್ಟ್ಸ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಪಿಚ್ ರಿಪೋರ್ಟ್
ಕೆನ್ಸಿಂಗ್ಟನ್ ಓವಲ್‌ನ ಪಿಚ್ ಸಾಂಪ್ರದಾಯಿಕವಾಗಿ ಬೌಲರ್‌ಗಳಿಗೆ ಸಹಕಾರಿಯಾಗುವಂತಾ ಪೊಚ್ ಆಗಿದೆ. ಅದರಲ್ಲೂ ವೇಗಿಗಳಿಗೆ ಇಲ್ಲಿ ಉತ್ತಮ ನೆರವು ದೊರೆಯುತ್ತದೆ. ಹೀಗಾಗಿ ಬ್ಯಾಟರ್‌ಗಳಿಗೆ ಸಾಮಾನ್ಯವಾಗಿ ಇಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ. ಆದರೆ ಈ ಮೈದಾನದಲ್ಲಿ ನಡೆದ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡಿಸ್ 302 ರನ್‌ಗಳನ್ನು ಗಳಿಸಿದ್ದರೂ ನ್ಯೂಜಿಲೆಂಡ್ ತಂಡ ಆ ಮೊತ್ತವನ್ನು 5 ವಿಕೆಟ್ ಹಾಗೂ 17 ಎಸೆತಗಳು ಬಾಕಿಯಿರುವಂತೆಯೇ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಹೀಗಾಗಿ ಭಾರತ ಹಾಗೂ ವಿಂಡೀಸ್ ವಿರುದ್ಧದ ಪಂದ್ಯ ಕೂಡ ಹೈಸ್ಕೋರಿಂಗ್ ಪಂದ್ಯವಾದರೂ ಅಚ್ಚರಿಯಿಲ್ಲ.
ಸಂಭಾವ್ಯ ಆಡುವ ಬಳಗ
ವೆಸ್ಟ್ ಇಂಡೀಸ್: ಕೀಸಿ ಕಾರ್ಟಿ, ಶಿಮ್ರಾನ್ ಹೆಟ್ಮೆಯರ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್ (ನಾಯಕ), ಎ ಅಥಾನಾಜೆ, ಶಾನನ್ ಗೇಬ್ರಿಯಲ್, ಓಡಿಯನ್ ಸ್ಮಿತ್
ಟೀಮ್ ಇಂಡಿಯಾ: ಶುಬ್ಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications