Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್ ಇಂಡೀಸ್: 176 ರನ್‌ಗಳಿಗೆ ವಿಂಡೀಸ್ ಪಡೆಯನ್ನು ಕಟ್ಟಿ ಹಾಕಿದ ಭಾರತ

India vs West Indies ODI series, 1st match West Indies allout for 176 runs

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಅದ್ಭುತ ಬೌಲಿಂಗ್ ದಾಳಿಯ ಮುಂದೆ ವೆಸ್ಟ್ ಇಂಡಿಸ್ ಸಂಪೂರ್ಣವಾಗಿ ಕುಸಿದಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಬಿಸಿದ ವೆಸ್ಟ್ ಇಂಡೀಸ್ ಬಳಗ ಕೇವಲ 176 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ ಸುಲಭ ಗುರಿಯನ್ನು ಮುಂದಿಟ್ಟಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ದಾಳಿಗೆ ವಿಂಡೀಸ್ ದಾಂಡಿಗರು ಸಂಪೂರ್ಣವಾಗಿ ತತ್ತರಿಸಿದರು. ವಾಶಿಂಗ್ಟನ್ ಸುಂದರ್ ಹಾಗೂ ಯುಜುವೇಂದ್ರ ಚಾಹಲ್ ಅದ್ಭುತ ದಾಳಿಯನ್ನು ಸಂಘಟಿಸಿದರ ಪರಿಣಾಮವಾಗಿ ವಿಂಡೀಸ್ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಫಲವಾಗಲಿಲ್ಲ.

ಟೀಮ್ ಇಂಡಿಯಾ ಪರವಾಗಿ ಯುಜುವೇಂದ್ರ ಚಾಹಲ್ 4 ವಿಕೆಟ್ ಸಂಪಾದಿಸಿದರೆ ವಾಶಿಂಗ್ಟನ್ ಸುಂದರ್ 3 ವಿಕೆಟ್ ಕಬಳಿಸಿದ್ದಾರೆ. ಪ್ರಸಿದ್ಧ್ ಕೃಷ್ಣ 2 ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಚಾಹಲ್ ವಿಕೆಟ್ ಕೀಳುವಲ್ಲಿ ಮಿಂಚಿದರೆ ವಾಶೀಂಗ್ಟನ್ ಸುಂದರ್ ರನ್ ನಿಯಂತ್ರಣ ಹಾಗೂ ವಿಕೆಟ್ ಕಿಳುವುದರಲ್ಇ ಯಶಸ್ವಿಯಾದರು. ಇನ್ನು ಕನ್ನಡಿಗ ಪ್ರಸಿದ್ಧ್ ಕರಷ್ಣ ಎರಡು ವಿಕೆಟ್ ಪಡೆದರಾದರೂ 10 ಓವರ್‌ಗಳಲ್ಲಿ 2.90 ಎಕಾನಮಿಯಲ್ಲಿ ಬೌಲಿಂಗ್ ದಾಳಿ ನಡೆಸಿ ಮಿಂಚಿದರು.

ಇನ್ನು ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮಾತ್ರವೇ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ಮಿಂಚಿದರು. ಉಳಿದಂತೆ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಅದರಲ್ಲೂ ನಾಯಕ ಕಿರಾನ್ ಪೊಲಾರ್ಡ್ ಮೊದಲ ಎಸೆತದಲ್ಲಿಯೇ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ.

ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ

ಬೆಂಚ್: ರವಿ ಬಿಷ್ಣೋಯ್, ಅವೇಶ್ ಖಾನ್, ಶಾರುಖ್ ಖಾನ್, ದೀಪಕ್ ಚಾಹರ್, ಕುಲದೀಪ್ ಯಾದವ್

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರ್ಯಾಂಡನ್ ಕಿಂಗ್, ಶಾಯ್ ಹೋಪ್ (ವಿಕೆಟ್ ಕೀಪರ್), ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್, ಕೀರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಅಕೇಲ್ ಹೋಸೇನ್, ಕೆಮರ್ ರೋಚ್
ಬೆಂಚ್: ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಹೇಡನ್ ವಾಲ್ಷ್, ಎನ್ಕ್ರುಮಾ ಬೋನರ್

Story first published: Sunday, February 6, 2022, 17:29 [IST]
Other articles published on Feb 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+