ವಿಂಡೀಸ್ ಸರಣಿಯಲ್ಲಿ ಪೃಥ್ವಿ ಶಾ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ?

ನವದೆಹಲಿ, ಸೆಪ್ಟೆಂಬರ್ 29: ಯುವ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದ್ದಾರೆಯೇ? ಹೌದೆನ್ನುತ್ತಿದೆ ಕ್ರಿಕೆಟ್ ವಲಯ. ಮಾಹಿತಿಯ ಪ್ರಕಾರ ಅಕ್ಟೋಬರ್ 4ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್-ಭಾರತ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ದೆಹಲಿ ಮೂಲದ ಪೃಥ್ವಿ ಅವರು ಕಳೆದ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಭಾರತ ತಂಡ ಸೇರಿಕೊಂಡಿದ್ದರು. ಆದರೆ ಆಡುವ 11 ಆಟಗಾರರಲ್ಲಿ ಶಾಗೆ ಅವಕಾಶ ದೊರೆತಿರಲಿಲ್ಲ. ಇಂಗ್ಲೆಂಡ್ ಟೆಸ್ಟ್ ವೇಳೆ ಅಪೂರ್ವ ಅವಕಾಶ ಗದೆ ಹನುಮ ವಿಹಾರಿ ಪಾಲಾಗಿತ್ತು.
19ರ ಹರೆಯದ ಪೃಥ್ವಿ ಅವರು ಭಾರತದ ರಾಜ್ ಕೋಟ್ ನಲ್ಲಿ ಆರಂಭಗೊಳ್ಳಲಿರುವ ವಿಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸಲಿರುವುದು ಬಹುತೇಖ ಖಚಿತ ಎನ್ನಲಾತ್ತಿದೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಪೃಥ್ವಿ 98, 60, 129ರನ್ ನೊಂದಿಗೆ ಆಕರ್ಷಕ ಆಟದ ಮೂಲಕ ಗಮನ ಸೆಳೆಯುತ್ತಿರುವುದೂ ಇದಕ್ಕೆ ಕಾರಣ.
ಇನ್ನೊಂದು ವರದಿಯ ಪ್ರಕಾರ ವೆಸ್ಟ್ ಇಂಡೀಸ್ ಸರಣಿ ಬಳಿಕ ಡಿಸೆಂಬರ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸ ಸರಣಿಗೂ ಪೃಥ್ವಿ ಅವರು ಟೀಮ್ ಇಂಡಿಯಾದಲ್ಲಿ ಇರಲಿದ್ದಾರೆ. ವಿಜಯ್ ಹಜಾರೆ ಟ್ರೋಫಿ, ಐಪಿಎಲ್ ನಂಥ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಅಪೂರ್ವ ಸಾಧನೆ ತೋರುತ್ತಿರುವುದರಿಂದ ಪೃಥ್ವಿಗೆ ಅವಕಾಶ ದೊರೆಯುವ ಸಾಧ್ಯತೆ ಸಹಜವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications