
ಆರಂಭಿಕ ಆಟಗಾರರು- ರೋಹಿತ್ ಶರ್ಮ
ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ರೋಹಿತ್ ಅವರು ನಂತರ ವೈಜಾಗ್ ನಲ್ಲಿ 4 ಹಾಗೂ ಪುಣೆಯಲ್ಲಿ 8ರನ್ ಗಳಿಸಿ, ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಉತ್ತಮ ಆರಂಭದ ನಿರೀಕ್ಷೆ ಹೆಚ್ಚಾಗಿದ್ದು, ನಾಲ್ಕನೇ ಪಂದ್ಯದಲ್ಲಿ ರೋಹಿತ್ ಅವರು ವೈಯಕ್ತಿಕವಾಗಿ ಹಾಗೂ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಬೇಕಾಗಿದೆ. ಭಾರತ ತಂಡವನ್ನು ಟಿ20 ಸರಣಿಯಲ್ಲಿ ಮುನ್ನಡೆಸುವ ಹೊಣೆ ರೋಹಿತ್ ಮೇಲಿರುವುದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಈ ಪಂದ್ಯ ಮುಖ್ಯವಾಗಿದೆ.

ಶಿಖರ್ ಧವನ್
ಏಷ್ಯಾಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಅದೇ ರೀತಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪುಣೆಯಲ್ಲಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಧವನ್ ಅವರು ಶೀಘ್ರದಲ್ಲಿ ತಮ್ಮ ದೋಷಗಳನ್ನು ಸರಿಪಡಿಸಿಕೊಂಡು ತಂಡಕ್ಕೆ ಉತ್ತಮ ಆರಂಭ ನೀಡಬೇಕಿದೆ ಇಲ್ಲದಿದ್ದರೆ ಆರಂಭಿಕ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಶುರುವಾಗಿದ್ದು, ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.

ವಿರಾಟ್ ಕೊಹ್ಲಿ, ಅಂಬಟಿ ರಾಯುಡು
ರನ್ ಮಷಿನ್, ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದು ಸತತವಾಗಿ ಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುತಿಲ್ಲ. ಮುಖ್ಯವಾಗಿ 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ ಮನ್ ಸಿಗುತ್ತಿಲ್ಲ ರಾಯುಡು ಅವರು ವೈಜಾಗ್ ನಲ್ಲಿ 73ರನ್ ಚೆಚ್ಚಿದ್ದರು. ಆದರೆ, ಇನ್ನಿಂಗ್ಸ್ ಕಟ್ಟುವ ಕೆಲಸ ಆಗುತ್ತಿಲ್ಲ.

ಡಬ್ಬಲ್ ವಿಕೆಟ್ ಕೀಪರ್ಸ್
ರಿಷಬ್ ಪಂತ್ ಹಾಗೂ ಎಂಎಸ್ ಧೋನಿ
ರಿಷಬ್ ಪಂತ್ ಗೆ ತನ್ನ ಸ್ಥಾನದ ಬಗ್ಗೆ ಇನ್ನೂ ಗೊಂದಲ ಇದ್ದಂತೆ ಕಾಣುತ್ತಿದೆ. 5ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಎರಡು ಇನ್ನಿಂಗ್ಸ್ ಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಬ್ಯಾಟಿಂಗ್ ಗಿಂತ ಕೀಪಿಂಗ್ ಸಾಮರ್ಥ್ಯವನ್ನು ಒರೆಗೆ ಹಚ್ಚಿ ನೋಡಬೇಕಿದೆ.
ಧೋನಿ ಅವರ ವೃತ್ತಿ ಬದುಕಿನಲ್ಲಿ 2018ರಲ್ಲೇ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ. ಆದರೆ, ಧೋನಿ ಮನಸ್ಸು ಮಾಡಿದರೆ, ಪಂದ್ಯದ ಗತಿ ಬದಲಿಸಬಲ್ಲರು. ಧೋನಿಯಿಂದ ರಿಷಬ್ ಪಂತ್ ಗೆ ಕೀಪಿಂಗ್ ಪಾಠವೂ ಸಿಗಬೇಕಿದೆ. ಹೀಗಾದರೆ, ಈ ಸರಣಿ ಹಾಗೂ ವಿಶ್ವಕಪ್ ಗೆ ಸಮರ್ಥ ವಿಕೆಟ್ ಕೀಪರ್ ಗಳನ್ನು ಭಾರತ ಹೊಂದಬಹುದು.

ಆಲ್ ರೌಂಡರ್
ಕೇದಾರ್ ಜಾಧವ್ ಆಲ್ ರೌಂಡರ್ ರೂಪದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಜೊತೆಯಾಟ ಮುರಿಯುವ ಸ್ಪಿನ್ನರ್ ಎನಿಸಿಕೊಂಡಿರುವ ಜಾಧವ್ ರನ್ ನಿಯಂತ್ರಿಸುವಲ್ಲೂ ಸಹಕಾರಿ. ಬ್ಯಾಟಿಂಗ್ ಸಮರ್ಥಕ್ಕೆ ಹೋಲಿಸಿದರೆ ನಂ.7 ಕ್ರಮಾಂಕ ತೀರಾ ಕೆಳಕ್ರಮಾಂಕ ಎನ್ನಬಹುದು. ಆದರೆ, ತಂಡದ ಬಾಲಂಗೋಚಿಗಳನ್ನು ಕಾಯ್ದುಕೊಂಡು ಆಡಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.

ಬೌಲರ್ಸ್
ಭುವನೇಶ್ವರ್ ಕುಮಾರ್ : ಪ್ರಮುಖ ಬೌಲರ್ ಭುವನೇಶ್ವರ್ ಅವರು ತಮ್ಮ ಎಂದಿನ ಲಯಕ್ಕೆ ಮರಳಬೇಕಿದ್ದು, ಸ್ಲಾಗ್ ಓವರ್ ಗಳಲ್ಲಿ ರನ್ ನಿಯಂತ್ರಣದ ಹೊಣೆ ಹೊರಬೇಕಿದೆ.
ಕುಲದೀಪ್ ಯಾದವ್,ಯಜುವೇಂದ್ರ ಚಾಹಲ್ : ರನ್ ಕೊಟ್ಟರೂ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಸ್ ಪ್ರೀತ್ ಬೂಮ್ರಾ : ಉತ್ತಮ ಲಯದಲ್ಲಿದ್ದು, ತಂಡಕ್ಕೆ ಆಧಾರವಾಗಿದ್ದಾರೆ.


Click it and Unblock the Notifications

