ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!

ಮುಂಬೈ, ಅಕ್ಟೋಬರ್ 29: ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ 21ನೇ ಏಕದಿನ ಶತಕ ಪೂರೈಸಿಕೊಂಡಿದ್ದಾರೆ. ಸೋಮವಾರ (ಅ.29) ಮುಂಬೈಯ ಬ್ರಾಬೌರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಶರ್ಮಾ 162 ರನ್ ಪೇರಿಸಿದರು. (ಚಿತ್ರ ಕೃಪೆ: ಇಎಸ್‌ಪಿಎನ್ ಕ್ರಿಕ್ ಇನ್ಫೋ)
ಪಂದ್ಯದ Live Score ಕೆಳಗಿದೆ ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಶಿಖರ್ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದು ಆಘಾತವನ್ನು ಅನುಭವಿಸಿತು. ಧವನ್ 38, ವಿರಾಟ್ 16 ರನ್ ಗಳಿಸಿ ಕ್ರಮವಾಗಿ ಕೀಮೊ ಪಾಲ್ ಮತ್ತು ಕೆಮರ್ ರೊಚ್ ಗೆ ವಿಕೆಟ್ ಒಪ್ಪಿಸಿದರು.
ಭಾರತದ ನೆರವಿಗೆ ನಿಂತ ರೋಹಿತ್ ಶರ್ಮಾ, 20 ಬೌಂಡರಿ, 4 ಸಿಕ್ಸರ್ ಗಳು ಸೇರಿ 137 ಎಸೆತಗಳಿಗೆ 162 ರನ್ ಚಚ್ಚಿದರು. ರಾಯುಡು ಕೂಡ 81 ಎಸೆತಗಳಿಗೆ 100 ರನ್ ಪೇರಿಸುವ ಮೂಲಕ ಉತ್ತಮ ಜೊತೆಯಾಟ ನೀಡಿದರು.
ಈ ಶತಕದೊಂದಿಗೆ ರೋಹಿತ್ 7229+162 (7391) ಏಕದಿನ ರನ್ ಮಾಡಿದ್ದಾರೆ. ಏಕದಿನದಲ್ಲಿ ಅಧಿಕ ರನ್ ದಾಖಲೆ (264 ರನ್) ಹೊಂದಿರುವ ಶರ್ಮಾ 7ನೇ ಬಾರಿಗೆ 150ಕ್ಕೂ ಹೆಚ್ಚಿನ ರನ್ ಗಳಿಸಿದ ಹೊಸ ದಾಖಲೆ ಬರೆದಿದ್ದಾರೆ. ಐಸಿಸಿ ರ್ಯಾಂಕಿಂಗ್ ನಲ್ಲಿ ರೋಹಿತ್ ಈಗ ದ್ವಿತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications