For Quick Alerts
ALLOW NOTIFICATIONS  
For Daily Alerts
 

IND vs WI: ಭಾರತ vs ವೆಸ್ಟ್ ಇಂಡೀಸ್ ಸರಣಿ ಮರುನಿಗದಿ?; ವೇಳಾಪಟ್ಟಿ ಸಂಘರ್ಷ ಎದುರಿಸುತ್ತಿರುವ ಕೆರಿಬಿಯನ್ ಪಡೆ

ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್‌ ಪ್ರವಾಸವು ವೇಳಾಪಟ್ಟಿಯ ಸಂಘರ್ಷ ಎದುರಿಸಲಿದೆ. ಜುಲೈ 12ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಆತಿಥೇಯ ಕೆರಿಬಿಯನ್ ಪಡೆಯನ್ನು ಎದುರಿಸಲಿದೆ.

ಇದೇ ವೇಳೆ ವೆಸ್ಟ್ ಇಂಡೀಸ್ ತಂಡ ಜುಲೈ 9ರವರೆಗೆ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿದೆ. ಜಿಂಬಾಬ್ವೆಯ ಹರಾರೆಯಿಂದ ರೋಸೋಗೆ ಎರಡು ದಿನಗಳ ಪ್ರಯಾಣವಾಗಿರುವುದರಿಂದ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಮರು ನಿಗದಿಗೊಳಿಸುವ ಸಾಧ್ಯತೆ ಇದೆ.

India vs West Indies Series Rescheduled?; West Indies Team Facing Schedule Conflict With WC Qualifiers

ಜುಲೈ 9ರಂದು ಜಿಂಬಾಬ್ವೆಯಲ್ಲಿ 2023ರ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳು ಪೂರ್ಣಗೊಂಡ ಮೂರು ದಿನಗಳ ನಂತರ, ವೆಸ್ಟ್ ಇಂಡೀಸ್ ತಂಡವು ಜುಲೈ 12ರಂದು ಡೊಮಿನಿಕಾದಲ್ಲಿ ಪ್ರಾರಂಭವಾಗುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಹರಾರೆಯಿಂದ ಕೆರಿಬಿಯನ್ ದ್ವೀಪದ ರಾಜಧಾನಿಯಾದ ರೋಸೋಗೆ ಹೋಗುವ ವ್ಯವಸ್ಥೆಯ ಸಮಸ್ಯೆಯು ಪರಿಸ್ಥಿತಿಗಳನ್ನು ಸಂಕೀರ್ಣಗೊಳಿಸಿದೆ. ಈ ಸಾಮಾನ್ಯ ಅಂತಾರಾಷ್ಟ್ರೀಯ ಪ್ರಯಾಣವು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ.

ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಆಗಾಗ ಸೀಮಿತ ಓವರ್‌ಗಳ ಪಂದ್ಯ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ವಿವಿಧ ತಂಡಗಳನ್ನು ಬಳಸುತ್ತದೆ. ಆದರೆ ಈ ಸಂದರ್ಭದಲ್ಲಿ ಅದು ಅಸಾಧ್ಯವೆನ್ನಲಾಗಿದೆ.

India vs West Indies Series Rescheduled?; West Indies Team Facing Schedule Conflict With WC Qualifiers

ಎರಡೂ ಸ್ವರೂಪಗಳನ್ನು ಆಡುವ ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್ ಮತ್ತು ಅಲ್ಜಾರಿ ಜೋಸೆಫ್ ಇದ್ದು, ಅವರು ಪ್ರಸ್ತುತ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಜಿಂಬಾಬ್ವೆಯಲ್ಲಿದ್ದಾರೆ. ವಾಸ್ತವವಾಗಿ ಈ ಎಲ್ಲಾ ನಾಲ್ವರು ಜೂನ್ 18ರಂದು ಯುನೈಟೆಡ್ ಸ್ಟೇಟ್ಸ್ (ಯುಎಸ್ಎ) ವಿರುದ್ಧ ವೆಸ್ಟ್ ಇಂಡೀಸ್‌ ತಂಡದ 39 ರನ್‌ಗಳ ಗೆಲುವಿನಲ್ಲಿ ಆಡಿದ್ದರು.

"ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಾವಳಿ ಫೈನಲ್ ಅರ್ಥಹೀನವಾಗಿದೆ, ಆದ್ದರಿಂದ ನಮ್ಮ ಟೆಸ್ಟ್ ಆಟಗಾರರು ಭಾಗವಹಿಸುವುದಿಲ್ಲ. ಆದರೆ ಮೊದಲು ನಾವು ಫೈನಲ್ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಬಹು-ಮಾದರಿ ಸರಣಿ ವೇಳಾಪಟ್ಟಿ
ಭಾರತ vs ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಜುಲೈ 20ರಂದು ಟ್ರಿನಿಡಾಡ್‌ನಲ್ಲಿ ಶುರುವಾಗಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಐತಿಹಾಸಿಕ 100ನೇ ಟೆಸ್ಟ್ ಪಂದ್ಯ ಇದಾಗಲಿದೆ.

ಎರಡು ಟೆಸ್ಟ್ ಪಂದ್ಯಗಳ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಯು ಆರಂಭವಾಗಲಿದ್ದು, ಭಾರತ ತಂಡದ ಪ್ರವಾಸವು ಐದು ಪಂದ್ಯಗಳ ಟಿ20 ಸರಣಿಯೊಂದಿಗೆ ತೆರೆ ಬೀಳಲಿದೆ. ಒಟ್ಟು ಎಂಟು ವೈಟ್-ಬಾಲ್ ಪಂದ್ಯಗಳನ್ನು ಜುಲೈ 27ರಿಂದ ಆಗಸ್ಟ್ 13ರವರೆಗೆ ಆಡಲಾಗುತ್ತದೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರಮವಾಗಿ ಜುಲೈ 27 ಮತ್ತು ಜುಲೈ 29ರಂದು ಮೊದಲ ಎರಡು ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇನ್ನು ಆಗಸ್ಟ್ 1ರಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಆ ಬಳಿಕ ಇಲ್ಲಿಂದಲೇ ಆಗಸ್ಟ್ 3ರಂದು ಮೊದಲ ಟಿ20 ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳು ಆಗಸ್ಟ್ 6 ಮತ್ತು 8ರಂದು ಗಯಾನಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಬ್ರೋವರ್ಡ್ ಕೌಂಟಿ ಸ್ಟೇಡಿಯಂನಲ್ಲಿ ಆಗಸ್ಟ್ 12ರಂದು ನಾಲ್ಕನೇ ಮತ್ತು ಆಗಸ್ಟ್ 13ರಂದು ಐದನೇ ಟಿ20 ಪಂದ್ಯಗಳೊಂದಿಗೆ ಭಾರತ ತಂಡದ ಪ್ರವಾಸವು ಮುಕ್ತಾಯಗೊಳ್ಳಲಿದೆ.

Story first published: Thursday, June 22, 2023, 16:53 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+