ಟೇಬಲ್ ಟೆನಿಸ್ ಬ್ಯಾಟ್ ಕೈಗೆತ್ತಿಕೊಂಡ ದೂಬೆ, ಹೋಲ್ಡರ್: ವೀಡಿಯೋ

ಕಟಕ್, ಡಿಸೆಂಬರ್ 21: ಮೆನ್ ಇನ್ ಬ್ಲೂ ತಂಡದ ಶಿವಂ ದೂಬೆ ಮತ್ತು ಮೆನ್ ಇನ್ ಮೆರೂನ್‌ನ ಜೇಸನ್ ಹೋಲ್ಡರ್ ಟೇಬಲ್ ಟೆನಿಸ್ ಆಡಿ ಗಮನ ಸೆಳೆದಿದ್ದಾರೆ. ಕಟಕ್‌ನಲ್ಲಿ ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ 3ನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕೂ ಮುನ್ನಾದಿನ ಅಂದರೆ ಶನಿವಾರ (ಡಿಸೆಂಬರ್ 21) ಇಬ್ಬರೂ ಟೇಬಲ್ ಟೆನಿಸ್ ಬ್ಯಾಟ್‌ನೊಂದಿಗೆ ಕಾಣಿಸಿಕೊಂಡರು.
ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಆತಿಥೇಯ ಭಾರತ ತಂಡಗಳು ಭಾನುವಾರದಂದು ಅಂತಿಮ ಏಕದಿನ ಪಂದ್ಯಕ್ಕಾಗಿ ಮುಖಾಮುಖಿಯಾಗಲಿವೆ. ಮೂರು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿರುವುದರಿಂದ ಎರಡೂ ತಂಡಗಳಿಗೂ ಕಟಕ್ ಗೆಲುವು ಪ್ರಮುಖವಾಗಿದೆ.
ವಿಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಮತ್ತು ಭಾರತದ ಆಲ್ ರೌಂಡರ್ ಶಿವಂ ದೂಬೆ ಟೇಬಲ್ ಟೆನಿಸ್ ಆಡುತ್ತಿರುವ ವೀಡಿಯೋವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್, ತನ್ನ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಆ ಟ್ವೀಟ್‌ನಲ್ಲಿ 'ಸೌಹಾರ್ದ ಟೇಬಲ್ ಟೆನಿಸ್ ಪಂದ್ಯವಾಡುತ್ತಿರುವ ದೂಬೆ, ಹೋಲ್ಡರ್. ಇಬ್ಬರೂ ಟಿಟಿ ಚೆನ್ನಾಗಿ ಆಟಬಲ್ಲರು,' ಎಂದು ಸಾಲೊಂದನ್ನೂ ಬರೆಯಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ 2-1ರ ಗೆಲುವನ್ನಾಚರಿಸಿತ್ತು. ಆದರೆ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲೇ ಜಯ ಸಾಧಿಸಿದ್ದ ಕೆರಿಬಿಯನ್ನರು ಕೊಹ್ಲಿ ಪಡೆಗೆ ಒತ್ತಡ ಹೇರಿದ್ದರು. ದ್ವಿತೀಯ ಏಕದಿನದಲ್ಲಿ ಭಾರತ ಗೆದ್ದಿದ್ದರಿಂದ ಸರಣಿ ಈಗ ಜೀವಂತವಾಗಿದೆ. 3ನೇ ಪಂದ್ಯದಲ್ಲೂ ಭಾರತ ಗೆದ್ದರೆ 2019ರ ವರ್ಷಾಂತ್ಯವನ್ನು ಟೀಮ್ ಇಂಡಿಯಾ ಗೆಲುವಿನೊಂದಿಗೆ ಮುಗಿಸಿದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications