ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆ ತಾಲೀಮು
ಪೋರ್ಟ್ ಆಫ್ ಸ್ಪೇನ್, ಜೂನ್ 29: ಕೆಲ ಕಾಲ ವಿಶ್ರಾಂತಿಯ ಬಳಿಕ, ಟೀಂ ಇಂಡಿಯಾವು ಮೂರನೇ ಏಕದಿನ ಪಂದ್ಯಕ್ಕಾಗಿ ಭಾರಿ ತಾಲೀಮು ನಡೆಸಿದೆ. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದಿಂದ ಸದ್ಯಕ್ಕೆ ಮುನ್ನಡೆ ಪಡೆದುಕೊಂಡಿದೆ.
ಜೂನ್ 30ರಂದು ಜಾಸನ್ ಹೋಲ್ಡರ್ ಪಡೆಯನ್ನು ವಿರಾಟ್ ಕೊಹ್ಲಿ ಪಡೆ ಎದುರಿಸಲಿದೆ.ಶಿಖರ್ ಧವನ್ ಅವರು ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಅದರಲ್ಲಿ ಧವನ್ ಅವರ ಸಹ ಆಟಗಾರರು ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದರು. ಮೈದಾನಕ್ಕೆ ಇಳಿಯದೆ ಸುತ್ತಾಟದಲ್ಲಿದ್ದ ಟೀಂ ಇಂಡಿಯಾದ ಆಟಗಾರರನ್ನು ಧವನ್ ಅವರು ಜಿಮ್ ಗೆ ಕರೆದೊಯ್ದಿದ್ದರು. ಪೋರ್ಟ್ ಆಫ್ ಸ್ಪೇನ್ ನಿಂದ ಈಗ ಆಂಟಿಗುವಾಗೆ ಬಂದಿರುವ ಟೀಂ ಇಂಡಿಯಾ, ಇಲ್ಲಿ ಎರಡು ಏಕದಿನ ಪಂದ್ಯಗಳನ್ನಾಡಲಿದೆ. ನಂತರ ಜಮೈಕಾಕ್ಕೆ ತೆರಳಲಿದೆ.
ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿರುವುದು ಕಂಡು ಬಂದಿತು.

ಅಂಟಿಗುವಾದಲ್ಲಿರುವ ಭಾರತ ತಂಡ
ಪೋರ್ಟ್ ಆಫ್ ಸ್ಪೇನ್ ನಲ್ಲಿ ಎರಡು ಪಂದ್ಯವಾಡಿದ ಭಾರತ ಒಂದು ಪಂದ್ಯವನ್ನು ಗೆದ್ದರೆ, ಮತ್ತೊಂದು ಮಳೆಗೆ ಆಹುತಿಯಾಯಿತು.ಅಂಟಿಗುವಾದಲ್ಲಿರುವ ಭಾರತ ತಂಡ, ಎರಡು ಪಂದ್ಯಗಳನ್ನಾಡಲಿದೆ. ನಂತರ ಕೊನೆಯ ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ.
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ ಅವರು ಹೆಚ್ಚೆಚ್ಚು ಲೈನ್ ಅಂಡ್ ಲೆನ್ತ್ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಂಡು ಬಂದಿತು.
ನೆಟ್ಸ್ ನಲ್ಲಿ ಶಿಖರ್ ಧವನ್
ಆರಂಭಿಕ ಆಟಗಾರ ಶಿಖರ್ ಧವನ್ ಅವರು ಉತ್ತಮ ಲಯದಲ್ಲಿದ್ದು, ನೆಟ್ಸ್ ನಲ್ಲಿ ಹೆಚ್ಚು ಸ್ವೀಪ್ ಬಾರಿಸುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದರು.
ವೇಗಕ್ಕೆ ಹೆಚ್ಚು ಒತ್ತು
ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ವೇಗಕ್ಕೆ ಹೆಚ್ಚು ಒತ್ತು ನೀಡುವುದು ಕಂಡು ಬಂದಿತು.
ವಿರಮಿಸುತ್ತಿರುವ ಕೊಹ್ಲಿ
ಹೆಚ್ಚು ಬೌನ್ಸರ್ ಗಳು, ವೈವಿಧ್ಯಮಯ ಹೊಡೆತಗಳ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಗಮನ ಹರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications