For Quick Alerts
ALLOW NOTIFICATIONS  
For Daily Alerts
 

ಇಂಜಮಾಮ್ ಉಲ್ ಹಕ್ ದಾಖಲೆ ಮುರಿಯುವರೇ ಕೊಹ್ಲಿ?

India Vs West Indies: Virat Kohli can equal Inzamam-ul-Haqs record in Test cricket

ಹೈದರಾಬಾದ್, ಅಕ್ಟೋಬರ್ 11: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ರಾಜ್ ಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಹಲವು ದಾಖಲೆಗಳನ್ನು ಮುರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಇಲ್ಲಿನ ರಾಜೀವ್ ಗಾಂಧಿ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಇಂಜಮಾಮ್ ಉಲ್ ಹಕ್ ಅವರ ದಾಖಲೆಯನ್ನು ಮುರಿಯಬಹುದಾಗಿದೆ.

25ನೇ ಶತಕದ ನೀರಿಕ್ಷೆ: ಕೊಹ್ಲಿ ಈಗಾಗಲೇ 24 ಶತಕಗಳನ್ನು ಸಿಡಿಸಿದ್ದಾರೆ. ಹಕ್ ವೃತ್ತಿಜೀವನದಲ್ಲಿ ಒಟ್ಟು 25 ಶತಕಗಳನ್ನು ಗಳಿಸಿದ್ದರು. ಈ ಸಾಧನೆಯನ್ನು ಸರಿಗಟ್ಟಲು 29ರ ಹರೆಯದ ಕೊಹ್ಲಿ ಅವರಿಗೆ ಮತ್ತೊಂದು ಶತಕ ಅವಶ್ಯವಾಗಿ ಬೇಕಿದೆ.

ಇಂಜಮಾಮ್ ಅವರು 120 ಟೆಸ್ಟ್ ಪಂದ್ಯಗಳಿಂದ 25 ಶತಕ, 49.60ರನ್ ಸರಾಸರಿಯಂತೆ 8830ರನ್ ಗಳಿಸಿದ್ದರೆ, ಕೊಹ್ಲಿ ಅವರು
ಈ ತನಕ 72 ಟೆಸ್ಟ್ ಪಂದ್ಯಗಳನ್ನು ಆಡಿ, 54.66ರ ಸರಾಸರಿಯಲ್ಲಿ 6,286 ರನ್ ಗಳಿಸಿದ್ದಾರೆ.

ಅತ್ಯಧಿಕ ಶತಕ ಗಳಿಕೆ ಪಟ್ಟಿ

ಒಟ್ಟು 24 ಶತಕಗಳನ್ನು ಸಿಡಿಸಿರುವ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 53.78ರ ಸರಾಸರಿಯಲ್ಲಿ 51 ಶತಕಗಳ ಸಹಿತ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (36), ಸುನಿಲ್ ಗವಾಸ್ಕರ್ (34) ಇದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 35 ಶತಕಗಳನ್ನು ಗಳಿಸಿದ್ದರೆ, 49 ಶತಕ ಸಿಡಿಸಿರುವ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 211 ಏಕದಿನ ಪಂದ್ಯಗಳಲ್ಲಿ 58.20ರ ಸರಾಸರಿಯಲ್ಲಿ 9,779 ರನ್ ಗಳಿಸಿದ್ದಾರೆ

Story first published: Thursday, October 11, 2018, 16:41 [IST]
Other articles published on Oct 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+