Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವಿಂಡೀಸ್: ಗೇಲ್ ಜೊತೆ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ-ವಿಡಿಯೋ

India vs West Indies: Virat Kohli shows off several dance moves in Guyana

ಗಯಾನಾ, ಆಗಸ್ಟ್ 9: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ (ಆಗಸ್ಟ್ 8) ಭಾರತ vs ವೆಸ್ಟ್ ಇಂಡೀಸ್ ಮೊದಲನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಇಂಡೀಸ್ ಬ್ಯಾಟ್ಸ್ಮನ್ ಕ್ರಿಸ್‌ ಗೇಲ್‌ ಕೂಡ ಕೊಹ್ಲಿ ಜೊತೆ ಸ್ಟೆಪ್ ಹಾಕಿದ್ದು ಕಂಡುಬಂತು.

ಗುರುವಾರದ ಪಂದ್ಯದ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 43 ಓವರ್‌ಗೆ ಮೊಟಕುಗೊಳಿಸಲಾಗಿತ್ತು. ಆದರೂ ಪಂದ್ಯ ಮುಂದುವರೆಯದೆ ಕೊನೆಗೆ ರದ್ದಾಯಿತು. ಈ ವೇಳೆ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ವಿಂಡೀಸ್‌ 13 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 54 ರನ್ ಮಾಡಿತ್ತು. ಎವಿನ್ ಲೆವಿಸ್ 36 ಎಸೆತಗಳಿಗೆ 40 ರನ್ ಸೇರಿಸಿದ್ದರು.

ಮಳೆಯ ಕಾರಣ ಪಂದ್ಯ ನಿಲುಗಡೆಯಾದಾಗ ನಿಂತು ಬೋರು ಹೊಡೆದಿದ್ದರಿಂದ ಕೊಹ್ಲಿ ಮೈದಾನದಲ್ಲಿ ಬೇರೆ ಬೇರೆ ರೀತಿಯ ಸ್ಟೆಪ್‌ಗಳನ್ನ ಹಾಕಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಡಿಜೆಗೆ ಕುಣಿಯುತ್ತಿದ್ದ ಕೊಹ್ಲಿ ಜೊತೆಗೆ ಗೇಲ್ ಕೂಡ ಒಂದುಕ್ಷಣ ಜೊತೆಯಾಗಿದ್ದು ಕಂಡುಬಂತು.

ಐಪಿಎಲ್‌ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಗೇಲ್, ವಿರಾಟ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಮೈದಾನದಲ್ಲಿ ಬ್ಯಾಟ್‌ ಹಿಡಿದು ನಿಂತಿದ್ದ ಗೇಲ್ ಕೂಡ ಕೊಹ್ಲಿ ಜೊತೆಗೆ ಸ್ಟೆಪ್‌ ಹಾಕಿದ್ದರು. ಅಂದ್ಹಾಗೆ ಗೇಲ್ ಈ ಪಂದ್ಯದಲ್ಲಿ ಕೇವಲ 4 ರನ್‌ಗೆ (31 ಎಸೆತ) ಕುಲದೀಪ್ ಯಾದವ್‌ಗೆ ವಿಕೆಟ್ ನೀಡಿದ್ದರು.

Story first published: Friday, August 9, 2019, 11:10 [IST]
Other articles published on Aug 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+