For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: 24ನೇ ಟೆಸ್ಟ್ ಶತಕ ಪೂರೈಸಿದ ನಾಯಕ ವಿರಾಟ್ ಕೊಹ್ಲಿ

ವಿಂಡೀಸ್ ವಿರುದ್ದ ಶತಕ ಪೂರೈಸಿದ ಕೊಹ್ಲಿ , ಬ್ಯಾಟಿಂಗ್ ಮುಂದುವರಿಸಿದ್ದಾರೆ | Oneindia Kannada
India vs West: Kohli completed his 24th Test ton

ರಾಜ್ ಕೋಟ್, ಅಕ್ಟೋಬರ್ 5: ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ಕೊಹ್ಲಿ ತನ್ನ 24ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಪೂರೈಸಿಕೊಂಡರು.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44264

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿ ಭಾರತಕ್ಕೆ ಆರಂಭಿಕ ಆಟಗಾರ ಪೃಥ್ವಿ ಶಾ 134 ರನ್, ಚೇತೇಶ್ವರ್ ಪೂಜಾರ 86, ಅಜಿಂಕ್ಯ ರಹಾನೆ 41, ರಿಷಬ್ ಪಂತ್ 92 ಮತ್ತು ವಿರಾಟ್ ಕೊಹ್ಲಿ 120 ರನ್ ಪೇರಿಸಿದ್ದರಿಂದ ಭಾರತ 118ನೇ ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 506 ರನ್ ಪೇರಸಿತ್ತು.

ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕೊಹ್ಲಿ 24ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಪೂರೈಸಿಕೊಂಡರಲ್ಲದೆ, ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದಲ್ಲಿ 3,000 ರನ್ ಗಡಿದಾಟಿದ ಆಟಗಾರರ ಸಾಲಿನಲ್ಲೂ ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ. ಕೊಹ್ಲಿ ಏಕದಿನದಲ್ಲಿ 35, ಟಿ20ಯಲ್ಲಿ 4 ಶತಕಗಳ ಸಾಧನೆ ಹೊಂದಿದ್ದಾರೆ.

Story first published: Friday, October 5, 2018, 12:30 [IST]
Other articles published on Oct 5, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+