
ಹೈದರಾಬಾದ್, ಅಕ್ಟೋಬರ್ 13: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತದ ಮತ್ತು ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ನಲ್ಲಿ ವಿಂಡೀಸ್ ಆಟಗಾರ ರಾಸ್ಟನ್ ಚೇಸ್ ತನ್ನ 4ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಪೂರೈಸಿದ್ದಾರೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಶನಿವಾರ (ಅಕ್ಟೋಬರ್ 13) ನಡೆದ ಇತ್ತಂಡಗಳ ದ್ವಿತೀಯ ಟೆಸ್ಟ್ ನ ದ್ವಿತೀಯ ದಿನದಾಟದ ವೇಳೆ ರಾಸ್ಟನ್ 106 ರನ್ ಪೇರಿಸುವ ಮೂಲಕ ಶತವನ್ನು ಸಂಭ್ರಮಿಸಿದರು. ಇದರೊಂದಿಗೆ ವಿಂಡೀಸ್ 101.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 311 ರನ್ ಪೇರಿಸುವುದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು.
ಒಟ್ಟು 189 ಎಸೆತಗಳನ್ನು ಎದುರಿಸಿದ ಚೇಸ್ ಶತಕ ಬಾರಿಸಿ ತಂಡಕ್ಕೆ ಬಲ ತುಂಬಿದರು. ಅನಂತರ ರಾಸ್ಟನ್, ಉಮೇಶ್ ಯಾದವ್ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಮೊದಲ ಟೆಸ್ಟ್ ಗೆ ಹೋಲಿಸಿದರೆ ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ನಲ್ಲಿ ಕೊಂಚ ಎಚ್ಚರಿಕೆ ಆಡವಾಡಿದೆ. ವಿಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ ಕೂಡ ಅರ್ಧ ಶತಕ (52) ಸೇರಿಸಿದ್ದರು.