IND Vs ZIM : ಜನ್ಮದಿನದ ಸಂಭ್ರಮದಲ್ಲೂ ಕರ್ತವ್ಯ ಮರೆಯದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮುನ್ನಾ ದಿನವಾದ ಶನಿವಾರದಂದು 5 ಗಂಟೆಗಳ ಕಠಿಣ ಅಭ್ಯಾಸ ನಡೆಸಿತು. ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದ ನಡುವೆಯೂ ಎಲ್ಲರಿಗಿಂತ ಮೊದಲು ಅಭ್ಯಾಸಕ್ಕೆ ನೆಟ್ಸ್‌ಗೆ ಆಗಮಿಸಿ ಮಾದರಿಯಾದರು.
ನವೆಂಬರ್ 5ರಂದು 34ನೇ ವರ್ಷಕ್ಕೆ ಕಾಲಿಟ್ಟಿರುವ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ, ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕಿಂತ ಕ್ರಿಕೆಟ್‌ಗೆ ಮೊದಲಿನ ಆದ್ಯತೆ ನೀಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಹತ್ವದ್ದಾಗಿರುವುದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಲು ಭಾರತ ಸಿದ್ಧವಿಲ್ಲ.
ಎಲ್ಲಾ ಆಟಗಾರರು ವಿಶ್ರಾಂತಿ ಪಡೆದಾಗಲೂ, ವಿರಾಟ್ ಕೊಹ್ಲಿ ಪಂದ್ಯವಿಲ್ಲದ ದಿನಗಳಲ್ಲಿ ಕೂಡ ತಮ್ಮ ಕಠಿಣ ದಿನಚರಿಯನ್ನು ಮುಂದುವರೆಸುತ್ತಾರೆ. ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಕನಿಷ್ಠ 4-5 ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಾರೆ. ಅಭ್ಯಾಸದ ವೇಳೆಯಲ್ಲಿಯೂ ಸಹ ಅವರು ಎಲ್ಲರಿಗಿಂತ ಮೊದಲು ನೆಟ್ಸ್‌ಗೆ ಬರುತ್ತಾರೆ, ಎಲ್ಲರ ಅಭ್ಯಾಸ ಮುಗಿದ ಮೇಲೂ ಕೊಹ್ಲಿ ಹೆಚ್ಚಿನ ಅವಧಿಗೆ ಅಭ್ಯಾಸ ಮಾಡುತ್ತಾರೆ.
ಸಾಮಾನ್ಯವಾಗಿ, ಪಂದ್ಯದ ದಿನಗಳ ಮೊದಲು ತಂಡಗಳು ಎರಡು ಅಭ್ಯಾಸ ಅವಧಿಗಳನ್ನು ತಲಾ 2 ಗಂಟೆಗಳಂತೆ ವಿಭಜಿಸುತ್ತವೆ, ಆದರೆ, ಭಾರತ ತಂಡ ವಿಭಿನ್ನ ಮಾರ್ಗದಲ್ಲಿ ಸಾಗಿದೆ. ಶುಕ್ರವಾರ ರೋಹಿತ್ ಶರ್ಮಾ ಪಡೆ ಅಭ್ಯಾಸದಿಂದ ರಜೆ ತೆಗೆದುಕೊಂಡಿದ್ದರೆ, ಶನಿವಾರ ಎಂಸಿಜಿಯಲ್ಲಿ 5 ಗಂಟೆಗಳ ಅಭ್ಯಾಸ ಮಾಡಿದ್ದಾರೆ.

ಕಠಿಣ ಅಭ್ಯಾಸ ಮಾಡಿದ ಟೀಂ ಇಂಡಿಯಾ
ಟೀಂ ಇಂಡಿಯಾದ ದಿನಚರಿಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯ ನಡುವಿನ ಮೂರು ಗಂಟೆಗಳ ಅಭ್ಯಾಸದಲ್ಲಿ ಭಾರತ ಭಾಗವಹಿಸಿತು. ತದನಂತರ ಮತ್ತೆ, ಅವರು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ದೀಪಗಳ ಬೆಳಕಿನಲ್ಲಿ ಅಭ್ಯಾಸ ಮಾಡಿದರು.
ಅಭ್ಯಾಸದಲ್ಲಿ, ಕೊಹ್ಲಿ ತಮ್ಮ ಬ್ಯಾಟಿಂಗ್ ಪ್ಯಾಡ್‌ಗಳೊಂದಿಗೆ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು. ಅಭ್ಯಾಸದ ವೇಳೆ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳು ಕೊಹ್ಲಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿರುವುದು ಕೇಳಿಬಂದಿದೆ.
ವಿರಾಟ್ ಕೊಹ್ಲಿ ಎಂಸಿಜಿ ಅಂಗಳದಲ್ಲಿ ಭಾರತೀಯ ಮಾಧ್ಯಮ ತಂಡದೊಂದಿಗೆ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಟಿ20 ವಿಶ್ವಕಪ್ ಬಳಿಕ ಕನ್ನಡಿಗ ಕೆಎಲ್ ರಾಹುಲ್ ಮದುವೆ!

ಅಭ್ಯಾಸದ ವಿಧಾನದಲ್ಲಿ ಬದಲಾವಣೆ
ಇದು ಅಭ್ಯಾಸದ ದಿನಚರಿಯಲ್ಲಿ ಇತ್ತೀಚಿನ ಬದಲಾವಣೆಯಾಗಿದೆ. ಈ ಹಿಂದೆ, ಕಳೆದ ವಿಶ್ವಕಪ್‌ನಲ್ಲಿ ಮತ್ತು ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ಪ್ರತಿದಿನ 2-3 ಗಂಟೆಗಳ ಕಾಲ ಅನುಸರಿಸಿತ್ತು. ಆದರೆ, ನಿರಂತರ ಅಭ್ಯಾಸದ ಬದಲು ಪಂದ್ಯದ ದಿನದ ಮೊದಲು ಒಮ್ಮೆ ಹೆಚ್ಚಿನ ಅವಧಿಯ ಅಭ್ಯಾಸ ಮಾಡಲು ಭಾರತ ತಂಡ ನಿರ್ಧರಿಸಿದೆ. 5 ಗಂಟೆಗಳ ಅಭ್ಯಾಸ ಆಟಗಾರರಿಗೆ ಅತಿಯಾದ ಒತ್ತಡ ಮತ್ತು ಗಾಯಗಳ ಅಪಾಯವನ್ನುಂಟು ಸಾಧ್ಯತೆ ಇದ್ದು, ಅಭ್ಯಾಸ ಮಾಡುವುದನ್ನು ಐಚ್ಛಿಕ ಮಾಡಲಾಗಿದೆ.
ಜಿಂಬಾಬ್ವೆ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಜಿಂಬಾಬ್ವೆ ಈಗಾಗಲೇ ಪಾಕಿಸ್ತಾನವನ್ನು ಸೋಲಿಸಿದೆ. ಭಾರತ ಗುಂಪಿನ ಅಗ್ರಸ್ಥಾನದಲ್ಲಿದ್ದರೂ ಇನ್ನೂ ಸೆಮಫೈನಲ್‌ಗೆ ಪ್ರವೇಶಿಸಿಲ್ಲ.

ಟಿ20 ವಿಶ್ವಕಪ್ 2022ರ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್ ಮೊಹಮ್ಮದ್ ಶಮಿ.
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications