ಟಿಕೆಟ್‌ಗಾಗಿ ಬಿಸಿಸಿಐ-ಎಂಪಿಸಿಎ ಜಟಾಪಟಿ, ಏಕದಿನ ಪಂದ್ಯ ಸ್ಥಳಾಂತರ ಸಾಧ್ಯತೆ

ಇಂಧೋರ್, ಅಕ್ಟೋಬರ್ 01: ಬಿಸಿಸಿಐ ಹಾಗೂ ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ನಡುವೆ ಶುರುವಾಗಿರುವ ಜಟಾಪಟಿ ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಇತ್ತಂಡಗಳ ನಡುವಿನ ಏಕದಿನ ಪಂದ್ಯವೊಂದು ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.
ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (ಎಂಪಿಸಿಎ)ಯ ಇಂಧೋರ್‌ನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಸ್ಥಳಾಂತರಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ.
ಸಾಮಾನ್ಯ ಕಾಂಪ್ಲಿಮೆಂಟರಿ ಪಾಸ್‌ಗಳನ್ನು ನೀಡುವ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಎಂಪಿಸಿಸಿ ನಡುವೆ ಜಟಾಪಟಿ ಆರಂಭವಾಗಿದೆ. ಬಿಸಿಸಿಐ ನಿಯಮಗಳ ಪ್ರಕಾರ ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ 90% ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲೇ ಬೇಕು.
ಬಿಸಿಸಿಐ ನಿಯಮದ ಪ್ರಕಾರ ಟಿಕೆಟ್ ಮಾರಾಟ ಮಾಡಿದರೆ ಕೇವಲ 10% ಟಿಕೆಟ್ ಮಾತ್ರ ಕಾಂಪ್ಲಿಮೆಂಟರಿ ಟಿಕೆಟ್‌ಗಳಾಗಿ ಹಂಚಲು ಮಾಡಲು ಸಾಧ್ಯ. ಬಿಸಿಸಿಐ ನಿಯಮದ ಪ್ರಕಾರ ಇಂಧೋರ್ ಸ್ಟೇಡಿಯಂನಲ್ಲಿ 2700 ಕಾಂಪ್ಲಿಮೆಂಟರಿ ಟಿಕೆಟ್‌ಗಳು ಮಾತ್ರವೇ ಮಿಕ್ಕುತ್ತವೆ.
ಇಷ್ಟೆ ಅಲ್ಲದೆ ಬಿಸಿಸಿಐ ತನಗೆ ಪ್ರಾಯೋಜಕರ ಉಚಿತ ಟಿಕೆಟ್‌ಗಳನ್ನೂ ನೀಡಲು ಕೇಳಿದೆ. ಉನ್ನತ ದರ್ಜೆಯ ಪ್ರಾಯೋಜಕರ ಟಿಕೆಟ್‌ಗಳನ್ನು ಬಿಸಿಸಿಐಗೆ ನೀಡಿದರೆ ಎಂಪಿಸಿಸಿಗೆ ಯಾವುದೇ ಕಾಂಪ್ಲಿಮೆಂಟರಿ ಟಿಕೆಟ್ ದೊರಕದು ಹಾಗಾಗಿ ಎಂಪಿಸಿಎ ಬಿಸಿಸಿಐ ಜೊತೆ ತಗಾದೆ ತೆಗೆದಿದೆ.
ಬಿಸಿಸಿಐಗೆ ಲಿಖಿತ ಪತ್ರ ಬರೆದಿರುವ ಎಂಪಿಸಿಎ 'ಬಿಸಿಸಿಐಯು ತನ್ನ ಕಾಂಪ್ಲಿಮೆಂಟರಿ ಬೇಡಿಕೆಯನ್ನು ವಾಪಸ್ ಪಡೆಯದಿದ್ದಲ್ಲಿ, ಎರಡನೇ ಏಕದಿನ ಪಂದ್ಯ ಆಯೋಜನೆಯಿಂದ ಹಿಂದೆ ಸರಿಯಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದೆ.
ಬಿಸಿಸಿಐ ನಿಯಮ ಹಾಗೂ ಅದರ ಬೇಡಿಕೆಗಳಂತೆ ನಾವು ನಡೆದುಕೊಂಡರೆ ಇರುವ 7000 ಉತ್ತಮ ದರ್ಜೆಯ ಟಿಕೆಟ್‌ಗಳಲ್ಲಿ ರಾಜ್ಯಕ್ಕೆ ದೊರೆಯುವುದು ಕೇವಲ 350 ಮಾತ್ರ ಎಂದು ಎಂಪಿಸಿಎಯ ಕಾರ್ಯದರ್ಶಿ ಅವಲತ್ತುಕೊಂಡಿದ್ದಾರೆ. ಕ್ರಿಕೆಟ್ ಕ್ರೀಡಾಗಣದಲ್ಲಿ ಉತ್ತಮ ದರ್ಜೆಯ (ಹಾಸ್ಪಿಟಾಲಿಟಿ ಪೆವಿಲಿಯನ್) ಸೀಟುಗಳಿಂದಲೇ ಹೆಚ್ಚು ಲಾಭ ಬರುತ್ತದೆ ಹಾಗಾಗಿ ಅದನ್ನು ಬಿಟ್ಟುಕೊಡಲು ಎಂಪಿಸಿಎ ಒಪ್ಪುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications