For Quick Alerts
ALLOW NOTIFICATIONS  
For Daily Alerts
 

Women's T20 World Cup: ಭಾರತ-ಪಾಕಿಸ್ತಾನ ಮುಖಾಮುಖಿ : ಸ್ಮೃತಿ ಮಂದಾನ ಅಲಭ್ಯತೆ

India Will play against Pakistan Womens In T20 World Cup Match: Smriti Mandhana Will Out

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಮುಖ್ಯ ಪಂದ್ಯಕ್ಕೆ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಅಲಭ್ಯರಾಗಿದ್ದಾರೆ.

ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿವೆ.

ಬೆರಳಿನ ಗಾಯಕ್ಕೆ ತುತ್ತಾಗಿರುವ ಉಪನಾಯಕಿ ಸ್ಮೃತಿ ಮಂದಾನ ಪಂದ್ಯದಿಂದ ಹೊರಗುಳಿಯಲಿದ್ದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡಕ್ಕೆ ಕೊನೆಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯಗಳಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಭ್ಯಾಸದ ವೇಳೆ ಮಂದಾನ ಗಾಯಗೊಂಡಿದ್ದಾರೆ, ಗಾಯದ ಪ್ರಮಾಣ ಗಂಭೀರವಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಫಿಟ್ ಆಗಿದ್ದು, ಮೊದಲನೇ ಪಂದ್ಯವನ್ನು ಆಡಲು ಸಿದ್ಧವಾಗಿದ್ದಾರೆ.

"ಹರ್ಮನ್ ಪ್ರೀತ್ ಕೌರ್ ಫಿಟ್ ಆಗಿದ್ದು ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಸ್ಮೃತಿ ಮಂದಾನ ಮೂಳೆ ಮುರಿತವಾಗಿಲ್ಲ, ಬೆರಳಿಗೆ ಸಣ್ಣ ಗಾಯವಾಗಿದೆ. ಪಾಕ್ ವಿರುದ್ಧದ ಅವರು ಆಡುವುದು ಅನುಮಾನವಾಗಿದೆ. ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ" ಎಂದು ತಂಡದ ಸ್ಟಾಂಡ್ ಇನ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಹೇಳಿದ್ದಾರೆ.

India Will play against Pakistan Womens In T20 World Cup Match: Smriti Mandhana Will Out

ಭಾರತವೇ ಗೆಲ್ಲುವ ಫೇವರಿಟ್

ಪಾಕಿಸ್ತಾನನದ ವಿರುದ್ಧದ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಭಾರತ-ಪಾಕಿಸ್ತಾನದ ನಡುವೆ ಇದುವರೆಗೂ 13 ಟಿ20 ಪಂದ್ಯಗಳು ನಡೆದಿದ್ದು, ಭಾರತ ಮಹಿಳಾ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. 11 ಏಕದಿನ ಪಂದ್ಯಗಳಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಬಿ ಗುಂಪಿನಲ್ಲಿ ಸೆಣೆಸುತ್ತಿದೆ. ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ತಂಡಗಳು ಭಾರತದ ಜೊತೆ ಬಿ ಗುಂಪಿನಲ್ಲಿ ಆಡುತ್ತಿವೆ.

India Will play against Pakistan Womens In T20 World Cup Match: Smriti Mandhana Will Out

ಉಭಯ ತಂಡಗಳು

ಭಾರತ: ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್, ಶಿಖಾ ವೈದ್ಯ, ದೇವಿಕಾ ವೈದ್ಯ, ಹರ್ಲೀನ್ ಡಿಯೋಲ್, ಅಂಜಲಿ ಸರ್ವಾಣಿ

ಪಾಕಿಸ್ತಾನ ಮಹಿಳಾ ತಂಡ: ಮುನೀಬಾ ಅಲಿ, ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಫಾತಿಮಾ ಸನಾ, ನಶ್ರಾ ಸಂಧು, ಜವೇರಿಯಾ ಖಾನ್, ಐಮನ್ ಅನ್ವರ್, ಸಾದಿಯಾ ಇಕ್ಬಾಲ್, ಆಯೇಷಾ ನಸೀಮ್, ತುಬಾ ಹಾಸನ, ಸದಾಫ್ ಶಾಮಸ್.

Story first published: Sunday, February 12, 2023, 13:19 [IST]
Other articles published on Feb 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+