IND vs SA: ಸ್ಪಿನ್ ಬಲೆಗೆ ಬಿದ್ದ ಹರಿಣಗಳ ಪಡೆ; ಭಾರತಕ್ಕೆ ಭರ್ಜರಿ ಗೆಲುವು
ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಸೋಲಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟಿ20 ಸರಣಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಸೂರ್ಯ ಕುಮಾರ್ ನೇತೃತ್ವದ ಟೀಮ್ ಇಂಡಿಯಾ ಎದುರು ತವರಿನಲ್ಲಿ ಹರಿಣಗಳ ಪಡೆ ಮಂಕಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ ಟೀಮ್ ಇಂಡಿಯಾ ಸಂಘಟಿತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಆಟ ಪ್ರದರ್ಶಿಸಿತು.
ಮೊದಲು ಟಾಸ್ ಗೆದ್ಧ ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಭಾರತ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ತೆರೆದರು.
ಆದರೆ ಏಡೆನ್ ಮಾರ್ಕ್ರಾಮ್ ಅಂದುಕೊಂಡಂತೆ ತವರು ನೆಲದಲ್ಲಿ ಅಂದುಕೊಂಡಂತೆ ನಡೆಯಲಿಲ್ಲ. ಆರಂಭದಿಂದಲ್ಲೇ ಭಾರತದ ಬ್ಯಾಟರ್‌ಗಳು ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡ ಅಭಿಷೇಕ್ ಕೇವಲ 7 ರನ್ ಗಳಿಸಿ ಔಟಾದರು. ನಂತರ ಒಂದಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಹರಿಣಗಳ ಪಡೆಯ ಬೌಲರ್‌ಗಳನ್ನು ಬೆಂಡತ್ತಿದರು. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ 21 ರನ್‌ಗೆ ತಮ್ಮ ಆಟವನ್ನು ನಿಲ್ಲಿಸಿದರು. ಮತ್ತೊಂದೆಡೆ ಅಬ್ಬರ ಆಟವಾಡಿದ ಸಂಜು ಶತಕವನ್ನು ಪೂರೈಸಿದರು. ಅವರು ಎದುರಿಸಿದ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 107 ರನ್ ಕಲೆ ಹಾಕುವ ಮೂಲಕ ವಿಕೆಟ್ ಕಳೆದುಕೊಂಡರು.
ಸಂಜು ಜೊತೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ 33 ರನ್ ಕಲೆ ಹಾಕಿ ಔಟಾದರು. ಹಾರ್ದಿಕ್ ಪಾಂಡ್ಯ (2), ರಿಂಕು ಸಿಂಗ್ (11), ಅಕ್ಸರ್ ಪಟೇಲ್ (7) ಮತ್ತು ರವಿ ಬಿಷ್ಟೋಯಿ (1) ವಿಕೆಟ್ ಕಳೆದುಕೊಂಡರು. ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು.
ಸ್ಪಿನ್ ದಾಳಿ
ಟೀಮ್ ಇಂಡಿಯಾ ನೀಡಿದ 203 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಲಿಲ್ಲ. ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಸ್ಪೋಟಕ ಬ್ಯಾಟರ್‌ಗಳಿದ್ದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಟೀಮ್ ಇಂಡಿಯಾ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ಅವಕಾಶ ನೀಡಲಿಲ್ಲ.
ಮಿಲ್ಲರ್ ಕೇವಲ 18 ರನ್ ಗಳಿಸಲಾಗಿದ್ದರೆ, ಕ್ಲಾಸೆನ್ ಕೇವಲ 25 ರನ್ ಗಳಿಸಿ ಔಟಾದರು. ಟೀಮ್ ಇಂಡಿಯಾ ಸ್ಪಿನ್ ಬಲೆಗೆ ಬಿದ್ದ ಹರಿಣಗಳ ಪಡೆ ಆಲೌಟ್ ಆಗುವ ಮೂಲಕ ಮೊದಲ ಟಿ20 ಪಂದ್ಯವನ್ನು ಕಳೆದುಕೊಂಡಿತ್ತು. ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ತಲಾ 3 ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications