For Quick Alerts
ALLOW NOTIFICATIONS  
For Daily Alerts
 

ಪಾಕ್‌ ನಾಯಕ ಪಂದ್ಯದ ಶುಲ್ಕವನ್ನು ನೀಡಿದ್ದು ಯಾರಿಗೆ?

ಏಷ್ಯಾ ಕಪ್‌ ಟಿ20 ಟೂರ್ನಿ ಮುಗಿದಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ದುಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಆಟವನ್ನು ಆಡಿ 5 ವಿಕೆಟ್‌ ಜಯ ಸಾಧಿಸಿತು. ಈ ಪಂದ್ಯವನ್ನು ಗೆದ್ದು ಭಾರತಕ್ಕೆ ತಿರುಗೇಟು ನೀಡುವ ಪಾಕ್‌ ಕನಸು ನುಚ್ಚುನೂರಾಗಿದೆ. ಭಾರತ ದಾಖಲೆಯ 9ನೇ ಬಾರಿಗೆ ಏಷ್ಯಾ ಕಪ್‌ ಪ್ರಶಸ್ತಿಯನ್ನು ಗೆದ್ದಿದೆ.

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಲೀಗ್‌ ಹಂತದ ಪಂದ್ಯದಲ್ಲೇ ಪಾಕ್‌ ವಿರುದ್ಧದ ಗೆಲವನ್ನು ದೇಶದ ಸಶಸ್ತ್ರ ಪಡೆಗಳಿಗೆ ಅರ್ಪಿಸುವುದಾಗಿ ತಿಳಿಸಿದ್ದರು. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಸೂರ್ಯ, ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ತಮಗೆ ಲಭಿಸಿದ ಪಂದ್ಯದ ಶುಲ್ಕವನ್ನು ಪಹಲ್ಗಾಮ್‌ನಲ್ಲಿ ಪೀಡಿತ ಜನರಿಗೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸೂರ್ಯ ದೇಶವಾಸಿಗಳ ಮನಸ್ಸು ಗೆದ್ದರು.

India Wins Asia Cup T20 Pakistan Captain s Donation Causes Stir

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಅನುಸರಿಸಲು ಹೋಗಿ ಪಾಕ್‌ ನಾಯಕ ಸಲ್ಮಾನ್‌ ಅಲಿ ಅಘಾ ಈಗ ಟೀಕೆಗೆ ಗುರಿಯಾಗಿದ್ದಾರೆ. ಇವರು ಸಹ ಪತ್ರಿಕಾಗೋಷ್ಠಿಯಲ್ಲಿ ಭಾರತದ ದಾಳಿಯಲ್ಲಿ ಹತ್ಯೆಗೀಡಾದ ನಾಗರಿಕರಿಗೆ ಇವರು ಸಹಾಯ ಮಾಡಿದ್ದಾರೆ. ಭಾರತದ ದಾಳಿಯಿಂದ ಪ್ರಭಾವಿತರಾದ ನಾಗರಿಕರು ಮತ್ತು ಮಕ್ಕಳಿಗೆ ನಮ್ಮ ಪಂದ್ಯ ಶುಲ್ಕವನ್ನು ದಾನ ಮಾಡಲು ನಾವು ನಿರ್ಧರಿಸಿದ್ದೇವೆ" ಎಂದು ಆಘಾ ಹೇಳಿದರು.

ಪಾಕ್‌ ನಾಯಕ ಹೇಳಿದ್ದೇನು?

ಪಾಕ್‌ ನಾಯಕ ಸಲ್ಮಾನ್‌ ಅಲಿ ಅಘಾ ತಮ್ಮ ಪಂದ್ಯದ ಶುಲ್ಕವನ್ನು ಸಂತ್ರಸ್ತರಿಗೆ ನೀಡಿದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಭಾರತದ ಸೇನೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಿತ್ತು. ಈ ವೇಳೆ ಭಾರತೀಯ ಯೋಧರು ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಕುಟುಂಬದ ಹಲವಾರು ಸಾವನ್ನಪ್ಪಿದರು. ಹಾಗಿದ್ದರೆ ಪಾಕ್‌ ನಾಯಕ ತಮ್ಮ ಪಂದ್ಯದ ಶುಲ್ಕವನ್ನು ನೀಡುವುದಿದ್ದರೆ ಯಾರಿಗೆ ನೀಡುತ್ತಾರೆ ಎಂಬ ಪ್ರಶ್ನೆಗಳು ಹುಟ್ಟಿವೆ.

India Wins Asia Cup T20 Pakistan Captain s Donation Causes Stir

ಪಹಲ್ಗಾನಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್‌ನಲ್ಲಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ದಾಳಿಯನ್ನು ನಡೆಸಿತ್ತು. ಈ ವೇಳೆ ಭಯೋತ್ಪಾದಕರ ಹಲವು ತರಬೇತಿ ಶಿಭಿರಗಳು ನಾಶವಾದವು. ಅಲ್ಲದೆ ಪಾಕ್‌ ಭಯೋತ್ಪಾದಕರಿಗೆ ಹಲವು ವರ್ಷಗಳಿಂದ ಆಶ್ರಯ ನೀಡುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿತ್ತು.

ಪಂದ್ಯದ ಫಲಿತಾಂಶ

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಪಾಕ್ ಆರಂಭಿಕರು ಸಹ ಎಚ್ಚರಿಕೆಯ ಆಟವನ್ನು ಆಡಿದರು. ಆದರೆ ಮಿಡ್ಲ್‌ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಕರಾರುವಾಕ್ ದಾಳಿಗೆ ಪಾಕ್‌ 146 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಸಹ ಕಳಪೆಯಾಗಿತ್ತು. ಆದರೆ ತಿಲಕ್ ವರ್ಮಾ ಬಾರಿಸಿದ ಅರ್ಧಶತಕ, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರ ಕೆಚ್ಚೆದೆಯ ಆಟದಿಂದ ಭಾರತ ಜಯ ಸಾಧಿಸಿತು.

Story first published: Monday, September 29, 2025, 15:35 [IST]
Other articles published on Sep 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+