ವೇಗದ ಅರ್ಧಶತಕ ಸಿಡಿಸಿದ ರಿಚಾ ಘೋಶ್: ನ್ಯೂಜಿಲೆಂಡ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಮತ್ತೆ ಸೋಲು

ಕ್ವೀನ್ಸ್‌ಟೌನ್‌ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಮತ್ತೊಮ್ಮೆ ಸೋಲನ್ನ ಕಂಡಿದ್ದು, ಐದು ಪಂದ್ಯಗಳ ಸರಣಿಯಲ್ಲಿ 0-4 ರಿಂದ ಹಿನ್ನಡೆ ಅನುಭವಿಸಿದೆ.
ನ್ಯೂಜಿಲೆಂಡ್ ನೀಡಿದ 192 ರನ್ ಗುರಿ ಬೆನ್ನತ್ತಿದ್ದ ಮಿಥಾಲಿ ರಾಜ್ ಪಡೆ, ಕಿವೀಸ್ ಬೌಲಿಂಗ್ ದಾಳಿಗೆ ಪತರುಗುಟ್ಟಿತು. ಸೃತಿ ಮಂದಾನ 13, ಶಫಾಲಿ ವರ್ಮಾ 0, ಯಶ್ತಿಕ್ ಭಾಟಿಯಾ 0, ಪೂಜಾ ವಸ್ತ್ರಾಕರ್ 4 ರನ್ ಕಲೆಹಾಕಿ ಬಹುಬೇಗನೆ ವಿಕೆಟ್ ಒಪ್ಪಿಸಿದ್ರು.
ಆದ್ರೆ ನಾಯಕಿ ಮಿಥಾಲಿ ರಾಜ್ 22 ಎಸೆತಗಳಲ್ಲಿ 30 ರನ್ ಕಲೆಹಾಕಿ ಇನ್ನಿಂಗ್ಸ್ ಮುಗಿಸಿದ್ರು. ಇವರ ಆಟದಲ್ಲಿ ಎರಡು ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಭಾರತ ಪರ ಸೋಲಿನ ನಡುವೆಯು ಅಬ್ಬರ ಮೆರೆದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಚಾ ಘೋಶ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಪರ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ರು. ಕೇವಲ 26 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ರಿಚಾ ಒಟ್ಟು 52 ರನ್ ಕಲೆಹಾಕಿದ್ದು, ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡಿತ್ತು.
ರಿಚಾ ಘೋಷ್ ಅಬ್ಬರದ ಆಟ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ ಮಹಿಳಾ ತಂಡದ ಇನ್ನಿಂಗ್ಸ್‌ಗೆ ಕೂಡ ತೆರೆಬಿದ್ದಿತು. 17.5 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟ್ ಆಗುವ ಮೂಲಕ 63 ರನ್‌ಗಳ ಹೀನಾಯ ಸೋಲು ಕಂಡಿತು. ಅಲ್ಲದೆ ಸತತ ನಾಲ್ಕು ಏಕದಿನ ಪಂದ್ಯ ಸೋಲನ್ನಪ್ಪಿದೆ.
ಇದಕ್ಕೂ ಮೊದಲು ಮಳೆಯಿಂದಾಗಿ ಪಂದ್ಯವು 20 ಓವರ್‌ಗಳಿಗೆ ಸೀಮಿತಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮಹಿಳಾ ತಂಡವು ಐದು ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ಕಿವೀಸ್ ಪರ ಎಸ್ ಡಿವೈನ್ 32, ಸೂಜಿ ಬೈಟ್ಸ್ 41, ಅಮೆಲಿಯ ಕೆರ್ರ್ ಅಜೇಯ 68 ಹಾಗೂ ಆ್ಯಮಿ ಸತ್ಯರ್‌ವೈಟ್ 32 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ ಅನ್ನು ಹೆಚ್ಚಿಸಿದ್ರು.
ಅಂತಿಮವಾಗಿ ನ್ಯೂಜಿಲೆಂಡ್ ಮಹಿಳಾ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications