Team India: ವೆಸ್ಟ್ ಇಂಡೀಸ್-ಐರ್ಲೆಂಡ್ ವಿರುದ್ಧ ಸರಣಿಗೆ ಭಾರತ ವನಿತೆಯರ ವೇಳಾಪಟ್ಟಿ ಪ್ರಕಟ
ತವರಿನಲ್ಲಿ ಭಾರತ ವನಿತೆಯರ ತಂಡ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಎದುರಿಸಲು ಸಜ್ಜಾಗಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಪ್ರಕಟಿಸಿದೆ. ಮುಂಬರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧ ಸರಣಿಗಳನ್ನು ಗೆಲ್ಲಲು ಭಾರತ ವನಿತೆಯರ ತಂಡ ರೆಡಿಯಾಗಿದೆ. ಡಿಸೆಂಬರ್‌ನಲ್ಲಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಭಾರತ ತಂಡ ಬರೋಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಭಾರತ ತಂಡವು ಡಿಸೆಂಬರ್ 15 ರಿಂದ ಡಿಸೆಂಬರ್ 27 ರವರೆಗೆ ವೆಸ್ಟ್ ಇಂಡೀಸ್‌ನೊಂದಿಗೆ ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ. ನಂತರ ಐರ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಜನವರಿಯಲ್ಲಿ ಟೀಮ್ ಇಂಡಿಯಾ ರಾಜ್‌ಕೋಟ್‌ನಲ್ಲಿ ಐರ್ಲೆಂಡ್‌ನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿದೆ.

ಭಾರತ ವನಿತೆಯರ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮತ್ತೊಮ್ಮೆ ಮುನ್ನಡೆಸುವ ನಿರೀಕ್ಷೆಯಿದೆ . ಇತ್ತೀಚೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಗುಳಿದಿತ್ತು. ಆದರೆ ಹರ್ಮನ್‌ಪ್ರೀತ್ ಕೌರ್ ಭಾರತದ ಅತ್ಯುತ್ತಮ ನಾಯಕಿ ಎಂಬುದನ್ನು ಸಾಭೀತುಪಡಿಸಿದ್ದಾರೆ.
ಭಾರತ ತಂಡವು ಅತ್ಯುತ್ತಮ ಎಡಗೈ ಆರಂಭಿಕ ಬ್ಯಾಟರ್ ಅನ್ನು ಸ್ಮೃತಿ ಮಂಧಾನ ರೂಪದಲ್ಲಿ ಹೊಂದಿದೆ. ಅಲ್ಲದೆ, ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರಂತಹ ಅದ್ಭುತ ಫಿನಿಶರ್‌ಗಳು ಕೂಡ ಇದ್ದಾರೆ. ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಅರುಂಧತಿ ರೆಡ್ಡಿ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಸ್ಪಿನ್ ಬೌಲಿಂಗ್ ಕ್ಷೇತ್ರದಲ್ಲಿ ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಆಶಾ ಶೋಭನಾ ಅವರಂತಹ ಸ್ಪಿನ್ನರ್‌ಗಳಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ
ಮೊದಲನೇ ಟಿ20- ಮುಂಬೈ, ಡಿಸೆಂಬರ್ 15- ಸಂಜೆ 7.00 ಗಂಟೆಗೆ
ಎರಡನೇ ಟಿ20- ಮುಂಬೈ, ಡಿಸೆಂಬರ್ 17- ಸಂಜೆ 7.00 ಗಂಟೆಗೆ
ಮೂರನೇ ಟಿ20- ಮುಂಬೈ, ಡಿಸೆಂಬರ್ 19- ಸಂಜೆ 7.00 ಗಂಟೆಗೆ
ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ
ಮೊದಲನೇ ಏಕದಿನ- ಬರೋಡಾ, ಡಿಸೆಂಬರ್ 22- ಮಧ್ಯಾಹ್ನ 1.30 ಗಂಟೆಗೆ
ಎರಡನೇ ಏಕದಿನ- ಬರೋಡಾ, ಡಿಸೆಂಬರ್ 24- ಮಧ್ಯಾಹ್ನ 1.30 ಗಂಟೆಗೆ
ಮೂರನೇ ಏಕದಿನ- ಬರೋಡಾ, 27 ಡಿಸೆಂಬರ್ ಮಧ್ಯಾಹ್ನ 1.30 ಗಂಟೆಗೆ
ಭಾರತ ಮತ್ತು ಐರ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ
ಮೊದಲನೇ ಏಕದಿನ- ರಾಜ್‌ಕೋಟ್, 10 ಜನವರಿ ಬೆಳಿಗ್ಗೆ 11.00 ಗಂಟೆಗೆ
ಎರಡನೇ ಏಕದಿನ- ರಾಜ್‌ಕೋಟ್, 12 ಜನವರಿ ಬೆಳಿಗ್ಗೆ 11.00 ಗಂಟೆಗೆ
ಮೂರನೇ ಏಕದಿನ- ರಾಜ್‌ಕೋಟ್, 15 ಜನವರಿ ಬೆಳಿಗ್ಗೆ 11.00 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications