ಮಹಿಳಾ ಕ್ರಿಕೆಟ್: 2ನೇ ಏಕದಿನದಲ್ಲಿ ಭಾರತಕ್ಕೆ ಗೆಲ್ಲಲು 174 ರನ್ ಗುರಿ ನೀಡಿದ ಲಂಕಾ; ಸರಣಿ ಗೆಲುವಿನತ್ತ ಭಾರತದ ಕಣ್ಣು

ಭಾರತ ಮಹಿಳಾ ಕ್ರಿಕೆಟ್‍ನ ಅತ್ಯಂತ ಯಶಸ್ವಿಯುತ ಆಟಗಾರ್ತಿ ಎಂದೇ ಖ್ಯಾತಿಯನ್ನು ಪಡೆದಿದ್ದ ಮಿಥಾಲಿ ರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ನಂತರ ಭಾರತ ವನಿತೆಯರ ಕ್ರಿಕೆಟ್ ತಂಡ ಮೊದಲ ಹಣಾಹಣಿಯಲ್ಲಿ ಭಾಗವಹಿಸಿದೆ. ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿರುವ ಭಾರತ ವನಿತೆಯರ ಕ್ರಿಕೆಟ್ ತಂಡ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಮಿಥಾಲಿ ರಾಜ್ ನಾಯಕತ್ವದಿಂದ ಕೆಳಗಿಳಿದ ನಂತರ ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವವನ್ನು ಹರ್ಮನ್ ಪ್ರೀತ್ ಕೌರ್ ವಹಿಸಿಕೊಂಡಿದ್ದು, ತಂಡ ಶ್ರೀಲಂಕಾ ವಿರುದ್ಧ ಮೊದಲಿಗೆ ನಡೆದ 3 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ 2 - 1 ಅಂತರದ ಗೆಲುವನ್ನು ಕಂಡಿದೆ. ಹೌದು, ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಕೊನೆಯ ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದ್ದು ಇದೀಗ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ.
ಜುಲೈ 1ರ ಶುಕ್ರವಾರದಂದು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಈಗಾಗಲೇ ಜಯ ಸಾಧಿಸಿರುವ ಟೀಮ್ ಇಂಡಿಯಾ ಇಂದು ( ಜುಲೈ 4 ) ದ್ವಿತೀಯ ಏಕದಿನ ಪಂದ್ಯದಲ್ಲಿಯೂ ಸಹ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇನ್ನು ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಫೀಲ್ಡಿಂಗ್ ಆಯ್ದುಕೊಂಡಿದ್ದು ಆತಿಥೇಯ ಶ್ರೀಲಂಕಾ ಆಟಗಾರ್ತಿಯರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ 50 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲ್ ಔಟ್ ಆಗಿದ್ದು, 174 ರನ್‌ಗಳ ಗುರಿಯನ್ನು ಪ್ರವಾಸಿ ಟೀಮ್ ಇಂಡಿಯಾಗೆ ನೀಡಿದೆ.

ಶ್ರೀಲಂಕಾ ಆಟಗಾರ್ತಿಯರ ಪ್ರದರ್ಶನ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಹಸಿನಿ ಪೆರೇರ ಮತ್ತು ವಿಶ್ಮಿ ಗುಣರತ್ನೆ ಕಣಕ್ಕಿಳಿದರು. ಹಸಿನಿ ಪೆರೇರ ಡಕ್ ಔಟ್ ಆದರೆ, ವಿಶ್ಮಿ ಗುಣರತ್ನೆ 3 ರನ್ ಕಲೆ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಚಾಮರಿ ಅಟಪಟ್ಟು 27 ರನ್ ಮತ್ತು ಹರ್ಷಿತಾ ಮಾಧವಿ ಡಕ್ ಔಟ್ ಆದರು. ಇನ್ನುಳಿದಂತೆ ಅನುಷ್ಕಾ ಸಂಜೀವನಿ 25, ನೀಲಾಕ್ಷಿ ಡಿಸಿಲ್ವಾ 32, ಕವಿಶಾ ದಿಲ್ ಹಾರಿ 5, ರಣಸಿಂಘೆ 10, ರಣವೀರ 6, ಅಚಿನಿ ಕುಲಸೂರ್ಯ ಡಕ್ ಔಟ್ ಆದರು. ಅಂತಿಮವಾಗಿ ಅಜೇಯರಾಗಿ ಉಳಿದ ಅಮಾ ಕಾಂಚನಾ 47 ರನ್ ಕಲೆ ಹಾಕಿದರು.
ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ಕಬಳಿಸಿದರು.

ಭಾರತ ಆಡುವ ಬಳಗ
ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಿಚಾ ಘೋಷ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್

ಶ್ರೀಲಂಕಾ ಆಡುವ ಬಳಗ
ಹಾಸಿನಿ ಪೆರೇರಾ, ಚಾಮರಿ ಅಥಾಪತ್ತು (ನಾಯಕಿ), ವಿಶ್ಮಿ ಗುಣರತ್ನೆ, ಹರ್ಷಿತಾ ಮಾದವಿ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಓಷದಿ ರಣಸಿಂಗ್, ಅಮಾ ಕಾಂಚನಾ, ಇನೋಕಾ ರಣವೀರ, ಅಚಿನಿ ಕುಲಸೂರ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications