ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಹರ್‌, ಖಲೀಲ್‌, ಸೈನಿ, ಅವೇಶ್‌ ಟೀಮ್‌ ಇಂಡಿಯಾದ ನೆಟ್‌ ಬೌಲರ್ಸ್

Khaleel, Saini, Chahar, Avesh to be net bowlers for Team India in UK

ಮುಂಬಯಿ, ಏಪ್ರಿಲ್‌ 16: ಪ್ರಸಕ್ತ ಐಪಿಎಲ್‌ನಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್‌ಗಳಾದ ನವದೀಪ್‌ ಸೈನಿ, ದೀಪಕ್‌ ಚಹರ್‌, ಖಲೀಲ್‌ ಅಹ್ಮದ್‌ ಹಾಗೂ ಅವೇಶ್‌ ಖಾನ್‌ ಇಂಗ್ಲೆಂಡ್‌ನಲ್ಲಿ ಮೇ.30ರಂದು ಆರಂಭವಾಗಲಿರುವ ಐಸಿಸಿ ಒಡಿಐ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ನೆಟ್‌ ಬೌಲರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

50 ಓವರ್‌ಗಳ ಕ್ರಿಕೆಟ್‌ನ ವಿಶ್ವ ಸಮರಕ್ಕೆ ಭಾರತದ 15 ಮಂದಿ ಆಟಗಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ ಬಳಿಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ''ಭಾರತ ತಂಡದ ವಿಶ್ವಕಪ್‌ ಪೂರ್ವ ಸಿದ್ಧತೆಗಾಗಿ ಈ ಆಟಗಾರರು ನೆರವಾಗಲಿದ್ದಾರೆ,'' ಎಂದು ಬಿಸಿಸಿಐ ತಿಳಿಸಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 : ಓದುಗರ ಆಯ್ಕೆ ತಂಡಗಳು

ಯುವ ವೇಗಿಗಳು ಈಗಾಗಲೇ ಐಪಿಎಲ್‌ನ ವಿವಿಧ ಫ್ರಾಂಚೈಸಿ ತಂಡಗಳ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. 26 ವರ್ಷದ ಬಲಗೈ ವೇಗಿ ಸೈನಿ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಟ್ರೈಕ್‌ ಬೌಲರ್‌ ಎನಿಸಿದ್ದಾರೆ. ಮತ್ತೊಂದೆಡೆ ಭರ್ಜರಿ ಲಯದಲ್ಲಿರುವ ಉತ್ತರ ಪ್ರದೇಶದ ಬಲಗೈ ವೇಗಿ ದೀಪಕ್‌ ಚಹರ್‌ ಹಾಲಿ ಐಪಿಎಲ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಈ ಬಾರಿ 8 ಪಂದ್ಯಗಳಲ್ಲಿ 10 ವಿಕೆಟ್‌ ಉರುಳಿಸಿ ಮಿಂಚಿದ್ದಾರೆ.

ವಿಶ್ವಕಪ್ ತಂಡದಲ್ಲಿ ರಾಯುಡುಗಿಲ್ಲ ಸ್ಥಾನ, ಹರ್ಷ ಭೋಗ್ಲೆ ಬೇಸರ

ಇನ್ನು ಎಡಗೈ ವೇಗಿ ಆಗಿರುವ ಖಲೀಲ್‌ ಅಹ್ಮದ್‌, ಸನ್‌ರೈಸರ್ಸ್‌ ಹೈದರಾಬಾದ್‌ ಪರ ಕೇವಲ ಒಂದು ಪಂದ್ಯವನ್ನಷ್ಟೆ ಆಡಿದರೂ ಮೂರು ವಿಕೆಟ್‌ ಉರುಳಿಸಿದ್ದಾರೆ. ಅವೇಶ್‌ ಖಾನ್‌ ಕೂಡ ಡೆಲ್ಲಿ ಕ್ಯಾಪಿಟಲ್ಸ್‌ ಪರ ಒಂದು ಪಂದ್ಯವನ್ನಾಡಿದ್ದಾರೆ. ಈ ಎಲ್ಲಾ ಬೌಲರ್‌ಗಳು ಉತ್ತಮ ವೇಗವನ್ನು ಹೊಂದಿದ್ದು , ಇಂಗ್ಲೆಂಡ್‌ ನೆಲದಲ್ಲಿ ಟೀಮ್‌ ಇಂಡಿಯಾದ ನೆಟ್ಸ್ ಅಭ್ಯಾಸಕ್ಕೆ ಸೂಕ್ತ ಬೌಲರ್‌ಗಳಾಗಿದ್ದಾರೆ.

ಇದಕ್ಕೂ ಮುನ್ನ ಎಂ.ಎಸ್‌ಕೆ ಪ್ರಸಾದ್‌ ಮುಂಬಾಳತ್ವದ ಟೀಮ್‌ ಇಂಡಿಯಾ ಆಯ್ಕೆ ಸಮಿತಿಯು ವಿಶ್ವಕಪ್‌ಗೆ ಅಂತಿಮ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿತ್ತು. ತಂಡವು ಐವರು ಪರಿಣತ ಬ್ಯಾಟ್ಸ್‌ಮನ್‌ಗಳು, ಮೂವರು ವೇಗಿಗಳು, ಮೂವರು ಆಲ್‌ರೌಂಡರ್‌ಗಳು, ಇಬ್ಬರು ಪರಿಣತ ಸ್ಪಿನ್ನರ್‌ಗಳು ಹಾಗೂ ಇಬ್ಬರು ಅನುಭವಿ ವಿಕೆಟ್‌ಕೀಪರ್‌ಗಳನ್ನು ಹೊಂದಿದೆ.

ICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐ

ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡ ಇಂತಿದೆ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ರವೀಂದ್ರ ಜಡೇಜಾ.

ನೆಟ್‌ ಬೌಲರ್‌ಗಳು: ನವದೀಪ್‌ ಸೈನಿ, ದೀಪಕ್‌ ಚಹರ್‌, ಅವೇಶ್‌ ಖಾನ್‌ ಮತ್ತು ಖಲೀಲ್‌ ಅಹ್ಮದ್‌.
ಪ್ರಧಾನ ಕೋಚ್‌: ರವಿ ಶಾಸ್ತ್ರಿ ; ಬೌಲಿಂಗ್‌ ಕೋಚ್‌: ಭರತ್‌ ಅರುಣ್‌.

Story first published: Tuesday, April 16, 2019, 13:12 [IST]
Other articles published on Apr 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X