Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಎದುರಾಳಿಗಳನ್ನು ಕಾಡಬಲ್ಲರು

ಟಿ20 ವಿಶ್ವಕಪ್ 2024 ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಈ ಬಾರಿ 20 ತಂಡಗಳ ನಡುವೆ ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ವೆರ್ನಾನ್ ಫಿಲಾಂಡರ್ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಆಟಗಾರನನ್ನು ವೆರ್ನಾನ್ ಫಿಲಾಂಡರ್ ಹೆಸರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ಇತ್ತೀಚಿನ ಎಲ್ಲಾ ಫಾರ್ಮ್ಯಾಟ್‌ಗಳ ಪ್ರದರ್ಶನದಿಂದ ಪ್ರಭಾವಿತರಾದ ವೆರ್ನಾನ್ ಫಿಲಾಂಡರ್ ಅವರು ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿಗೆ ಯಾರ್ಕರ್‌ ಸ್ಪೇಷಲಿಸ್ಟ್‌ ಪ್ರಮುಖ ಕಾರಣವಾಗಬಹುದು ಎಂದು ಹೇಳಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ ಬುಮ್ರಾ, ಭಾರತ 91 ರನ್‌ಗಳ ಗೆಲುವಿನಲ್ಲಿ ಮಿಂಚಿದ್ದರು. ಅಲ್ಲದೆ ಸರಣಿಯನ್ನು 1-1 ಗೆ ಮುನ್ನಡೆಸಿದರು. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಮೊದಲ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

indian bowler Jasprit Bumrah the most complete bowler in the world’: Former South Africa pacer Vernon Philander

ಈ ಸಮಯದಲ್ಲಿ ಬುಮ್ರಾ ಒಬ್ಬ ಉತ್ತಮ ಬೌಲರ್ ಎಂದು ಫಿಲಾಂಡರ್ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಪ್ರಚಂಡ ಕೌಶಲ್ಯವನ್ನು ಹೊಂದಿದ್ದಾರೆ. ನಿಖರವಾದ ಬೌಲಿಂಗ್ ಕಲೆಯನ್ನು ಕಲಿತಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ತುಂಬಾ ಯಶಸ್ಸಿಗೆ ಕಾರಣವಾಯಿತು. ಈ ಮೊದಲು ಅವರು ವಿಕೆಟ್‌ ಪಡೆಯುವ ಎಸೆತಗಳತ್ತ ಗಮನ ಹರಿಸಿದ್ದರು. ಆದರೆ ಈಗ ಅವರ ರಣ ತಂತ್ರ ಬದಲಾಗಿದ್ದು, ಫಲ ನೀಡಿದೆ ಎಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಜಸ್ಪ್ರಿತ್ ಬುಮ್ರಾ ಕಡಿಮೆ ಎಕನಾಮಿಯೊಂದಿಗೆ ವಿಕೆಟ್ ಬೇಟೆ ನಡೆಸಬಲ್ಲ ಬೌಲರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇನ್ನು ವೇಗದ ಬೌಲರ್‌ಗಳಿಗೆ ಸಹಾಯ ನೀಡುವ ಪಿಚ್‌ಗಳು ಇದ್ದರೇ ಬುಮ್ರಾ ಅವರನ್ನು ತಡೆಯುವವರು ಯಾರು ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ವೆರ್ನಾನ್ ಫಿಲಾಂಡರ್ ಹೇಳಿದ್ದಾರೆ.

indian bowler Jasprit Bumrah the most complete bowler in the world’: Former South Africa pacer Vernon Philander

ಬುಮ್ರಾ ಹೊಸ ಚೆಂಡನ್ನು ಸ್ವಿಂಗ್ ಮಾಡುತ್ತಾರೆ ಮತ್ತು ಬ್ಯಾಟ್ಸ್‌ಮನ್ ಮುಂದೆ ಆಡಲು ಒತ್ತಾಯಿಸುತ್ತಾರೆ. ಅವರ ಯಾರ್ಕರ್‌ಗಳು ತುಂಬಾ ತೀಕ್ಷ್ಣವಾಗಿವೆ ಮತ್ತು ಇದು ಟಿ20 ಕ್ರಿಕೆಟ್‌ನಲ್ಲಿ ಅಗತ್ಯ. ಅವರು ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ವೆರ್ನಾನ್ ಫಿಲಾಂಡರ್, ಟೀಮ್ ಇಂಡಿಯಾದ ಮೊಹಮ್ಮದ್ ಶಮಿಯನ್ನು ಸಹ ಹೊಗಳಿದ್ದಾರೆ. ಮತ್ತು ಅವರು ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡುತ್ತಾರೆ. ಭಾರತದ ಪ್ರಸ್ತುತ ವೇಗದ ಬೌಲರ್‌ಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ವೆರ್ನಾನ್ ಫಿಲಾಂಡರ್ ಹೇಳಿದ್ದಾರೆ. ಬುಮ್ರಾ ಹೊರತುಪಡಿಸಿ, ಸೀಮ್ ಅನ್ನು ಚೆನ್ನಾಗಿ ಬಳಸುವ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ ಕೂಡ ಇದ್ದಾರೆ. ಆಫ್ರಿಕಾದಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ ಆದರೆ ಭಾರತದ ಫ್ಲಾಟ್ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿದ ನಂತರ ಅವರು ಇಲ್ಲಿ ಬೌಲಿಂಗ್ ಮಾಡಿದ ರೀತಿ ಶ್ಲಾಘನೀಯ ಎಂದು ಫಿಲಾಂಡರ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಐಪಿಎಲ್ ಉತ್ತಮ ವೇದಿಕೆಯಾಗಿದೆ ಆದರೆ ಅದರಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಬೇಕಾಗುತ್ತದೆ ಎಂದು ಹೇಳಿದರು. ವೇಗದ ಬೌಲರ್‌ಗಳನ್ನು ಉತ್ತಮ ಪ್ಲ್ಯಾನ್‌ಗಳಿಂದ ಪಂದ್ಯ ಆಡಿದರೆ ಯಶಸ್ಸು ಫಿಕ್ಸ್ ಎಂದಿದ್ದಾರೆ.

Story first published: Thursday, February 8, 2024, 18:14 [IST]
Other articles published on Feb 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+