Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

VIDEO: ಜಮೈಕಾದಲ್ಲಿ ಧೋನಿ ಹುಟ್ಟುಹಬ್ಬದ ಸಂಭ್ರಮಾಚರಣೆ

ಜಮೈಕಾ, ಜುಲೈ 8: ಸಾಮಾನ್ಯವಾಗಿ ಕ್ರಿಕೆಟಿಗರು ತಮ್ಮ ಹುಟ್ಟುಹಬ್ಬವನ್ನು ತಮ್ಮ ತಂಡದೊಂದಿಗೆ ಹೇಗೆ ಆಚರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.

ಡ್ರೆಸ್ಸಿಂಗ್ ರೂಮಿನಲ್ಲಿ ತಮ್ಮ ಇಷ್ಟದ ಕ್ರಿಕೆಟ್ ತಾರೆಯರು ಆಡುವ ಆಟ, ತುಂಟಾಟ, ಪಾರ್ಟಿಗಳು, ಹುಟ್ಟು ಹಬ್ಬದ ಸಂಭ್ರಮಾಚರಣೆಗಳನ್ನು ಅವರು ಸಾಮಾನ್ಯವಾಗಿ ಪತ್ರಿಕೆಗಳಲ್ಲೋ ವೆಬ್ ಸೈಟ್ ಗಳಲ್ಲೋ ಓದಿ ಮನತಣಿಸಿಕೊಳ್ಳುತ್ತಾರೆ.

Indian cricket team celebragtes MS Dhoni's birthaday in Jamaica

ಇತ್ತೀಚೆಗೆ, ಕ್ರಿಕೆಟಿಗರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವಾರು ಫೋಟೋಗಳನ್ನು, ವಿಡಿಯೋ ತುಣುಕುಗಳನ್ನು ಹಾಕುವುದರಿಂದ ಅಭಿಮಾನಿಗಳಿಗೆ ಕೊಂಚ ಹೆಚ್ಚಿನ ರಂಜನೆ ಈ ವಿಚಾರದಲ್ಲಿ ಸಿಗುತ್ತಿದೆ.

ಆದರೆ, ಜಮೈಕಾದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮಿನಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಶನಿವಾರ ಧೋನಿ ಹುಟ್ಟುಹಬ್ಬವನ್ನು ಆಚರಿಸಿರುವ ವಿಡಿಯೋವೊಂದನ್ನು ಖುದ್ದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟಿಸಿದೆ.

ಈ ವಿಡಿಯೋ ನೋಡಲು ಮಜವಾಗಿದೆ. ಕೇಕ್ ಕತ್ತರಿಸುವಾಗ ಇತರರು ತಮ್ಮ ಮುಖಕ್ಕೆ ಕೇಕ್ ಬಳಿಯುವುದನ್ನು ತಪ್ಪಿಸಲು ಧೋನಿ ಖುದ್ದಾಗಿ ಬಗ್ಗಿ ಕೇಕ್ ನೊಳಕ್ಕೆ ಮುಖ ತಾಗಿಸಿ ಕೇಕ್ ಹಚ್ಚಿಕೊಳ್ಳುತ್ತಾರೆ. ಇದೇ ವೇಳೆ, ತಂಡದ ಇತರ ಆಟಗಾರರಾದ ಯುವರಾಜ್ ಸಿಂಗ್, ಶಿಖರ್ ಧವನ್ ಮುಂತಾದವರು ಕೇಕ್ ಬಳಿದು ಸಂಭ್ರಮಿಸುತ್ತಾರೆ.

ಕೇಕ್ ಬಳಿಯಲ್ಪಟ್ಟ ಧೋನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಮತ್ತಿತರರು ಅವನ್ನು ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಾಕಿಕೊಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+