ಮೋದಿಗೆ #NoCricketWithPakistan ಟ್ವೀಟ್
ಬೆಂಗಳೂರು, ನ.26: ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಡಿ.15 ರಿಂದ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ಗುರುವಾರ ಸುಳಿವು ನೀಡಿದ್ದಾರೆ.ಈ ಸುದ್ದಿ ಹೊರಬಂದ ಬೆನ್ನಲ್ಲೇ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. #NoCricketWithPakistan ಎಂದು ಮೋದಿ ಹ್ಯಾಂಡಲ್ ಹಾಕಿ ಟ್ವೀಟ್ ಮಾಡಿ ಮನವಿ ಮಾಡುತ್ತಿದ್ದಾರೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಡಿಸೆಂಬರ್ 15ರಿಂದ ಟೂರ್ನಿ ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ20 ಪಂದ್ಯಗಳು ನಡೆಯಲಿದೆ. ಜನವರಿ ಮೊದಲ ವಾರದಲ್ಲಿ ಟೆಸ್ಟ್ ಪಂದ್ಯಗಳು ಇಂಗ್ಲೆಂಡ್ ನಲ್ಲಿ ನಡೆಯುವ ಸಾಧ್ಯತೆಯಿದೆ. 2007ರ ನಂತರ ಉಭಯ ದೇಶಗಳ ನಡುವೆ ಟೆಸ್ಟ್ ಸರಣಿ ನಡೆದಿಲ್ಲ. ಆದರೆ, ಪಾಕಿಸ್ತಾನ ತಂಡ 2012-13ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು.[ಡಿಸೆಂಬರ್ 15ರಿಂದ ಭಾರತ- ಪಾಕಿಸ್ತಾನ ಸರಣಿ ಆರಂಭ?]
ನವೆಂಬರ್ 26 ರಂದು ಮುಂಬೈ ಮೇಲೆ ಉಗ್ರರ ದಾಳಿ ನಡೆದ ಕಹಿ ನೆನಪು ಜನರ ಮನಸಿನಲ್ಲಿರುವಾಗಲೇ ಪಾಕಿಸ್ತಾನದ ಜೊತೆ ಕ್ರಿಕೆಟ್ ಬಾಂಧವ್ಯ ಬೆಳೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನ ಪ್ರಶ್ನಿಸಿದ್ದಾರೆ. 166 ಅಮಾಯಕರ ಬಲಿಗೆ ಬೆಲೆಯೇ ಇಲ್ಲವೇ ಎಂದು ಕೇಳಲಾಗುತ್ತಿದೆ. ಕಳೆದ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 76 ರನ್ ಗಳ ಜಯ ದಾಖಲಿಸಿತ್ತು.

ಮೋದಿ ಹ್ಯಾಂಡಲ್ ಹಾಕಿ ಟ್ವೀಟ್
ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಡಿ.15 ರಿಂದ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ಗುರುವಾರ ಸುಳಿವು ನೀಡಿದ್ದಾರೆ.ಈ ಸುದ್ದಿ ಹೊರಬಂದ ಬೆನ್ನಲ್ಲೇ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. #NoCricketWithPakistan ಎಂದು ಮೋದಿ ಹ್ಯಾಂಡಲ್ ಹಾಕಿ ಟ್ವೀಟ್ ಮಾಡಿ ಮನವಿ ಮಾಡುತ್ತಿದ್ದಾರೆ.
ನಿಜಕ್ಕೂ ಇದು ನಾಚಿಕೆಗೇಡಿನ ವಿಷಯ
ನಿಜಕ್ಕೂ ಇದು ನಾಚಿಕೆಗೇಡಿನ ವಿಷಯ. 26/11 ದುರ್ಘಟನೆ ನಿಮಗೆ ನೆನಪಾಗುತ್ತಿಲ್ಲವೇ?
ಪಾಕಿಸ್ತಾನ ಕ್ರಿಕೆಟ್ ಸಾಯಲಿ
ಪಾಕಿಸ್ತಾನ ಕ್ರಿಕೆಟ್ ನೈಸರ್ಗಿಕವಾಗಿ ಸಾಯಲಿ
ಫ್ರಾನ್ಸಿಗೂ ನಮಗೂ ಏನು ವ್ಯತ್ಯಾಸ
ಫ್ರಾನ್ಸಿಗೂ ನಮಗೂ ಏನು ವ್ಯತ್ಯಾಸ? ಅವರು ಉಗ್ರರನ್ನು ಕೊಲ್ಲುತ್ತಾರೆ, ನಾವು ಕ್ರಿಕೆಟ್ ಆಡುತ್ತೇವೆ.
ಎನ್ ಎಸ್ ಎಗೆ ಸಹಾಯವಾಗುತ್ತದೆ
ಎನ್ ಎಸ್ ಎಗೆ ಸಹಾಯವಾಗುತ್ತದೆ. ದಾವೂದ್ ಗೆ ಹ್ಯಾಡ್ಸ್ ಅಪ್ ಹೇಳಿ ಹಿಡಿಯುತ್ತಾರೆ.
#NoCricketWithPakistan ಭಾರಿ ಚರ್ಚೆ
#NoCricketWithPakistan ಭಾರಿ ಚರ್ಚೆ, ಏಕೆಯಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications