ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ರಾಂಚಿಯ ರಸ್ತೆಯಲ್ಲಿ 1980ರ ದಶಕದ ಸುಂದರಿಯ ಜೊತೆಗೆ ಸುತ್ತಾಡಿದ್ದಾರೆ. 4 ದಶಕದ ಹಿಂದಿನ ಸುಂದರಿ ಎಂದರೆ ಈಗ ವಯಸ್ಸಾಗರಬಹುದು ಎಂದು ನೀವು ಎಂದುಕೊಳ್ಳಬಹುದು. ವಯಸ್ಸೇನೋ ಆಗಿದೆ ನಿಜ, ಆಕೆ ಈಗಲೂ ಸುಂದರಿಯೆ. ರಸ್ತೆಯಲ್ಲಿ ಹೋಗುತ್ತಿದ್ದಾಳೆಂದರೆ ಎಲ್ಲರ ಚಿತ್ತವನ್ನೂ ತನ್ನತ್ತ ಸೆಳೆಯುವ ಸುರಸುಂದರಿ! ಅದೇನೇ ಇರ್ಲಿ ಧೋನಿಗೆ ಇದೆಲ್ಲಾ ಯಾಕ್ ಬೇಕಪ್ಪಾ ಅಂತ ನಿಮಗೆಲ್ಲಾ ಅನಿಸಬಹುದು. ಪೂರ್ತಿ ಕಥೆ ಹೇಳ್ತೀವಿ ಮುಂದೆ ಓದಿ..
ಅಂದಹಾಗೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸುತ್ತಾಡಿದ ಆ ಸುಂದರಿ ಬೇರೆ ಯಾರೂ ಅಲ್ಲ. 1980ರ ದಶಕದ ರೋಲ್ಸ್ ರಾಯ್ಸ್ ಕಾರು. ತಮ್ಮ ಈ ವಿಂಟೇಜ್ ಕಾರಿನಲ್ಲಿ ಮಾಹಿ ರಾಂಚಿಯ ರಸ್ತೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ. ನೀಲಿ ಬಣ್ಣದ ಈ ಕಾರಿನಲ್ಲಿ ಧೋನಿ ಡ್ರೈವಿಂಗ್ ಮಾಡಿಕೊಂಡಿರಿವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಎಂಎಸ್ ಧೋನಿಯ ಬೈಕ್ ಕಾರುಗಳನ್ನು ಸಂಗ್ರಹಿಸುವ ಹವ್ಯಾಸದ ಬಗ್ಗೆ ಕ್ರಿಕೆಟ್ ಅಭಿಮಾನಿಗಳೆಲ್ಲರಿಗೂ ಮಾಹಿತಿ ಇದ್ದೇ ಇದೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಹಾಗೂ ಸುನಿಲ್ ಜೋಶಿ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದಾಗ ಅವರ ಬೈಕ್ ಹಾಗೂ ಕಾರುಗಳ ಸಂಗ್ರಹದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಸ್ವತಃ ಧೋನಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಸುತ್ತಾಡಿದ ವಿಡಿಯೋ ಕೂಡ ವೈರಲ್ ಆಗಿದೆ.
ಎಂಎಸ್ ಧೋನಿ ಸಾಮಾಜಿಕ ಜಾಲತಾಣವನ್ನು ಬಳಸುವುದು ಬಹಳ ಅಪರೂಪ. ಹೀಗಾಗಿ ಧೋನಿಯ ವೈಯಕ್ತಿಕ ಬದುಕಿನ ಮಾಹಿತಿಗಳು ಅಭಿಮಾನಿಗಳಗೆ ತಿಳಿಯುವುದಿಲ್ಲ. ಈ ತಿಂಗಳಾರಂಭದಲ್ಲಿ ತಮ್ಮ ಬಹುಟ್ಟು ಹಬ್ಬದ ದಿನ ನಾಯಿಗಳ ಜೊತೆಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವಿಡಿಯೋವನ್ನು ಧೋನಿ ಹಂಚಿಕೊಂಡಿದ್ದರು. ಅದನ್ನು ಬಿಟ್ಟು ತಮ್ಮ ಅಭ್ಯಾಸದ್ದಾಗಲೀ, ತರಬೇತಿ ಅಥವಾ ಪಾರ್ಟಿಯ ವಿಡಿಯೋ ಯಾವುದನ್ನು ಕೂಡ ಮಾಹಿ ಹಂಚಕೊಳ್ಳುವುದಿಲ್ಲ.
ಇನ್ನು ಧೋನಿಯ ಅಟೊಮೊಬೈಲ್ ಸಂಗ್ರಹದಲ್ಲಿ 15ಕ್ಕೂ ಹೆಚ್ಚು ಕಾರುಗಳು ಹಾಗೂ ಕವಾಸಕಿ ನಿಂಜ, ಡುಕಾಟಿ, ಹಾರ್ಲೆ ಡೆವಿಡ್ಸನ್‌ನಂತಾ ಬ್ರ್ಯಾಂಡ್‌ಗಳು ಸೇರಿದಂತೆ 70ರಷ್ಟು ಐಶಾರಾಮಿ ಬೈಕ್‌ಗಳು ಇವೆ. ಇದೀಗ ಧೋನಿ ರೋಲ್ಸ್ ರಾಯ್ಸ್ ಕಾರಿನ ಸಂಚಾರ ಕಾರಿಗಳ ಮೇಲಿನ ಮೊಹಕ್ಕೆ ಮತ್ತೊಂದು ಉದಾಹರಣೆ.