For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಕೋಚ್ ಆಗಿ ಭಾರತದ ಮಾಜಿ ಆಲ್‌ರೌಂಡರ್ ನೇಮಕ

Indian Former Cricketer Sridharan Sriram Appointed Bangladesh Coach For Asia Cup, T20 World Cup

ಭಾರತದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ ಅವರು ಮುಂಬರುವ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ 2022 ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ 2022ಗಾಗಿ ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

'ದಿ ಡೈಲಿ ಸ್ಟಾರ್' ಪತ್ರಿಕೆಯ ವರದಿಯೊಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ನಿರ್ದೇಶಕರ ಹೇಳಿಕೆಯನ್ನು ಉಲ್ಲೇಖಿಸಿ, ಶ್ರೀಧರನ್ ಶ್ರೀರಾಮ್ ಅವರ ನೇಮಕಾತಿಯನ್ನು ದೃಢಪಡಿಸಿದರು ಮತ್ತು "ಹೌದು, ನಾವು ಶ್ರೀಧರನ್ ಶ್ರೀರಾಮ್ ಅವರನ್ನು ವಿಶ್ವಕಪ್‌ವರೆಗೆ ಆಯ್ಕೆ ಮಾಡಿದ್ದೇವೆ," ಎಂದು ಹೇಳಿದರು.

"ನಾವು ತಾಜಾ ಮನಸ್ಥಿತಿಯೊಂದಿಗೆ ಮುನ್ನಡೆಯುತ್ತಿರುವಾಗ, ಹೊಸ ಕೋಚ್ ಅನ್ನು ಏಷ್ಯಾಕಪ್‌ನಿಂದಲೇ ನೋಡಲಾಗುತ್ತದೆ. ಇದೇ ವೇಳೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಮ್ಮ ಮುಖ್ಯ ಗುರಿಯಾಗಿರುವುದರಿಂದ, ಶ್ರೀಧರನ್ ಶ್ರೀರಾಮ್ (ಹೊಸ ಕೋಚ್) ಅವರನ್ನು ಏಷ್ಯಾ ಕಪ್‌ನಿಂದ ನೇಮಕ ಮಾಡಿಕೊಳ್ಳದಿದ್ದರೆ ಹೊಂದಿಕೊಳ್ಳಲು ಸಮಯ ಸಿಗುವುದಿಲ್ಲ, ಹಾಗಾಗಿ ನೇಮಕ ಮಾಡಲಾಗಿದೆ," ಎಂದರು.

Indian Former Cricketer Sridharan Sriram Appointed Bangladesh Coach For Asia Cup, T20 World Cup

ಶ್ರೀಧರನ್ ಶ್ರೀರಾಮ್ 2000 ಮತ್ತು 2004ರ ನಡುವೆ ಎಂಟು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್-ಬೌಲಿಂಗ್ ತರಬೇತುದಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು. ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಅಡಿಯಲ್ಲಿ, 2016ರಲ್ಲಿ ಶ್ರೀಧರನ್ ಶ್ರೀರಾಮ್ ಅವರಿಗೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಲಾಗಿತ್ತು.

46 ವರ್ಷ ವಯಸ್ಸಿನ ಶ್ರೀರಾಮ್ ಅವರು 133 ಪ್ರಥಮ ದರ್ಜೆ ಪಂದ್ಯಗಳಲ್ಲಿ 52.99 ಸರಾಸರಿಯಲ್ಲಿ 32 ಶತಕ ಮತ್ತು 36 ಅರ್ಧಶತಕಗಳೊಂದಿಗೆ 9,539 ರನ್ ಗಳಿಸಿದರು. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 85 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ತನ್ನ ಸ್ಪಿನ್ ಬೌಲಿಂಗ್ ಕೋಚ್ ಪಾತ್ರವನ್ನು ಕೇಂದ್ರೀಕರಿಸಲು 46 ವರ್ಷ ವಯಸ್ಸಿನ ಶ್ರೀಧರನ್ ಶ್ರೀರಾಮ್ ಇತ್ತೀಚೆಗೆ ಆಸ್ಟ್ರೇಲಿಯದ ಆ ಸ್ಥಾನದಿಂದ ಕೆಳಗಿಳಿದರು.

Indian Former Cricketer Sridharan Sriram Appointed Bangladesh Coach For Asia Cup, T20 World Cup

ಆದಾಗ್ಯೂ, ದಕ್ಷಿಣ ಆಫ್ರಿಕಾದ ರಸೆಲ್ ಡೊಮಿಂಗೊ ​​ಅವರು ಟೆಸ್ಟ್ ತಂಡದ ಕೋಚಿಂಗ್ ಉಸ್ತುವಾರಿಯನ್ನು ಮುಂದುವರಿಸುತ್ತಾರೆ ಎಂದು ಬಿಸಿಬಿ ಅಧಿಕಾರಿ ಹೇಳಿದ್ದಾರೆ. "ನವೆಂಬರ್‌ನಲ್ಲಿ ನಾವು ಭಾರತದ ವಿರುದ್ಧ ಟೆಸ್ಟ್ ಪಂದ್ಯವನ್ನು ಹೊಂದಿರುವುದರಿಂದ ಸದ್ಯಕ್ಕೆ ಟೆಸ್ಟ್ ತಂಡಕ್ಕೆ ಮಾರ್ಗದರ್ಶನ ನೀಡುವಲ್ಲಿ ಡೊಮಿಂಗೊ ​​ತನ್ನ ಪಾತ್ರವನ್ನು ಮುಂದುವರಿಸುತ್ತಾರೆ," ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಹೇಳಿದೆ.

Story first published: Friday, August 19, 2022, 15:44 [IST]
Other articles published on Aug 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+