Hockey Asia Cup 2025: ಭಾರತ ಶುಭಾರಂಭ: ಹರ್ಮನ್ ಪ್ರೀತ್ ಮಿಂಚು
ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಮೂರು ಗೋಲು ಹಾಗೂ ಜುಗ್ರಾಜ್ ಸಿಂಗ್ ಬಾರಿಸಿದ ಒಂದು ಗೋಲು ನೆರವಿನಿಂದ ಶುಕ್ರವಾರದಿಂದ ಬಿಹಾರದ ರಾಜ್‌ಗಿರ್‌ನಲ್ಲಿ ಆರಂಭವಾಗಿರುವ ಹಾಕಿ ಏಷ್ಯಾ ಕಪ್ 2025 ರಲ್ಲಿ ಆತಿಥೇಯ ಭಾರತ ತಂಡ ಶುಭಾರಂಭ ಮಾಡಿದೆ. ಗ್ರೂಪ್ ಎ ನಲ್ಲಿ ಭಾರತ 4-3 ಗೋಲುಗಳ ಅಂತರದಿಂದ ಚೀನಾ ತಂಡವನ್ನು ಮಣಿಸಿತು. ಈ ಮೂಲಕ ಭಾರತ ಜಯಗಳಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದೆ. ಭಾರತದ ಪರ ನಾಲ್ಕು ಗೋಲುಗಳು ಪೆನಾಲ್ಟಿಗಳಿಂದಲೇ ಬಂದಿದ್ದವಿ.
ಈ ಪಂದ್ಯದಲ್ಲಿ ಭಾರತ ಗಳಿಸಿದ ನಾಲ್ಕು ಗೋಲುಗಳು ಪೆನಾಲ್ಟಿಗಳ ಮೂಲಕ ಬಂದಿವೆ. ಈ ಪಂದ್ಯದಲ್ಲಿ ಚೀನಾ ಸಹ ಪೆನಾಲ್ಟಿ ಮೂಲಕವೇ ಮೊದಲ ಗೋಲಿನ ನಗೆ ಬೀರಿತು. ಈ ಮೂಲಕ ಪ್ರವಾಸಿ ತಂಡ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದರೆ ಈ ಅಂತರದಿಂದ ಧೃತಿ ಗೆಡದ ಭಾರತ ಎರಡನೇ ಅವಧಿಯ ಆರಂಭದಲ್ಲಿ ಗೋಲುಗಳ ಅಂತರವನ್ನು ಸಮನಾಗಿಸುವಲ್ಲಿ ಶ್ರಮಿಸಿತು. ಈ ಮುನ್ನಡೆ ಮತ್ತಷ್ಟ ಶ್ರಮಿಸುವಲ್ಲಿ ನಾಯಕ ಹರ್ಮನ್ ಪ್ರಿತ್ ಕೌರ್ ಪ್ರಮುಖ ಪಾತ್ರವನ್ನು ವಹಿಸಿತು. ಈ ಅವಧಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿತು.

ಮೂರನೇ ಅವಧಿಯ ಆರಂಭದಲ್ಲೇ ಭಾರತ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿತು. ಈ ಅವಧಿಯಲ್ಲಿ ಚೀನಾ ಸಹ 2 ಗೋಲು ಬಾರಿಸಿತು. ಪರಿಣಾಮ ಉಭಯ ತಂಡಗಳು ತಲಾ 3 ಗೋಲು ಬಾರಿಸಿದವು. ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಸಿಂಗ್ ಪಂದ್ಯದ 47 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ಈ ಮೂಲಕ ಭಾರತ ಗೋಲುಗಳ ಸಂಖ್ಯೆ ಹೆಚ್ಚಾಯಿತು. ಚೀನಾ ತಂಡ ಕೊನೆಯ ವರೆಗೂ ಗೋಲು ಗಳಿಸಲು ಪ್ರಯತ್ನಿಸಿತು ಆದರೆ ಯಶಸ್ವಿಯಾಗಲಿಲ್ಲ. ಈ ಗೆಲುವಿನೊಂದಿಗೆ, ಭಾರತ ತಂಡವು ಗ್ರೂಪ್-ಎ ಅಂಕ ಪಾಯಿಂಟ್ ಪಟ್ಟಿಯಲ್ಲಿಎರಡನೇ ಸ್ಥಾನದಲ್ಲಿದೆ.
ಜಪಾನ್‌ಗೆ ಅಗ್ರ ಸ್ಥಾನ
ಶುಕ್ರವಾರ ನಡೆದ ಪಂದ್ಯಗಳಲ್ಲಿ ಮಲೇಷ್ಯಾ 4-1 ಗೋಲುಗಳಿಂದ ಬಾಂಗ್ಲಾದೇಶವನ್ನು, ಕೊರಿಯಾ 7-0 ಗೋಲುಗಳಿಂದ ಚೈನಿಸ್ ತೈಪೇಯನ್ನು, ಜಪಾನ್ 7-0 ಗೋಲುಗಳಿಂದ ಖಜಕಿಸ್ತಾನ್‌ವನ್ನು ಮಣಿಸಿತು. ಜಪಾನ್ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications