ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ: ವಿಡಿಯೋ

ಗಾಯದ ಕಾರಣ ಏಷ್ಯಾ ಕಪ್‌ನಿಂದ ಹೊರಗುಳಿದಿರುವ ಭಾರತದ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಅಭ್ಯಾಸವನ್ನು ಆರಂಭಿಸಿದ್ದಾರೆ. ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೂಮ್ರಾ ಅಭ್ಯಾಸವನ್ನು ನಡೆಸುತ್ತಿದ್ದು ಚೇತರಿಸಿಕೊಳ್ಳುತ್ತಿರುವ ಸುಳಿವು ನೀಡಿದ್ದಾರೆ. ಹೀಗಾಗಿ ಏಷ್ಯಾ ಕಪ್‌ನ ಬಳಿಕ ವಿಶ್ವ ಕಪ್ ಟೂರ್ಇಯಿಂದಲೂ ಹೊರಗುಳಿಯಲಿದ್ದಾರ ಎಂಬ ಅಭಿಮಾನಿಗಳ ಆತಂಕಕ್ಕೆ ಸಣ್ಣ ನಿರಾಳತೆ ಸಿಕ್ಕಂತಾಗಿದೆ.
ಗಾಯದ ಕಾರಣದಿಂದಾಗಿ ಏಷ್ಯಾ ಕಪ್‌ನ ಸ್ಕ್ವಾಡ್‌ನಿಂದ ಜಸ್ಪ್ರೀತ್ ಬೂಮ್ರಾ ಹೊರಬಿದ್ದ ಬಳಿಕ ಅವರ ಫಿಟ್‌ನೆಸ್ ಬಗ್ಗೆ ಕಳವಳವುಂಟಾಗಿತ್ತು. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಸದ್ಯ ಎನ್‌ಸಿಎನಲ್ಲಿ ರಿಹ್ಯಾಬಿಲಿಟೇಶನ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಫಿಟ್‌ನೆಸ್ ವಿಚಾರವಾಗಿ ಚರ್ಚೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ವಿಡಿಯೋವನ್ನು ಬೂಮ್ರಾ ಹಂಚಿಕೊಂಡಿದ್ದು "ಯಾವುದೇ ಅಡೆತಡೆಗಳು ದೊಡ್ಡದಲ್ಲ" ಎಂಬ ಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಸ್ಪಷ್ಟ ಸಂದೇಶ ನೀಡಿದ ಬೂಮ್ರಾ
ಜಸ್ಪ್ರೀತ್ ಬೂಮ್ರಾ ಹಂಚಿಕೊಂಡಿರುವ ವಿಡಿಯೋದಿಂದಾಗಿ ಅಭಿಮಾನಿಗಳಿಗೆ ತಮ್ಮ ಚೇತರಿಕೆಯ ಬಗ್ಗೆ ಸುಳಿವು ನೀಡಿದಂತಾಗಿದೆ. ಇದರಿಂದಾಗಿ ಮುಂದಿನ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಬೂಮ್ರಾ ಕಣಕ್ಕಿಳಿಯುವ ವಿಶ್ವಾಸ ಮೂಡಿದೆ. ಅಕ್ಟೋಬರ್ 16ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ನವೆಂಬರ್ 13ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯವಾಗಲಿದೆ.

ಕಳೆದ ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸಿದ್ದ ಭಾರತ
ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ನಿರಾಸೆ ಮೂಡಿಸಿತ್ತು. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ ಕಾರಣ ಸೆಮಿಫೈನಲ್ ಹಂತಕ್ಕೇರಲು ವಿಫಲವಾಗಿತ್ತು. ಈ ಬಾರಿ ಮತ್ತಷ್ಟು ಬಲಿಷ್ಠ ತಂಡದೊಂದಿಗೆ ಹಾಗೂ ಹೆಚ್ಚಿನ ಸಿದ್ಧತೆಯೊಂದಿಗೆ ಟೂರ್ನಿಗೆ ತೆರಳಲು ಭಾರತ ತಂಡ ಸಜ್ಜಾಗುತ್ತಿದೆ.

ಏಷ್ಯಾ ಕಪ್‌ಗೆ ಯುವ ವೇಗದ ಬೌಲಿಂಗ್ ಪಡೆ
ಇನ್ನು ಜಸ್ಪ್ರೀತ್ ಬೂಮ್ರಾ ಜೊತೆಗೆ ಮತ್ತೋರ್ವ ಆಟಗಾರ ಹರ್ಷಲ್ ಪಟೇಲ್ ಕೂಡ ಗಾಯಗೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಕೂಡ ಏಷ್ಯಾ ಕಪ್ ಟೂರ್ನಿಗೆ ಅಲಭ್ಯವಾಗಿದ್ದು ಪ್ರತಿಷ್ಠಿತ ಟೂರ್ನಿಗೆ ಭುವನೇಶ್ವರ್ ಕುಮಾರ್ ಭಾರತ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಭುವನೇಶ್ವರ್ ಜೊತೆಗೆ ಆವೇಶ್ ಖಾನ್ ಹಾಗೂ ಅರ್ಷ್‌ದೀಪ್ ಸಿಂಗ್ ವೇಗದ ಬೌಲರ್‌ಗಳಾಗಿ ಸಾಥ್ ನೀಡಲಿದ್ದಾರೆ. ಇನ್ನು ದೀಪಕ್ ಚಾಹರ್ ಅವರನ್ನು ಏಷ್ಯಾ ಕಪ್‌ನಲ್ಲಿ ಮೀಸಲು ಆಟಗಾರನಾಗಿ ಹೆಸರಿಸಲಾಗಿದೆ.
ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications