Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್‌ನಲ್ಲಿ ಯಶಸ್ವಿಯಾಗಿ ನಡೆದ ಜಸ್ಪ್ರೀತ್ ಬೂಮ್ರಾ ಶಸ್ತ್ರಚಿಕಿತ್ಸೆ: ತಂಡಕ್ಕೆ ಕಮ್‌ಬ್ಯಾಕ್ ಯಾವಾಗ?

Indian pacer Jasprit Bumrah successfully completes back surgery in New Zealand

ಟೀಮ್ ಇಂಡಿಯಾದ ಅನುಭವಿ ಆಟಗಾರ ಜಸ್ಪ್ರೀತ್ ಬೂಮ್ರಾ ನ್ಯೂಜಿಲೆಂಡ್‌ಗೆ ತೆರಳಿದ್ದು ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಈ ಬಗ್ಗೆ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದ್ದು ಟೀಮ್ ಇಂಡಿಯಾ ವೇಗಿಯ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದೆ.

ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಸುದೀರ್ಘ ಕಾಲದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಅವರು ತಂಡದಿಂದಲೂ ಹೊರಗುಳಿದಿದ್ದರು. ಬೆನ್ನುನೋವಿಗೆ ಚಿಕಿತ್ಸೆ ಪಡೆದು ಕಮ್‌ಬ್ಯಾಕ್‌ಗೆ ಸಿದ್ಧವಾಗುತ್ತಿದ್ದಂತೆಯೇ ಮತ್ತೆ ನೋವು ಉಲ್ಬಣಿಸಿದ ಕಾರಣ ಬೂಮ್ರಾ ಮತ್ತಷ್ಟು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವುಳಿಯಬೇಕಾಗಿದೆ.

ನ್ಯೂಜಿಲೆಂಡ್‌ನಲ್ಲಿ ಬೆನ್ನು ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬೂಮ್ರಾ ಮೂಲಗಳ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳ ಅಂತ್ಯದವರೆಗೂ ನ್ಯೂಜಿಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. ಬಳಿಕ ತವರಿಗೆ ಮರಳಲಿದ್ದು ಅವರು ವಿಶ್ರಾಂತಿ ಮುಂದುವರಿಸಲಿದ್ದಾರೆ.

ಇನ್ನು ಜಸ್ಪ್ರಿತ್ ಬೂಮ್ರಾ ಮುಂದಿನ ಆಗಸ್ಟ್ ತಿಂಗಳಿನಿಂದ ತಮ್ಮ ಅಭ್ಯಾಸವನ್ನು ಆರಂಭಿಸುವ ಸಾಧ್ಯತೆಯಿದ್ದು ನಿಧಾನವಾಗಿ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಈ ಮೂಲಕ ಈ ವರ್ಷಾಂತ್ಯದಲ್ಲಿ ಭಾರತದಲ್ಲಿಯೇ ನಡೆಯಲಿರುವ ವಿಶ್ವಕಪ್‌ಗೆ ಜಸ್ಪ್ರೀತ್ ಬೂಮ್ರಾ ಸಿದ್ಧವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಸಪ್ಟೆಂಬರ್‌ನಿಂದ ಬೂಮ್ರಾಗೆ ಬೆನ್ನು ನೋವು ಕಾಡಲು ಆರಂಭಿಸಿದೆ. ಅದಾದ ಬಳಿಕ ಅವರು ಕೆಲವೇ ಪಂದ್ಯಗಳಲ್ಲಿ ಮಾತ್ರವೇ ಮಾಡಿದ್ದರು.

ಇನ್ನು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಜಸ್ಪ್ರೀತ್ ಬೂಮ್ರಾ ಸೇವೆಯಿಂದ ವಂಚಿತವಾಗಲಿದೆ. ಆದರೆ ವಿಶ್ವಕಪ್‌ಲ್ಲಿ ಬೂಮ್ರಾ ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆ ನಿರೀಕ್ಷಗಳಿದ್ದರೂ ಬೂಮ್ರಾ ಚೇತರಿಕೆಯನ್ನು ಅದು ಅವಲಂಬಿಸಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

Story first published: Wednesday, March 8, 2023, 19:50 [IST]
Other articles published on Mar 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+