For Quick Alerts
ALLOW NOTIFICATIONS  
For Daily Alerts
 

ತಂದೆ 30 ಕಿ. ಮೀ ಸೈಕಲ್‌ ತುಳಿದು ನನ್ನನ್ನು ಕರೆದುಕೊಂಡು ಬರುತ್ತಿದ್ದರು: ಕಠಿಣ ದಿನಗಳನ್ನು ನೆನೆದ ಶಮಿ

Indian pacer Shami recalls fathers support after reach 200-wicket Milestone in Tests

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೂರನೇ ದಿನ ಬೌಲರ್‌ಗಳು ಮೇಲುಗೈ ಸಾಧಸಿದ್ದು ಭಾರತೀಯ ತಂಡದ ವೇಗಿಗಳಿಂದ ಉತ್ತಮ ಪ್ರದರ್ಶನ ಬಂದಿದೆ. ಅದರಲ್ಲೂ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ 5 ವಿಕೆಟ್‌ಗಳ ಗೊಂಚಲು ಪಡೆದು ಮಿಂಚುಹರಿಸಿದ್ದಾರೆ. ಮಾತ್ರವಲ್ಲ ಈ ಸಂದರ್ಭದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ವಿಶೇಷ ಮೈಲಿಗಲ್ಲನ್ನು ಕೂಡ ಸಾಧಿಸಿದ್ದಾರೆ.

ಈ ಸಾಧನೆಯ ಬಳಿಕ ಮೊಹಮ್ಮದ್ ಶಮಿ ತಮ್ಮ ಕ್ರಿಕೆಟ್ ಬದುಕಿನ ಆರಂಭದಲ್ಲಿ ತಂದೆ ನೀಡಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ. ತಂದೆಯ ನೆರವು ಇಲ್ಲದೆ ನಾನು ನನ್ನ ಕನಸನ್ನು ನನಸು ಮಾಡಲು ಸಾಧ್ಯವೇ ಇರಲಿಲ್ಲ ಎಂದು ಶಮಿ ಸ್ಮರಿಸಿದ್ದಾರೆ. ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ 200 ವಿಕೆಟ್‌ಗಳ ಸಾಧನೆ ಮಾಡಿದ ಬಳಿಕ ಅವರು ಕಠಿಣ ದಿನಗಳನ್ನು ನೆನೆದಿದ್ದಾರೆ.

31ರ ಹರೆಯದ ಮೊಹಮ್ಮದ್ ಶಮಿ ಸೆಂಚೂರಿಯನ್‌ನ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶಮಿ ಬೌಲಿಂಗ್ ದಾಳಿಗೆ ದ.ಆಫ್ರಿಕಾ ದಾಂಡಿಗರು ನಿರುತ್ತರರಾಗಿದ್ದರು. ಈ ಮಾರಕ ಬೌಲಿಂಗ್ ದಾಳಿಯ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗುವ ಮೂಲಕ 130 ರನ್‌ಗಳ ಮುನ್ನಡೆಯನ್ನು ಟೀಮ್ ಇಂಡಿಯಾ ಪಡೆಯಲು ಸಾಧ್ಯವಾಗಿದೆ.

ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯ ಸಹಸ್ಪುರ ಎಂಬ ಪ್ರದೇಶದವರಾದ ಮೊಹಮ್ಮದ್ ಶಮಿ ತಮ್ಮ ಊರಿನಲ್ಲಿ ಅಂತಾರಾಷ್ಟ್ರೀಯ ವೇಗಿಯನ್ನು ಸೃಷ್ಟಿಸಲು ಬೇಕಾಸ ಯಾವ ಸೌಲಭ್ಯಗಳು ಇಲ್ಲದಿದ್ದರೂ ಕ್ರಿಕೆಟ್‌ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. 2017ರಲ್ಲಿ ನಿಧನರಾದ ತಮ್ಮ ತಂದೆ 30 ಕಿ,ಮೀ ಸೈಕಲ್‌ನಲ್ಲಿ ಕೋಚಿಂಗ್ ಶಿಬಿರಕ್ಕೆ ಕರೆದುಕೊಂಡು ಬರುತ್ತಿದ್ದರು. ಈ ಮೂಲಕ ತನ್ನ ಮಗನ ಸಾಧನೆಗೆ ಅವರು ದೊಡ್ಡ ತ್ಯಾಗವನ್ನು ಮಾಡಿದ್ದಾರೆ ಎಂದು ಶಮಿ ಹೇಳಿದ್ದಾರೆ.

200 ಟೆಸ್ಟ್ ವಿಕೆಟ್‌ಗಳನ್ನು ವೇಗವಾಗಿ ಪಡೆದ ಭಾರತದ ಮೂರನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಯನ್ನು ಶಮಿ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್ ಇದ್ದರೆ ಎರಡನೇ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಇದ್ದಾರೆ.

"ನಾನು ಇಂದು ಈ ಸಾಧನೆಯನ್ನು ಮಾಡಲು ಕಾರಣ ನನ್ನ ತಂದೆ. ನಾನು ಸಾಕಷ್ಟು ಸೌಲಭ್ಯಗಳು ಇಲ್ಲದ ಗ್ರಾಮದಿಂದ ಬಂದವನು. ಇಂದು ಕೂಡ ಅಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿಲ್ಲ. ಹಾಗಿದ್ದರೂ ಕೂಡ ನನ್ನ ತಂದೆ ಕೋಚಿಂಗ್ ಶಿಬಿರಕ್ಕೆ ಕರೆತರಲು ನಿತ್ಯವೂ 30 ಕಿ.ಮೀ ಸೈಕಲ್ ತುಳಿಯುತ್ತಿದ್ದರು. ಆ ಕಷ್ಟದ ದಿನಗಳು ನನಗೆ ಇನ್ನೂ ಕೂಡ ನೆನಪಿದೆ. ಆ ದಿನಗಳಲ್ಲಿ ಹಾಗೂ ಅಂತಾ ಸಂದರ್ಭದಲ್ಲಿಯೂ ಅವರು ನನಗಾಗಿ ಶ್ರಮಿಸಿದರು. ಅವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ" ಎಂದು ಶಮಿ ಹೇಳಿದ್ದಾರೆ. ಇನ್ನು 200 ವಿಕೆಟ್ ಪಡೆದ ಸಾಧನೆಯ ಬಗ್ಗೆ ಅವರು "ನನ್ನ ಕನಸು ಭಾರತೀಯ ತಂಡದ ಆಟಗಾರನಾಗಬೇಕು, ಟಿವಿಯಲ್ಲಿ ನೋಡುತ್ತಿದ್ದವರ ಜೊತೆಗೆ ನಾನು ಆಟವಾಡಬೇಕು ಎಂಬುದಾಗಿತ್ತು" ಎಂದಿದ್ದಾರೆ.

2018ರ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಹೊಸ ಹಾಗೂ ಹಳೇಯ ಚೆಂಡನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್ ಮಾಡುವುದು ಕ್ರಿಕೆಟ್‌ನಲ್ಲಿ ಅಪರೂಪದ ಸಾಮರ್ಥ್ಯ. ಅದನ್ನು ಶಮಿ ಕರಗತ ಮಾಡಿಕೊಮಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಗೆ ನಿರಂತರವಾಗಿ ಅದ್ಭುತ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಮೊಹಮ್ಮದ್ ಶಮಿ.

Team Indiaದಲ್ಲಿ ಗುರು-ಶಿಷ್ಯರ ಮೋಡಿ ನೋಡಿ | Oneindia Kannada

Story first published: Thursday, December 30, 2021, 9:33 [IST]
Other articles published on Dec 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+