Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೋಟೆಲ್‌ನಲ್ಲಿ ಒಟ್ಟಾಗಿ ಕುಳಿತು IPL ಹರಾಜು ವೀಕ್ಷಿಸಿದ ಟೀಂ ಇಂಡಿಯಾ ಪ್ಲೇಯರ್ಸ್

Team india players

ಐಪಿಎಲ್ 2022 ಸೀಸನ್ ಮೆಗಾ ಸೀಸನ್ ಸಾಕಷ್ಟು ಕುತೂಹಲದೊಂದಿಗೆ, ಕೆಲವು ಸರ್ಪ್ರೈಸ್ ಬಿಡ್‌ಗಳನ್ನ ಮೊದಲ ದಿನದ ಆಟಗಾರರ ಹರಾಜಿನಲ್ಲಿ ಕಾಣಬಹುದು. ಈ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.

ಟೀಂ ಇಂಡಿಯಾ ಆಟಗಾರರು ವಿಂಡೀಸ್ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿ ಗೆದ್ದ ಬಳಿಕ ಇಂದು ಒಟ್ಟಾಗಿ ಕುಳಿತು ಐಪಿಎಲ್ ಹರಾಜು ಪ್ರಕ್ರಿಯೆ ವೀಕ್ಷಿಸಿದ್ದಾರೆ. ಫೆಬ್ರವರಿ 16 ರಂದು ವಿಂಡೀಸ್‌ ವಿರುದ್ಧ ಮೊದಲ ಟೀ20 ಆಡಲಿರುವ ಭಾರತದ ಆಟಗಾರರು ಪ್ರಸ್ತುತ ವಿಶ್ರಾಂತಿ ಪಡೆಯುತ್ತಿದ್ದರು. ಜೊತೆಗೆ ಹೋಟೆಲ್‌ ರೂಂನಲ್ಲಿ ಕುಳಿತು ಐಪಿಎಲ್ 2022 ಸೀಸನ್ ಮೆಗಾ ಹರಾಜನ್ನು ಬಹಳ ಆಸಕ್ತಿಯಿಂದ ವೀಕ್ಷಿಸಿದ್ದಾರೆ.

ಸ್ಟೋರಿಯಲ್ಲಿ ಫೋಟೋ ಶೇರ್ ಮಾಡಿರುವ ರೋಹಿತ್ ''ಕೆಲವರು ಖುಷಿಯಾಗಿದ್ದಾರೆ, ಮತ್ತೆ ಕೆಲವರು ಟೆನ್ಷನ್ ಆಗಿದ್ದಾರೆ'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಯುಜ್ವೇಂದ್ರ ಚಾಹಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಇದ್ದಾರೆ.

ಇಶಾನ್ ಕಿಶನ್‌ ರನ್ನ ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗೆ ಭಾರೀ ಬೆಲೆಗೆ ಖರೀದಿಸಿತು. ಇಂದು ನಡೆದ ಬಿಡ್‌ನಲ್ಲಿ ಇದೇ ಅತಿ ಹೆಚ್ಚು ಬಿಡ್‌ ಇದಾಗಿದೆ. ಇನ್ನು ನ ಶ್ರೇಯಸ್ ಅಯ್ಯರ್‌ ನನ್ನು ಪಡೆಯಲು ಕೆಕೆಆರ್ ಮತ್ತು ಗುಜರಾತ್ ಫ್ರಾಂಚೈಸಿಗಳು ಭಾರೀ ಸ್ಪರ್ಧೆ ನಡೆಸಿದವು. ಆದ್ರೆ 12 ಕೋಟಿ ರೂಪಾಯಿ ಬಿಡ್ ಮೊತ್ತ ದಾಟುತ್ತಿದ್ದಂತೆ ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್‌ ಹಿಂದೆ ಸರಿಯಿತು. 12.25 ಕೋಟಿ ರೂಪಾಯಿಗೆ ಬಿಡ್‌ ಮಾಡಿದ್ದ ಕೆಕೆಆರ್ ಫ್ರಾಂಚೈಸಿ ಸ್ಫೋಟಕ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ನನ್ನು ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನುಳಿದ ರಿಷಭ್ ಪಂತ್, ಸೂರ್ಯ ಕುಮಾರ್ ಯಾದವ್ ರೀಟೈನ್ ಆದ ಆಟಗಾರರಾಗಿದ್ದು, ಯುಜ್ವೇಂದ್ರ ಚಾಹಲ್ ಸ್ವಲ್ಪ ಟೆನ್ಶನ್‌ ಆಗಿ ಕಾಣಿಸಿಕೊಂಡರು. ಹರಾಜಿನಲ್ಲಿ ರೂ.6.5 ಕೋಟಿಗೆ ಚಹಾಲ್‌ರನ್ನ ರಾಜಸ್ಥಾನದ ರಾಯಲ್ಸ್ ಖರೀದಿಸಿತು. ಶಾರ್ದೂಲ್ ಠಾಕೂರ್‌ನನ್ನು ದೆಹಲಿ ಕ್ಯಾಪಿಟಲ್ಸ್ ರೂ.10.75 ಕೋಟಿ ಭಾರೀ ಬೆಲೆಗೆ ಖರೀದಿಸಿದೆ.

Story first published: Sunday, February 13, 2022, 15:54 [IST]
Other articles published on Feb 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+