ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ ಭಾರತದ ಟಾಕ್ಸಿ ಚಾಲಕ!

ಬ್ರಿಸ್ಬೇನ್, ನವೆಂಬರ್ 25: ಟಾಕ್ಸಿಯಲ್ಲಿ ಪಯಣಿಸಿದ್ದಕ್ಕಾಗಿ ತಾವು ನೀಡಿದ ಹಣ ಪಡೆಯಲು ನಿರಾಕರಿಸಿದ ಭಾರತದ ಟ್ಯಾಕ್ಸಿ ಚಾಲಕನಿಗೆ ಪಾಕಿಸ್ತಾನದ ಕ್ರಿಕೆಟಿಗರಾದ ಶಾಹೀನ್ ಷಾ ಅಫ್ರಿದಿ, ಯಾಸಿರ್ ಷಾ ಮತ್ತು ನಾಸೀಮ್ ಷಾ ಅವರಿದ್ದ ತಂಡ ರಾತ್ರಿ ಔತಣ ಕೊಡಿಸಿದ ಭಾವನಾತ್ಮಕ ಘಟನೆ ಬ್ರಿಸ್ಬೇನ್‌ನಲ್ಲಿ ನಡೆದಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಇದರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಬ್ರಿಸ್ಬೇನ್‌ನಲ್ಲಿ ಪಾಕ್ ಆಟಗಾರರನ್ನು ರೈಡ್ ಕರೆದೊಯ್ದಿದ್ದ ಡ್ರೈವರ್, ಕ್ರಿಕೆಟಿಗರಿಂದ ಹಣ ಪಡೆದಿರಲಿಲ್ಲ.
ಅಂದ್ಹಾಗೆ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಇನ್ನಿಂಗ್ಸ್ ಸಹಿತ 5 ರನ್ ಸೋಲನುಭವಿಸಿದೆ.

ವಿಚಾರ ಹಂಚಿಕೊಂಡ ರೇಡಿಯೋ ನಿರೂಪಕಿ
ಭಾರತದ ಟ್ಯಾಕ್ಸಿ ಡ್ರೈವರ್ ಮತ್ತು ಪಾಕ್ ಕ್ರಿಕೆಟಿಗರ ಈ ಆತ್ಮೀಯ ಕ್ಷಣದ ಬಗ್ಗೆ ಎಸಿಬಿ ರೇಡಿಯೋ ನಿರೂಪಕಿ ಅಲಿಸನ್ ಮಿಚೆಲ್ ಅವರು ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್‌ಗೆ ಹೇಳಿಕೊಂಡಿದ್ದಾರೆ. ಪಾಕ್ ಆಟಗಾರರು ಪ್ರೀತಿಯ ಔತಣವಿತ್ತಾಗ ಟ್ಯಾಕ್ಸಿ ಚಾಲಕ ಎಷ್ಟು ಸಂಭ್ರಮಿಸಿದ್ದ ಎಂಬುದನ್ನೂ ಅಲಿಸನ್ ವಿವರಿಸಿದ್ದಾರೆ.

ಖುಷಿ ಹಂಚಿಕೊಂಡ ಭಾರತದ ಡ್ರೈವರ್
ಪಾಕ್-ಆಸ್ಟ್ರೇಲಿಯಾ ಮೊದಲ ಟೆಸ್ಟ್ ವೇಳೆ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂಗೆ ಅಲಿಸನ್ ಮಿಚೆಲ್ ಅವರನ್ನು ಕರೆಯೊಯ್ಯುವಾಗ ಟ್ಯಾಕ್ಸಿ ಡ್ರೈವರೇ ಈ ಕತೆಯನ್ನು ಅಲಿಸನ್‌ಗೆ ಹೇಳಿದರಂತೆ. ಪ್ರಯಾಣದ ಮಧ್ಯೆ ತನಗೆ ಪಾಕಿಸ್ತಾನದ 5 ಆಟಗಾರು ಡಿನ್ನರ್ ನೀಡಿದ ಬಗ್ಗೆ ಚಾಲಕ ಖುಷಿ ಹಂಚಿಕೊಂಡರಂತೆ.
ಹಣ ತೆಗೆದುಕೊಳ್ಳದ ಚಾಲಕ
ಬ್ರಿಸ್ಬೇನ್‌ನಲ್ಲಿ ಪಾಕ್ ತಂಡಕ್ಕೆ ನೀಡಲಾಗಿದ್ದ ಹೋಟೆಲ್‌ನಿಂದ ಐವರು ಪಾಕ್ ಕ್ರಿಕೆಟಿಗರನ್ನು ಪಿಕ್ ಮಾಡಿದ ಭಾರತದ ಕ್ಯಾಬ್ ಡ್ರೈವರ್, ಅವರನ್ನು ಡಿನ್ನರ್‌ಗಾಗಿ (ಬ್ರಿನ್ಬೇನ್‌ನಲ್ಲಿದ್ದ) ಭಾರತದ ಹೋಟೆಲ್‌ಗೆ ಕರೆದೊಯ್ದರಂತೆ. ಆ ಬಳಿಕ ಪಾಕ್ ಕ್ರಿಕೆಟಿಗರು ಬಾಡಿಗೆ ನೀಡಲು ಮುಂದಾದಾಗ ಆಟಗಾರರ ಮೇಲಿನ ಗೌರವದಿಂದ ಡ್ರೈವರ್ ಹಣ ತೆಗೆದುಕೊಳ್ಳಲಿಲ್ಲ.

ಭಾರತೀಯನ ಪ್ರೀತಿಗೆ ಪಾಕ್ ಕ್ರಿಕೆಟಿಗರು ಫಿದಾ
ಭಾರತೀಯನ ಪ್ರೀತಿಗೆ ಖುಷಿಗೊಂಡ ಪಾಕ್ ಆಟಗಾರರು ಡ್ರೈವರ್ ಅನ್ನು ತಮ್ಮೊಂದಿಗೆ ಔತಣಕ್ಕೆ ಬರುವಂತೆ ವಿನಂತಿಸಿಕೊಂಡರಂತೆ. ಹೀಗೆ ಪಾಕ್ ಆಟಗಾರರ ಜೊತೆ ಔತಣ ಸವಿಯುವ ಅವಕಾಶ ಸಿಕ್ಕಿದ್ದನ್ನು ಕ್ಯಾಬ್ ಡ್ರೈವರ್ ಅಲಿಸನ್ ಜೊತೆ ವಿವರಿಸಿದ್ದಾರೆ. ಅಲಿಸನ್ ಈ ಸಂಗತಿಯನ್ನು ಪಂದ್ಯದ ವೇಳೆ ಕಾಮೆಂಟೇಟರ್ ಮೈಕ್ ಮುಂದೆ ಜಾನ್ಸನ್‌ಗೆ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications