ಏಷ್ಯಾ ಕಪ್‌ಗೆ ಆಯ್ಕೆ ಆಗಿರುವ ಆಟಗಾರರ ವಯಸ್ಸು ಎಷ್ಟು? ಅವರ ರ‍್ಯಾಂಕಿಂಗ್ ಏನು?
ಟೀಮ್ ಇಂಡಿಯಾವನ್ನು ಇದೇ ಮಂಗಳವಾರ ಏಷ್ಯಾಕಪ್‌ಗೆ ಪ್ರಕಟಿಸಲಾಗಿದೆ. ಬಹಳ ಅಳೆದು ತೂಗಿ ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಈ ಬಾರಿಗೆ ಏಷ್ಯಾ ಕಪ್ ಗೆಲ್ಲುವ ನಿಟ್ಟಿನಲ್ಲಿ ಭಾರತ ದೃಷ್ಟಿ ಇಟ್ಟಿದೆ. ಭಾರತ ಈ ಸರಣಿಗೆ ತಂಡವನ್ನು ಪ್ರಕಟಿಸುತ್ತಿದ್ದಂತೆ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ. ಆ ಸ್ಟಾರ್ ಪ್ಲೇಯರ್‌ನನ್ನು ತಂಡದಿಂದ ಕೈ ಬಿಟ್ಟಿದ್ದು ಏಕೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ಟೀಮ್ ಇಂಡಿಯಾ ಚಿತ್ತ ಆ ಟೀಕೆಗಳ ಮೇಲೆ ನೆಟ್ಟಿರದೆ ತನ್ನ ಪ್ರದರ್ಶನದ ಮೇಲೆ ನೆಟ್ಟಿದೆ. ಟೀಮ್ ಇಂಡಿಯಾ ಏಷ್ಯಾ ಕಪ್ ಗೆಲುವಿಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ಟೀಮ್ ಇಂಡಿಯಾವನ್ನು ಪ್ರತಿಷ್ಠಿತ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಈ ಬಾರಿ ತಂಡದ ಉಪನಾಯಕನ ಜವಾಬ್ದಾರಿಯನ್ನು ಶುಭಮನ್ ಗಿಲ್ ಹೆಗಲಿದೆ ಹೊರಿಸಲಾಗಿದೆ. ಅಲ್ಲದೆ ಪ್ರಕಟಿತ ತಂಡದಲ್ಲಿ ಭರವಸೆಯ ಆಟಗಾರರಾದ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದಾರೆ ಈ ಬಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಟಗಾರರ ವಯಸ್ಸು ಎಷ್ಟು? ಹಾಗೂ ಐಸಿಸಿ ರ‍್ಯಾಂಕಿಂಗ್ ಎಷ್ಟು? ಎಂಬ ಬಗ್ಗೆ ವಿವರ ಇಲ್ಲಿದೆ.

ಏಷ್ಯಾ ಕಪ್‌ಗೆ ಆಯ್ಕೆಯಾದ ಅತಿ ಹಿರಿಯ (ವಯಸ್ಸಿನಲ್ಲಿ) ಆಟಗಾರ ಎಂಬ ಖ್ಯಾತಿ ಸೂರ್ಯಕುಮಾರ್ ಯಾದವ್ ಅವರಿಗೆ ಸಲ್ಲುತ್ತದೆ. ಇವರಿಗೆ 34 ವರ್ಷಗಳು ತುಂಬಿದ್ದು, ಇವರು ಐಸಿಸಿ ಬ್ಯಾಟ್ಸಮನ್ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಟಿ20 ಫಾರ್ಮೆಟ್‌ನ ನಂಬರ್ 1 ಬ್ಯಾಟರ್ ಆಗಿದ್ದಾರೆ. ಇವರಿಗೆ ಈಗ 24 ವರ್ಷ ವಯಸ್ಸು. ಇನ್ನು ಟೀಮ್ ಇಂಡಿಯಾದ ಉಪನಾಯಕರಾಗಿ ಆಯ್ಕೆ ಆಗಿರುವ ಶುಭಮನ್ ಗಿಲ್ 25 ವರ್ಷದವರಾಗಿದ್ದು, ಇವರ ಶ್ರೇಯಾಂಕ 41 ಆಗಿದೆ.
ಬ್ಯಾಟಿಂಗ್‌ನಲ್ಲಿ ಆಟಗಾರರ ಶ್ರೇಯಾಂಕ ಹಾಗೂ ವಯಸ್ಸು
ತಿಲಕ್ ವರ್ಮಾ, ವಯಸ್ಸು 22, ಶ್ರೇಯಾಂಕ್ 2
ಸಂಜು ಸ್ಯಾಮ್ಸನ್, ವಯಸ್ಸು 30, ಶ್ರೇಯಾಂಕ್ 34
ರಿಂಕು ಸಿಂಗ್, ವಯಸ್ಸು 27, ಶ್ರೇಯಾಂಕ್ 57

ಬೌಲರ್‌ಗಳ ಶ್ರೇಯಾಂಕ ಹಾಗೂ ವಯಸ್ಸು
ವರುಣ್ ಚಕ್ರವರ್ತಿ, ವಯಸ್ಸು 33, ಶ್ರೇಯಾಂಕ್ 4
ಅರ್ಷದೀಪ್ ಸಿಂಗ್,ವಯಸ್ಸು 26, ಶ್ರೇಯಾಂಕ್ 9
ಅಕ್ಷರ್ ಪಟೇಲ್, ವಯಸ್ಸು 31, ಶ್ರೇಯಾಂಕ್ 14,
ಕುಲ್‌ದೀಪ್ ಯಾದವ್, ವಯಸ್ಸು 30, ಶ್ರೇಯಾಂಕ್ 37
ಜಸ್ಪ್ರೀತ್ ಬುಮ್ರಾ, ವಯಸ್ಸು 31, ಶ್ರೇಯಾಂಕ್ 42,
ಆಲ್‌ರೌಂಡರ್‌ಗಳ ಶ್ರೇಯಾಂಕ ಹಾಗೂ ವಯಸ್ಸು
ಹಾರ್ದಿಕ್ ಪಾಂಡ್ಯ, ವಯಸ್ಸು 31, ಶ್ರೇಯಾಂಕ್ 1
ಅಕ್ಷರ್ ಪಟೇಲ್, ವಯಸ್ಸು 31, ಶ್ರೇಯಾಂಕ್ 11,
ಅಭಿಷೇಕ್ ಶರ್ಮಾ, ವಯಸ್ಸು 24, ಶ್ರೇಯಾಂಕ್ 15,
ಶಿವಂ ದುಬೆ, ವಯಸ್ಸು 32, ಶ್ರೇಯಾಂಕ್ 31
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications