Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು? 1 ಸ್ಥಾನ, 4 ಆಟಗಾರರು ರೇಸ್‌ನಲ್ಲಿ

ಸೆಪ್ಟಂಬರ್‌ 9 ರಂದು ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಸಹ ಪ್ರಕಟಿಸಲಾಗುತ್ತದೆ. ಈ ವೇಳೆ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ಶುಭಮನ್‌ ಗಿಲ್ ಸಹ ಟಿ20 ತಂಡಕ್ಕೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿದ್ದಾರೆ. ಇವರು ತಂಡವನ್ನು ಸೇರಿಕೊಂಡರೆ, ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಟೀಮ್ ಇಂಡಿಯಾಕ್ಕೆ ಭರವಸೆಯ ಆಟಗಾರರು ವರ್ಷದ ಬಳಿಕ ಎಂಟ್ರಿ ಪಡೆದರೆ ನಾಲ್ಕನೇ ಸ್ಥಾನದಲ್ಲಿ ಆಡುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯದ ಟಿ20 ತಂಡದ ಚಿತ್ರಣವನ್ನು ನೋಡಿದರೆ ನಾಲ್ಕನೇ ಸ್ಥಾನದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ ಮಾಡುವುದನ್ನು ನಾವು ಕಾಣಬಹುದಾಗಿದೆ. ಆದರೆ ಈಗ ಈ ಸ್ಥಾನಕ್ಕೂ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಹಾಗಿದ್ದರೆ ನಾಲ್ಕನೇ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

India s Asia Cup T20 squad Who will get the coveted No 4 spot

ಶುಭಮನ್‌ ಗಿಲ್‌ ತಂಡಕ್ಕೆ ಸೇರಿಕೊಂಡರೆ ಇವರು ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಸಂಜು ಸ್ಯಾಮ್ಸನ್‌ ಮೂರನೇ ಕ್ರಮಾಂಕಕ್ಕೆ ಶಿಫ್ಟ್ ಆಗಲಿದ್ದಾರೆ. ಇನ್ನು ಈ ಇದೇ ಸ್ಥಾನದಲ್ಲಿ ಕಳೆದ ಕೆಲವು ಪಂದ್ಯಗಳಲ್ಲಿ ಬ್ಯಾಟ್ ಮಾಡಿರುವ ತಿಲಕ್ ವರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಆಡುವುದನ್ನು ನೋಡಬಹುದು. ಹಾಗದರೆ ಸೂರ್ಯಕುಮಾರ್‌ ಆಡುವುದು ಎಲ್ಲಿ ಎಂಬ ಪ್ರಶ್ನೆಗಳು ಸಹ ಉದ್ಭವಿಸುತ್ತವೆ.

1 ಸ್ಥಾನ, 4 ಆಟಗಾರರು ರೇಸ್‌ನಲ್ಲಿ

ಟಿ20 ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ಅವರೇ ವಹಿಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಅನುಮಾನ ಇಲ್ಲ. ಇವರು ನಾಲ್ಕನೇ ಕ್ರಮಾಂಕದಲ್ಲಿ ಆಡುವ ದೊಡ್ಡ ಸ್ಪರ್ಧಿ ಇವರು ಈಗಾಗಲೇ ಭಾರತದ ಪರ 46 ಟಿ20 ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದು, 42ರ ಸರಾಸರಿಯಲ್ಲಿ 1609 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 13 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಇವರು ನಾಲ್ಕನೇ ಕ್ರಮಾಂಕದಲ್ಲಿ ಆಡುವ ಬೆಸ್ಟ್ ಪ್ಲೇಯರ್‌ ಎಂದು ಕಾಣಿಸುತ್ತದೆ. ಆದರೆ ಈ ಸ್ಥಾನದ ಮೇಲೆ ಇವರೊಂದಿಗೆ ಇನ್ನು ಮೂರು ಜನ ಪೈಪೋಟಿಗೆ ಇಳಿದಿದ್ದಾರೆ.

ತಿಲಕ್‌ ವರ್ಮಾ ಸಹ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 256 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಅರ್ಧಶತಕ ಸಹ ಸಿಡಿಸಿದ್ದಾರೆ. ಇನ್ನು ಇದೇ ಸ್ಥಾನದ ಮೇಲೆ ಶ್ರೇಯಸ್ ಅಯ್ಯರ್ ಸಹ ಕಣ್ಣು ನೆಟ್ಟಿದ್ದಾರೆ. ಇವರು ಸಹ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 37ರ ಸರಾಸರಿಯಲ್ಲಿ 263 ರನ್‌ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕ ಸಹ ಬಾರಿಸಿದ್ದಾರೆ. ಇದೇ ಸ್ಥಾನದ ಮೇಲೆ ಶಿವಂ ದುಬೆ ಸಹ ಒಂದು ಕಣ್ಣು ನೆಟ್ಟಿದ್ದಾರೆ. ಹಾಗಿದ್ದರೆ ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಪರ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಬಗ್ಗೆ ಉತ್ತರ ಸೆಪ್ಟಂಬರ್ 10 ರಂದು ಸಿಗಲಿದೆ.

Story first published: Friday, August 15, 2025, 8:10 [IST]
Other articles published on Aug 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+