ICC Women's T20 World Cup: ಭಾರತ ಗೆಲುವಿಗೆ 106 ರನ್ ಗುರಿ ನೀಡಿದ ಪಾಕ್: ಕನ್ನಡತಿ ಶ್ರೇಯಾಂಕ್‌ಗೆ 2 ವಿಕೆಟ್
ದುಬೈ: ಭಾರತದ ಸ್ಟಾರ್ ಬೌಲರ್‌ಗಳ ಬಿಗುವಿನ ದಾಳಿಗೆ ಪಾಕಿಸ್ತಾನ ಬ್ಯಾಟರ್‌ಗಳು ಕಂಗಾಲಾಗಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಭಾರತ 105 ರನ್‌ಗಳಿಗೆ ಪಾಕ್ ತಂಡವನ್ನು ಕಟ್ಟಿ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಸೇರಿಸಿತು. ಭಾರತಕ್ಕೆ ಪಾಕ್ ಸಾಧಾರಣ ಗುರಿಯನ್ನು ನೀಡಿದೆ. ಟೀಮ್ ಇಂಡಿಯಾ ಪರ ಬೌಲರ್‌ಗಳು ಅಚ್ಚು ಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

ಬಾರದ ಜೊತೆಯಾಟ
ಪಾಕ್ ತಂಡದ ಭರವಸೆಯ ಆಟಗಾರ್ತಿಯರು ಕ್ರೀಸ್‌ನಲ್ಲಿ ನೆಲಕ್ಕೂರಿ ನಿಲ್ಲುವಲ್ಲಿ ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡುವಾಗ ಪಾಕ್ ಪರ ದೊಡ್ಡ ಜೊತೆಯಾಟಗಳು ಬಾರದೆ ಇರುವುದು ತಂಡಕ್ಕೆ ಹಿನ್ನಡೆ ಆಯಿತು. ಪವರ್ ಪ್ಲೇನಲ್ಲಿ ಎರಡು ವಿಕೆಟ್ ಕಳೆದುಕೊಂಡು ಪಾಕ್ ಸಂಕಷ್ಟಕ್ಕೆ ಸಿಲುಕಿತು. ಎರಡನೇ ವಿಕೆಟ್‌ಗೆ ಸಿದ್ರಾ ಅಮೀನ್ ಹಾಗೂ ಮುನೀಬ ಅಲಿ ಜೋಡಿ 23 ಎಸೆತಗಳಲ್ಲಿ 24 ರನ್ ಜೊತೆಯಾಟದ ಕಾಣಿಕೆ ನೀಡಿದರು.
ಪಾಕ್ ಪರ ಮುನೀಬ ಅಲಿ 17, ನಿದಾ ದಾರ್ 28, ಫಾತಿಮಾ ಸನಾ 13, ಸೈಯದಾ ಅರೂಬ್ ಶಾ ಅಜೇಯ 14 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಆಟಗಾರ್ತಿಯರು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.
ಎಂಟನೇ ವಿಕೆಟ್‌ಗೆ ನಿದಾ ದಾರ್ ಹಾಗೂ ಸೈಯದಾ ಅರೂಬ್ ಶಾ ಜೊತೆಗೂಡಿ 29 ಎಸೆತಗಳಲ್ಲಿ 28 ರನ್ ಸೇರಿಸಿದ್ದು ತಂಡದ ಪರ ದೊಡ್ಡ ಜೊತೆಯಾಟವಾಗಿದೆ.
ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್
ಪಾಕ್ ತಂಡದ ನಾಯಕಿ ಫಾತಿಮಾ ಸನಾ ಅವರ ಆಟಕ್ಕೆ ಆಶಾ ಸೋಭಾನ ಬ್ರೇಕ್ ಹಾಕಿದರು. ಆಶಾ ಸೋಬಾನ ಅವರ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿದ್ದ ಅವರು ಮತ್ತೊಂದು ಬಿಗ್ ಹಿಟ್‌ಗೆ ಮುಂದಾಗಿದ್ದರು. 14ನೇ ಓವರ್‌ನ ಕೊನೆಯ ಎಸೆತದಲ್ಲಿ ಆಶಾ ಸೊಭಾನಾ ಅವರು ಆಫ್ ಸ್ಟಂಪ್ ಆಚೆ ಫ್ಲೈಟೆಡ್ ಡಿಲೆವರಿ ಮಾಡಿದರು. ಆಫ್ ಸ್ಟಂಪ್ ಆಚೆಗೆ ಹೊರಟಿದ್ದ ಚೆಂಡನ್ನು ಸನಾ ಕೆಣಕಿದರು. ಆದರೆ ಇವರು ಅಂದುಕೊಂಡಂತೆ ಬೌಲ್, ಬ್ಯಾಟ್‌ನೊಂದಿಗೆ ಸಂಪರ್ಕ ಸಾಧಿಸಲಿಲ್ಲ.
ಚೆಂಡು ಪಾಕ್ ನಾಯಕಿಯ ಬ್ಯಾಟ್‌ಗೆ ತಗುಲಿ ಮುನ್ನಗಿತು. ವಿಕೆಟ್ ಹಿಂದೆ ನಿಂತು ಇದನ್ನು ಗಮನಿಸಿದ್ದ ರಿಚಾ ಘೋಷ್ ಬಲಗೈ ಎತ್ತಿ ಒಂದೆ ಕೈಯಲ್ಲಿ ಕ್ಯಾಚ್ ಹಿಡಿದರು.
ಅರುಂಧತಿ ರಡ್ಡಿ ಕಮಾಲ್
ಭಾರತ ತಂಡದ ಸ್ಟಾರ್ ವೇಗದ ಬೌಲರ್ ಅರುಂಧತಿ ರೆಡ್ಡಿ ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. ಇವರು 19 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು. ಕನ್ನಡತಿ ಶ್ರೇಯಾಂಕ್ ಪಾಟೀಲ್ ಸಹ ಬಿಗುವಿನ ದಾಳಿ ನಡೆಸಿದು. ಇವರು 12 ರನ್ ನೀಡಿ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications