ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸದ ಆ ಒಂದು ಕ್ರಮಾಂಕ: ಮ್ಯಾನೇಜ್ಮೆಂಟ್ ಹೇಳಿದ್ದೇನು?
ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಎರಡನೇ ಟೆಸ್ಟ್ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಶುಕ್ರವಾರ (ಅ.10)ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಆಸೆ ಭಾರತ ತಂಡದ್ದಾಗಿದೆ. ಪ್ರವಾಸಿ ತಂಡ ಸಹ ಈ ಪಂದ್ಯದಲ್ಲಿ ಜಯ ಸಾಧಿಸಿ ಪುಟಿದೇಳುವ ಕನಸು ಕಾಣುತ್ತಿದೆ. ಆದರೆ ಭಾರತ ತಂಡಕ್ಕೆ ಆ ಒಂದು ಟೆನ್ಷನ್ ಆರಂಭವಾಗಿದೆ. ಆ ಚಿಂತೆ ಏನದು? ಇಲ್ಲಿದೆ ವರದಿ
ಭಾರತ ತಂಡದಲ್ಲಿ ಸದ್ಯ ಆಟಗಾರರು ಇದ್ದಾರೆ. ಆದರೂ ಸಹ ಆ ಒಂದು ಚಿಂತೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾ ಪರ ಈ ಸ್ಥಾನದಲ್ಲಿ ಸ್ಟಾರ್ ಆಟಗಾರರು ಆಡಿ ಹೆಸರು ಮಾಡಿದ್ದಾರೆ. ಈಗ ಈ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿ ಸಿಗದೆ ತಂಡ, ಚಿಂತೆಯಲ್ಲಿದೆ. 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚಿದ ಆಟಗಾರ. ಇವರ ಸ್ಥಾನವನ್ನೇ ಚೇತೇಶ್ವರ್ ಪೂಜಾರ ತುಂಬಿದ್ದರು. ಇವರು ನಿವೃತ್ತರಾದ ಬಳಿಕ ಈ ಸ್ಥಾನ ತುಂಬುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವಿರಾಟ್ ಕೊಹ್ಲಿ ತಂಡದಲ್ಲಿ ಇರುವವರೆಗೂ ಈ ಸ್ಥಾನವನ್ನು ಶುಭಮನ್ ಗಿಲ್ ಕಬ್ಜಾ ಮಾಡಿದ್ದರು. ಆದರೆ ವಿರಾಟ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಗಿಲ್ ಮೂರನೇ ಸ್ಥಾನ ಬಿಟ್ಟು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಮತ್ತೆ ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿದವು. ಇಂಗ್ಲೆಂಡ್ ಪ್ರವಾಸದಲ್ಲಿ ಈ ಸ್ಥಾನದಲ್ಲಿ ಸಾಯಿ ಸುದರ್ಶನ್, ಕನ್ನಡಿಗ ಕರುಣ್ ನಾಯರ್ ಕಾಣಿಸಿಕೊಂಡರು. ಆದರೆ ಈ ಸ್ಥಾನಕ್ಕೆ ಯಾರೂ ನ್ಯಾಯ ನೀಡಲಿಲ್ಲ.
ಸಾಯಿ ಕ್ಷಮತೆಯ ಬಗ್ಗೆ ನಂಬಿಕೆ ಇದೆ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಇದೇ ಒಂದು ಚಿಂತೆ ತಂಡವನ್ನು ಬಹುವಾಗಿ ಕಾಡುತ್ತಿದೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇವರು 19 ಎಸೆತಗಳಲ್ಲಿ 7 ರನ್ ಬಾರಿಸಿ ಔಟ್ ಆದರು. ಇವರ ಫಾರ್ಮ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಈಗ ಈ ಪ್ರಶ್ನೆಗಳಿಗೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಉತ್ತರಿಸಿದ್ದಾರೆ. ತಂಡದ ನಾಯಕ ಶುಭಮನ್ ಗಿಲ್ ಹಾಗೂ ಮ್ಯಾನೇಜ್ಮೆಂಟ್‌ಗೆ ಸಾಯಿ ಸುದರ್ಶನ್ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಸುದರ್ಶನ್ ಅವರಿಗೆ ನಮ್ಮ ಬೆಂಬಲವಿದ್ದು, ಈ ಬಗ್ಗೆ ಅವರಿಗೆ ತಿಳಿದಿದೆ. ನಾಯಕ ಹಾಗೂ ಕೋಚ್ ಸಿಬ್ಬಂದಿ ಸಹ ಅವರ ಕ್ಷಮತೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ಶೀಘ್ರದಲ್ಲೇ ತಮ್ಮ ಭರವಸೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಯಾನ್ ಟೆನ್ ಡೋಸ್ಚೇಟ್ ತಿಳಿಸಿದ್ದಾರೆ. ಸಾಯಿ ಸುದರ್ಶನ್ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 21 ಸರಾಸರಿಯಲ್ಲಿ 147 ರನ್ ಗಳಿಸಿದ್ದು, ಈ ವೇಳೆ ಒಂದು ಅರ್ಧಶತಕ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications