Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India ODI World Cup 2023 Schedule: 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಪೂರ್ಣ ವೇಳಾಪಟ್ಟಿ

ಮಂಗಳವಾರ, ಜೂನ್ 27ರಂದು ಮುಂಬೈನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪ್ರಕಟಿಸಿತು. ಆತಿಥೇಯ ಭಾರತ ತಂಡದ ವೇಳಾಪಟ್ಟಿಯೂ ಈ ವೇಳೆ ಬಹಿರಂಗಗೊಂಡಿತು.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

Indias ODI World Cup 2023 Schedule


ಇನ್ನು ಆತಿಥೇಯ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಚೆನ್ನೈನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆ ಬಳಿಕ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.

ಸಾಂಪ್ರದಾಯಿಕ ಎದುರಾಳಿ ತಂಡದ ವಿರುದ್ಧ ತಮ್ಮ ಅಜೇಯ ದಾಖಲೆಯನ್ನು ಮುಂದುವರಿಸಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎದುರು ನೋಡುತ್ತಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ ಏಳು ಬಾರಿ ಮುಖಾಮುಖಿಯಾಗಿವೆ. 1992, 1996, 1999, 2003, 2011, 2015 ಮತ್ತು 2019ರಲ್ಲಿ ಎದುರಾಳಿಯಾಗಿ ಆಡಿವೆ.

ಆದರೆ, 50 ಓವರ್‌ಗಳ ಸ್ವರೂಪದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಇನ್ನೂ ಭಾರತವನ್ನು ಸೋಲಿಸಿಲ್ಲ. 1992 ಮತ್ತು 2007ರಲ್ಲಿ ಎರಡು ಬಾರಿ ಮಾತ್ರ ಎರಡು ಸಾಂಪ್ರದಾಯಿಕ ತಂಡಗಳು ಪರಸ್ಪರ ಮುಖಾಮುಖಿಯಾಗಿಲ್ಲ.

2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸಂಪೂರ್ಣ ವೇಳಾಪಟ್ಟಿ:

ಕ್ರಮ ಸಂಖ್ಯೆ ದಿನಾಂಕ ಪಂದ್ಯ ಸ್ಥಳ
1 ಅಕ್ಟೋಬರ್ 8 ಭಾರತ vs ಆಸ್ಟ್ರೇಲಿಯಾ ಚೆನ್ನೈ
2 ಅಕ್ಟೋಬರ್ 11 ಭಾರತ vs ಅಫ್ಘಾನಿಸ್ತಾನ ದೆಹಲಿ
3 ಅಕ್ಟೋಬರ್ 15 ಭಾರತ vs ಪಾಕಿಸ್ತಾನ ಅಹಮದಾಬಾದ್
4 ಅಕ್ಟೋಬರ್ 19 ಭಾರತ vs ಬಾಂಗ್ಲಾದೇಶ ಪುಣೆ
5 ಅಕ್ಟೋಬರ್ 22 ಭಾರತ vs ನ್ಯೂಜಿಲೆಂಡ್ ಧರ್ಮಶಾಲಾ
6 ಅಕ್ಟೋಬರ್ 29 ಭಾರತ vs ಇಂಗ್ಲೆಂಡ್ ಲಕ್ನೋ
7 ನವೆಂಬರ್ 02 ಭಾರತ vs ಕ್ವಾಲಿಫೈಯರ್ 2 ಮುಂಬೈ
8 ನವೆಂಬರ್ 05 ಭಾರತ vs ದಕ್ಷಿಣ ಆಫ್ರಿಕಾ ಕೋಲ್ಕತ್ತಾ
9 ನವೆಂಬರ್ 11 ಭಾರತ vs ಕ್ವಾಲಿಫೈಯರ್ 1 ಬೆಂಗಳೂರು

2019ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ 50 ಓವರ್‌ಗಳ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗಿದ್ದವು. ಭಾರತ ತಂಡವು 5 ವಿಕೆಟ್‌ಗೆ 336 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 113 ಎಸೆತಗಳಲ್ಲಿ ಅಮೋಘ 140 ರನ್ ಗಳಿಸುವ ಮೂಲಕ ಪಾಕಿಸ್ತಾನ ತಂಡವನ್ನು ಸೋಲಿಸಲು ನೆರವಾದರು.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಆತಿಥೇಯ ಭಾರತ ತಂಡ ತನ್ನ ಆರಂಭಿಕ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

ದಶಕದ ನಂತರ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಭಾರತ ತಂಡಕ್ಕೆ ಇದು ಉತ್ತಮ ಅವಕಾಶವಾಗಿದ್ದು, ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದರೆ, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದಿನಿಂದ ಐಸಿಸಿ ಪ್ರಶಸ್ತಿ ಬರ ಎದುರಿಸುತ್ತಿದೆ.

Story first published: Tuesday, June 27, 2023, 13:52 [IST]
Other articles published on Jun 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+