India Squad For Asia Cup 2023: ಈ ದಿನಾಂಕದಂದು ಭಾರತ ತಂಡ ಪ್ರಕಟ; ಈ ಕಾರಣದಿಂದ ವಿಳಂಬ!
ಆಗಸ್ಟ್ 30ರಿಂದ ಆರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪುರುಷರ ಆಯ್ಕೆ ಸಮಿತಿಯು ಆಗಸ್ಟ್ 20ರ ಭಾನುವಾರದಂದು ಭಾರತ ತಂಡವನ್ನು ಪ್ರಕಟಿಸಲು ಸಿದ್ಧವಾಗಿದೆ.
ಈಗಾಗಲೇ ಏಷ್ಯಾ ಕಪ್ 2023ರಲ್ಲಿ ಭಾಗವಹಿಸುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ತಮ್ಮ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಿವೆ. ಆದರೆ, ಭಾರತ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ತಮ್ಮ ತಂಡವನ್ನು ಪ್ರಕಟಿಸಬೇಕಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಶುಕ್ರವಾರದಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಿಟ್‌ನೆಸ್ ಅನ್ನು ದೃಢಪಡಿಸಿಕೊಳ್ಳಲು ಭಾರತೀಯ ಆಯ್ಕೆ ಸಮಿತಿಯು ಕಾಯುತ್ತಿರುವ ಕಾರಣ, ಏಷ್ಯಾ ಕಪ್ 2023ರ ಭಾರತ ತಂಡದ ಆಯ್ಕೆ ವಿಳಂಬವಾಗಿದೆ.

"2023ರ ಏಷ್ಯಾ ಕಪ್‌ಗೆ ಭಾರತ ತಂಡವನ್ನು ಯಾವಾಗ ಅಂತಿಮಗೊಳಿಸಲಾಗುತ್ತದೆ ಎಂಬುದರ ಕುರಿತು ಆಯ್ಕೆ ಸಮಿತಿಯು ಇನ್ನೂ ಮಾಹಿತಿಯನ್ನು ನೀಡಿಲ್ಲ. ರಾಹುಲ್ ದ್ರಾವಿಡ್ ಮತ್ತು ತಂಡ ಭಾರತಕ್ಕೆ ಮರಳಿದ ನಂತರದ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ," ಎಂದು ನಿರೀಕ್ಷಿಸಲಾಗಿದೆ.
"ಐರ್ಲೆಂಡ್‌ನಲ್ಲಿ ನಡೆಯುವ ಮೊದಲ ಟಿ20 ಪಂದ್ಯದ ನಂತರ ಆಯ್ಕೆಯು ಸಭೆ ಸೇರಬಹುದು ಎಂದು ಕೆಲವು ಮೂಲಗಳು ತಿಳಿಸಿವೆ. ಈ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ಸುಮಾರು 11 ತಿಂಗಳ ನಂತರ ಆಟಕ್ಕೆ ಮರಳಲಿದ್ದಾರೆ," ಎಂದು ಕ್ರಿಕ್‌ಬಜ್ ವರದಿ ಹೇಳಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತೀಯ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸದಿದ್ದರೂ, ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧದ ಭಾರತದ ಎರಡನೇ ಟಿ20 ಪಂದ್ಯದ ವೇಳೆ ಭಾನುವಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಜಸ್ಪ್ರೀತ್ ಬುಮ್ರಾ ಹೊರತಾಗಿ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್ ಬ್ಯಾಟರ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್‌ನ ಬಗ್ಗೆ ಬಿಸಿಸಿಐ ಆಯ್ಲೆ ಸಮಿತಿ ಇನ್ನೂ ಸ್ಪಷ್ಟತೆ ಬಯಸುತ್ತಿದ್ದಾರೆ.
ರಾಹುಲ್ ಮತ್ತು ಅಯ್ಯರ್ ಇಬ್ಬರೂ ಈ ವಾರದ ಆರಂಭದಲ್ಲಿ ಅಭ್ಯಾಸ ಪಂದ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಸಂಪೂರ್ಣ 50 ಓವರ್‌ಗಳ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂಲಕ ಫಿಟ್‌ನೆಸ್ ಸಾಬೀತುಪಡಿಸಲು ಪ್ರಯತ್ನಿಸಿದರು.
"ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ಎನ್‌ಸಿಎ ವ್ಯವಸ್ಥಾಪಕರಿಂದ ಭಾರತೀಯ ಆಯ್ಕೆಗಾರರಿಗೆ ಯಾವುದೇ ಅಧಿಕೃತ ಸಂವಹನ ರವಾನೆಯಾಗಿಲ್ಲ," ಎನ್ನಲಾಗಿದೆ.
"ಯಾವುದೇ ಆಟಗಾರರು ಪಂದ್ಯದ ಫಿಟ್‌ನೆಸ್ ಅನ್ನು ಸಾಧಿಸಿಲ್ಲ ಎಂದು ಸೂಚಿಸದಿದ್ದರೂ, ಎನ್‌ಸಿಎಯಿಂದ ಔಪಚಾರಿಕ ಅನುಮೋದನೆ ಇನ್ನೂ ಬಾಕಿ ಉಳಿದಿದೆ. ಆಯ್ಕೆ ಸಮಿತಿ ಸಭೆಗೆ ಮುಂಚಿತವಾಗಿ ಬಿಸಿಸಿಐ ಮತ್ತು ಆಯ್ಕೆಗಾರರಿಗೆ ಎನ್‌ಸಿಎ ತಿಳಿಸುತ್ತದೆ ಎಂಬ ನಿರೀಕ್ಷೆಯಿದೆ," ಎಂದು ಕ್ರಿಕ್‌ಬಜ್ ವರದಿ ತಿಳಿಸಿದೆ.
ಭಾರತ ತಂಡ ತನ್ನ 2023ರ ಏಷ್ಯಾ ಕಪ್ ಅಭಿಯಾನವನ್ನು ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆರಂಭಿಸಲಿದೆ.
ಏಷ್ಯಾ ಕಪ್ 2023: ನೇಪಾಳ ತಂಡ
ರೋಹಿತ್ ಪೌಡೆಲ್ (ನಾಯಕ), ಮೊಹಮ್ಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜ್‌ಬನ್ಶಿ, ಭೀಮ್ ಶರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲುಮಿಚ್ಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ಕಿಶೋರ್ ಮಹತೋ, ಸಂದೀಪ್ ಜೋರಾ, ಅರ್ಜುನ್ ಸೌದ್, ಶ್ಯಾಮ್ ಧಾಕಲ್.
ಏಷ್ಯಾ ಕಪ್ 2023: ಪಾಕಿಸ್ತಾನ ತಂಡ
ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ (ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಅಫ್ರಿದಿ.
ಏಷ್ಯಾ ಕಪ್ 2023: ಬಾಂಗ್ಲಾದೇಶ ತಂಡ
ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಂಝಿದ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೇಖ್ ಮಹೆದಿ, ನಸುಮ್ ಅಹ್ಮದ್, ಶಮೀಮ್ ಹೊಸೈನ್, ಅಫೀಫ್ ಹೊಸೈನ್, ಶೋರಿಫುಲ್ ಇಸ್ಲಾಂ, ಎಬಾಡೋಟ್ ಹೊಸೈನ್, ನಯಿಮ್ ಶೇಖ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications