ಭಾರತ, ಆಸ್ಟ್ರೇಲಿಯಾ ನಡುವಣ ಟಿ20 ದಾಖಲೆಗಳು ಹೇಗಿದೆ? ಇಲ್ಲಿದೆ ಮಾಹಿತಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಕ್ತಾಯವಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-2 ರಿಂದ ಸರಣಿಯನ್ನು ಸೋತಿದೆ. ಈಗ ಎಲ್ಲರ ಚಿತ್ತ ಟಿ20 ಸರಣಿಯ ಮೇಲೆ ನೆಟ್ಟಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೇಲೆ ನೆಟ್ಟಿವೆ. ಉಭಯ ತಂಡಗಳಲ್ಲೂ ಪಂದ್ಯದ ಗತಿಯನ್ನೇ ಬದಲಿಸುವ ಸ್ಟಾರ್ ಆಟಗಾರರು ಇದ್ದಾರೆ. ಉಭಯ ತಂಡಗಳ ಟಿ20 ದಾಖಲೆ ಹೇಗಿದೆ? ಆ ಬಗ್ಗೆ ವರದಿ ಇಲ್ಲಿದೆ.
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಮೋಘ ಆಟವನ್ನು ಈ ಹಿಂದಿನಿಂದಲೂ ಆಡುತ್ತಾ ಬಂದಿದೆ. ಆದರೆ ಟಿ20 ಕ್ರಿಕೆಟ್ ಅಂದಾಗ ಭಾರತದ ಕೈ ಕೊಂಚ ಮೇಲಾಗುತ್ತದೆ. ಇದುವರೆಗೆ ಉಭಯ ತಂಡಗಳು ಒಟ್ಟು 32 ಬಾರಿ ಮೈದಾನದಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 20 ಪಂದ್ಯಗಳನ್ನು ಗೆದ್ದರೆ, ಆಸೀಸ್ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ಟೀಮ್ ಇಂಡಿಯಾ, ಚುಟುಕು ಫಾರ್ಮೆಟ್‌ನಲ್ಲಿ ಅಬ್ಬರಿಸಿದೆ ಎಂದು ಹೇಳಬಹುದು.

ಉಭಯ ತಂಡಗಳ ನಡುವೆ ಕೊನೆಯ ಟಿ20 ಪಂದ್ಯ 2024ರಲ್ಲಿ ನಡೆದಿತ್ತು. ಈ ವೇಳೆ ಭಾರತ 24 ರನ್‌ಗಳಿಂದ ಪಂದ್ಯವನ್ನು ಗೆದ್ದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 205 ರನ್‌ಗಳಿಸಿತ್ತು. ಈ ಪಂದ್ಯದಲ್ಲಿ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ 92 ರನ್ ಬಾರಿಸಿ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಸವಾಲಿನ ಗುರಿಯನ್ನು ಹಿಂಬಾಲಿಸಿದ ಆಸೀಸ್ ಕೇವಲ 181 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
2007ರಲ್ಲಿ ಮೊದಲ ಫೈಟ್
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ 2007ರಲ್ಲಿ ಫೈಟ್ ನಡೆಸಿದ್ದವು. ಈ ಪಂದ್ಯದಲ್ಲೂ ಭಾರತ 15 ರನ್ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಭಾರತ ಪರ 30 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಒಳಗೊಂಡಂತೆ 70 ರನ್ ಬಾರಿಸಿದ್ದರು. ಈ ಬಾರಿ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದ ಭಾರತ ತಂಡದಲ್ಲೂ ಸ್ಟಾರ್ ಭರವಸೆಯ ಆಟಗಾರರು ಇದ್ದಾರೆ. ಇವರು ಆಸೀಸ್ ಬೌಲರ್‌ಗಳ ಹೆಡೆ ಮುರಿ ಕಟ್ಟಬಹುದು. 5 ಪಂದ್ಯಗಳ ಟಿ20 ಸರಣಿಯಲ್ಲಿ ಯಾರಾ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತ ಸದ್ಯ ಭರ್ಜರಿ ಲಯದಲ್ಲಿದೆ. ಭಾರತ ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ತಂಡದ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿದ್ದರು. ಹೀಗಾಗಿ ಸೂರ್ಯ ಪಡೆಯ ಯುವ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications